fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Crime NewsKarnataka News

ಪ್ರೀತಿ ನಿರಾಕರಿಸಿದಕ್ಕೆ ಯುವತಿ ಮೇಲೆ ಆಯಸಿಡ್ ಎರಚಿದ್ದ ಆರೋಪಿ ಆಯಸಿಡ್ ತರಿಸಿದ್ದು ಹೇಗೆ? ಈ ಹೀನಾಯ ಕೃತ್ಯವೆಸಗಲು ಹೇಗೆಲ್ಲಾ ಪ್ಲಾ‌ನ್ ಮಾಡಿದ್ದ ಗೊತ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಹೌಸ್ ಕ್ಲೀನಿಂಗ್ ಕಂಪೆನಿ, ಸೋಲಾರ್ ಕಂಪೆನಿ ಲೆಟರ್ ಹೆಡ್ ಬಳಸಿ ಇ-ಮೇಲ್ ಮೂಲಕ ಆಯಸಿಡ್ ಖರೀದಿಸಿದ್ದ. ಏಪ್ರಿಲ್ 20 ರಂದು ಆಯಸಿಡ್ ಸಪ್ಲೈ ತೆಗೆದುಕೊಂಡಿದ್ದ ನಾಗ, ಇದಕ್ಕೂ ಮುನ್ನಾ 2020 ರಲ್ಲೂ ಇದೇ ಮಾದರಿಯಲ್ಲಿ ಆಯಸಿಡ್ ಪಡೆದುಕೊಂಡಿದ್ದೆ, ಆದರೆ ಕೃತ್ಯ ಎಸಗಿರಲಿಲ್ಲ, ದಾಳಿ ನಡೆಸಿರಲಿಲ್ಲ, ಎರಡನೇ ಬಾರಿ ಆಯಸಿಡನ್ನು 8 ಲೀಟರ್ ಮತ್ತು ಅರ್ಧ ಲೀಟರ್ನ ಎರಡು ಬಾಟಲ್ ಗಳಲ್ಲಿ ಪಡೆದುಕೊಂಡಿದ್ದೆ.

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆಯಸಿಡ್ (Acid Attack) ಎರಚಿ ಅಮಾನವೀಯ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ ಖತರ್ನಾಕ್ ಆರೋಪಿ ಹದಿನಾರು ದಿನಗಳ ಬಳಿಕ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಇಷ್ಟಕ್ಕೂ ಈ ಖತರ್ನಾಕ್ ಗೆ ಆಯಸಿಡ್ ಸಿಕ್ಕಿದ್ದೇಗೆ? ಕೃತ್ಯ ಎಸಗಿದ್ದೇಗೆ? ಹೀನಾಯ ಕೃತ್ಯವೆಸಗಲು ಹೇಗೆಲ್ಲಾ ಪ್ಲಾ‌ನ್ ಮಾಡಿದ್ದ. ಯುವತಿಯನ್ನ ಹೇಗೆಲ್ಲಾ ಕಾಡಿದ್ದ ಅನ್ನೋದರ ಡಿಟೇಲ್ಸ್ ಇಲ್ಲಿದೆ.

ಇ-ಮೇಲ್ ಮೂಲಕ ಬರೋಬ್ಬರಿ 8 ಲೀಟರ್ ಸಲ್ಫೂರಿಕ್ ಆಯಸಿಡ್ ತರಿಸಿದ್ದ
ಏಪ್ರಿಲ್ 28 ರಂದು ಕಾಮಾಕ್ಷಿಪಾಲ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಸಮೀಪ ಯುವತಿ ಮೇಲೆ ಆಯಸಿಡ್ ಎರಚಿ, ಹೇಯ ಕೃತ್ಯ ಎಸಗಿ ತಮಿಳುನಾಡಿಗೆ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದ ನಾಗೇಶ್ ಅಲಿಯಾಸ್ ಖತರ್ನಾಕ್ ಆಯಸಿಡ್ ನಾಗ ಕೊನೆಗೆ ಅಂದರ್ ಆಗಿದ್ದಾನೆ. ಈ ಸಂಬಂಧ ಕಾಮಕ್ಷಿಪಾಳ್ಯ ಪೊಲೀಸರ ಬಳಿ ಆಯಸಿಡ್ ಪರ್ಚೇಸ್ ಮಾಡಿದ್ದ ಕುರಿತು ಬಾಯ್ಬಿಟ್ಟಿದ್ದಾನೆ. ಹೌಸ್ ಕ್ಲೀನಿಂಗ್ ಕಂಪೆನಿ, ಸೋಲಾರ್ ಕಂಪೆನಿ ಲೆಟರ್ ಹೆಡ್ ಬಳಸಿ ಇ-ಮೇಲ್ ಮೂಲಕ ಆಯಸಿಡ್ ಖರೀದಿಸಿದ್ದ. ಏಪ್ರಿಲ್ 20 ರಂದು ಆಯಸಿಡ್ ಸಪ್ಲೈ ತೆಗೆದುಕೊಂಡಿದ್ದ ನಾಗ, ಇದಕ್ಕೂ ಮುನ್ನಾ 2020 ರಲ್ಲೂ ಇದೇ ಮಾದರಿಯಲ್ಲಿ ಆಯಸಿಡ್ ಪಡೆದುಕೊಂಡಿದ್ದೆ, ಆದರೆ ಕೃತ್ಯ ಎಸಗಿರಲಿಲ್ಲ, ದಾಳಿ ನಡೆಸಿರಲಿಲ್ಲ, ಎರಡನೇ ಬಾರಿ ಆಯಸಿಡನ್ನು 8 ಲೀಟರ್ ಮತ್ತು ಅರ್ಧ ಲೀಟರ್ನ ಎರಡು ಬಾಟಲ್ ಗಳಲ್ಲಿ ಪಡೆದುಕೊಂಡಿದ್ದೆ. ಸಂತ್ರಸ್ಥೆಗೆ ಆಯಸಿಡ್ ಹಾಕುವ ಕುರಿತು ಏಪ್ರಿಲ್ 27 ರಂದು ಬೆದರಿಕೆವೊಡ್ಡಿದ್ದು, ಸಂತ್ರಸ್ಥೆ ಈ ಕುರಿತು ಮನೆಯ ಸದಸ್ಯರಿಗೆ ಮಾಹಿತಿ ನೀಡಿದ್ರು. ಆಕೆ ಮನೆಯವ್ರು ನನ್ನ ಅಣ್ಣನ ಸಂಪರ್ಕಿಸಿ ವಿಚಾರ ತಿಳಿಸಿಬಿಟ್ಟಿದ್ದರು. ನನ್ನ ಅಣ್ಣ ಈ ವಿಚಾರವಾಗಿ ಕೇಳಿದ್ದ, ಇದೇ ಕೋಪದಲ್ಲಿ ಮರುದಿನ ಏಪ್ರಿಲ್ 28 ರಂದು ಆಯಸಿಡ್ ದಾಳಿ ಮಾಡುವುದಾಗಿ ಹೇಳಿ ಅರ್ಧ ಲೀಟರ್ ಆಯಸಿಡ್ ಎರಚಿ ಎಸ್ಕೇಪ್ ಆಗಿದ್ದಾಗಿ ಆರೋಪಿ ನಾಗೇಶ್ ಮಾಹಿತಿ ಬಾಯ್ಬಿಟ್ಟಿದ್ದಾನೆ.

