Accused Arrest: ಕೊನೆಗೂ ಸಿಕ್ಕಿಬಿದ್ದ ಆಯಸಿಡ್ ನಾಗ; ಆಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿ ಅಡಗಿ ಕುಳಿತ್ತಿದ್ದ ಆರೋಪಿ
ಅಪ್ಪಟ ದೈವ ಭಕ್ತನಾಗಿದ್ದ ಆರೋಪಿ ನಾಗೇಶ್, ದೇವಸ್ಥಾನ, ಮಠ ರೌಂಡ್ಸ್ ಹೋಗ್ತಿದ್ದ. ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ರೂಢಿ ಕೂಡ ಈತನಿಗಿತ್ತು. ಪೊಲೀಸರ ತನಿಖೆ ವೇಳೆ ಆರೋಪಿ ಮಠ, ಮಂದಿರಗಳಲ್ಲಿ ಇರೋ ಬಗ್ಗೆ ಹೆಚ್ಚು ಗುಮಾನಿ ಇತ್ತು. ಈ ಹಿನ್ನೆಲೆ ಪೊಲೀಸರು, ತಮಿಳುನಾಡು, ಆಂಧ್ರ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ರು. ಬಳಿ ಈತ ತಮಿಳುನಾಡಿನಲ್ಲಿ ಅಡಗಿ ಕುಳಿತಿರೋದು ಗೊತ್ತಾಗಿದೆ.
ಆಯಸಿಡ್ ದಾಳಿಗೊಳಗಾದ ಯುವತಿ ಚೇತರಿಕೆ
ಆಯಸಿಡ್ ದಾಳಿಗೊಳಗಾಗಿ ಬರೋಬ್ಬರಿ 16 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ, ಇದೀಗ ಚೇತರಿಸಿಕೊಂಡಿದ್ದಾಳೆ. ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ವಾರ್ಡ್ಗೆ ಯುವತಿಯನ್ನು ಶಿಫ್ಟ್ ಮಾಡಲಾಗಿದೆ. ಸ್ಪೆಷಲ್ ಬರ್ನಿಂಗ್ ವಾರ್ಡ್ ಯುವತಿಯನ್ನ ಶಿಫ್ಟ್ ಮಾಡಲಾಗಿದೆ. ಯುವತಿಗೆ ಇನ್ಫೆಕ್ಷನ್ ಆಗದಂತೆ ವೈದ್ಯರ ತಂಡ ನಿರಂತರ ನಿಗಾವಹಿಸಿದ್ದಾರೆ. ಸದ್ಯ ಕುಟುಂಬಸ್ಥರ ಜೊತೆ ಯುವತಿ ಮಾತನಾಡುತ್ತಿದ್ದಾರೆ.
10% ಮಾತ್ರ ಸ್ಕಿನ್ ಪ್ಲಾಂಟೇಷನ್ ಸರ್ಜರಿ
ಯುವತಿ ಲಘು ಆಹಾರವನ್ನು ತೆಗೆದುಕೊಳ್ತಿದ್ದಾರೆ. ಅನ್ನ ಹಾಗೂ ಮೃದು ಆಹಾರವನ್ನ ಸ್ವಲ್ಪ ಸ್ವಲ್ಪವೇ ಸೇವಿಸುತ್ತಿದ್ದಾರೆ. ಡ್ರೈ ಫ್ರೂಟ್ಸ್ ಪುಡಿ ಮಾಡಿ ಮೃದು ಆಹಾರದ ಜೊತೆ ಬೆರೆಸಿ ತಿನ್ನಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇನ್ನೂ 10% ಮಾತ್ರ ಸ್ಕಿನ್ ಪ್ಲಾಂಟೇಷನ್ ಸರ್ಜರಿ ಬಾಕಿ ಇದೆ. ಇನ್ನೂ ಸ್ವಲ್ಪ ಚೇತರಿಸಿಕೊಂಡ ಬಳಿಕ ವೈದ್ಯರು ಉಳಿದ ಸರ್ಜರಿ ಮಾಡಲಿದ್ದಾರೆ. ಯುವತಿ ಚೇತರಿಕೆಯಿಂದ ಕುಟುಂಬಸ್ಥರು ತುಸು ನೆಮ್ಮದಿ ಕಂಡಿದ್ದಾರೆ. ಏಪ್ರಿಲ್ 28 ರಂದು ಯುವತಿ ಮೇಲೆ ಆಯಸಿಡ್ ಎರಚಿದ್ದ ನಾಗೇಶ, 16 ದಿನಗಳಿಂದ ಸೇಂಟ್ ಜಾನ್ಸ್ ಅಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಯಸಿಡ್ ದಾಳಿ ಸಂತ್ರಸ್ತಗೆ ನಿವೇಶನ
ರಾಜ್ಯದಲ್ಲಿ ಆಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ತಲಾ ₹ 5 ಲಕ್ಷ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಉದ್ಘಾಟನೆ ಮತ್ತು ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಪರಿಷ್ಕೃತ ದರದ ಪಿಂಚಣಿ ಆದೇಶ ವಿತರಿಸಿದ ಬಳಿಕ ಅವರು ಮಾತನಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಆಯಸಿಡ್ ದಾಳಿ ಸಂತ್ರಸ್ತರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಮೊತ್ತವನ್ನು ₹3,000ದಿಂದ ₹10,000ಕ್ಕೆ ಹೆಚ್ಷಿಸಲಾಗಿದೆ. ಸಮಾರಂಭದಲ್ಲಿ ಕೆಲವು ಸಂತ್ರಸ್ತರಿಗೆ ಮುಖ್ಯಮಂತ್ರಿ ಪಿಂಚಣಿ ಆದೇಶ ವಿತರಿಸಿದರು. ಆಗ ಸಂತ್ರಸ್ತೆಯರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಂಡರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಆಯಸಿಡ್ ದಾಳಿಯ ಸಂತ್ರಸ್ತರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಘೋಷಣೆ ಮಾಡಿದರು.