ಘಟನೆ ನಡೆದ ಕೂಡಲೇ ಆರೋಪಿ ಪತ್ತೆಗೆ ಕಾರ್ಯಚರಣೆ ತೀವ್ರಗೊಳಿಸಲಾಗಿತ್ತು.
ಆರೋಪಿ ನಾಗೇಶ್ @ ಆಯಸಿಡ್ ನಾಗ ಹಿನ್ನಲೆ ಕೆದಕಿದ ಪೊಲೀಸರಿಗೆ, 7 ವರ್ಷಗಳಿಂದ ಸಂತ್ರಸ್ಥೆ ಮತ್ತು ಆರೋಪಿ ಮನೆ ಒಂದೇ ಏರಿಯಾದಲ್ಲಿತ್ತು. ಇವರು ನೆರೆಹೊರೆಯವರಾಗಿದ್ದರು. ಆ ಬಳಿಕ ಮನೆ ಶಿಫ್ಟ್ ಮಾಡಿದ್ದ ನಾಗೇಶ್ 7 ವರ್ಷದ ಅವಧಿಯಲ್ಲಿ ಸ್ನೇಹಿತ ಮನೆಯಲ್ಲಿ ವಾಸಮಾಡ್ತಿದ್ದ. ಸ್ನೇಹಿತನ ಮೂಲಕ ಸಂತ್ರಸ್ಥೆ ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳ ವಿಷಯವನ್ನು ಪಡೆದು ಕೊಳ್ತಿದ್ದ. ಆಕೆಯನ್ನ ಕಳೆದ ಏಳು ವರ್ಷಗಳಿಂದ ಹಿಂಬಾಲಿಸ್ತಿದ್ದ. ಸಂತ್ರಸ್ಥೆ ಅಕ್ಕನ ಮದುವೆ ಫಿಕ್ಸ್ ಆಗಿರುವ ವಿಚಾರ ಗೊತ್ತಾಗಿತ್ತು. ಅಕ್ಕನ ಮದುವೆ ಬಳಿಕ ಸಂತ್ರಸ್ಥೆ ಮದುವೆ ಮಾಡಿಬಿಡ್ತಾರೆ ಅಂತಾ ಕಾಡಲು ಶುರುಮಾಡಿದ್ದ. ಹೌಸ್ ಕ್ಲೀನಿಂಗ್ ಕಂಪೆನಿ, ಸೋಲಾರ್ ಕಂಪೆನಿ ಲೆಟರ್ ಹೆಡ್ ಬಳಸಿ ಇ-ಮೇಲ್ ಬಳಸಿ ಆಯಸಿಡ್ ಪಡೆದುಕೊಂಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಏಪ್ರಿಲ್ 20 ರಂದು ಆಯಸಿಡ್ ಸಪ್ಲೈ ತೆಗೆದುಕೊಂಡಿದ್ದವ, ಘಟನೆ ನಡೆದ ದಿನದಿಂದ ಬೆಳಗ್ಗೆ-ಸಂಜೆ ಪಶ್ಚಿಮ‌ ವಿಭಾಗ ಹೆಚ್ವುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನ ನೀಡ್ತಿದ್ದರು. ಆರೋಪಿ ಪತ್ತೆಹಚ್ಚಲು ಶ್ರಮವಹಿಸಿದ ಪಶ್ಚಿಮ ವಿಭಾಗದ ಪೊಲೀಸರನ್ನ ನಾನು ಹೆಮ್ಮೆಯಿಂದ ನಮ್ಮ ಪೊಲೀಸರು ಕಾರ್ಯಚರಣೆ ಶ್ಲಾಘಿಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿದ್ದಾರೆ.

ಅದೇನೆ ಇರಲಿ, ಅಕ್ಷಮ್ಯ ಕೃತ್ಯ ಎಸಗಿ ನೆರೆಯ ತಮಿಳುನಾಡಿನಲ್ಲಿ ಖಾವಿ ಧರಿಸಿ ಅವಿತಿದ್ದ ಕ್ರಿಮಿ ಅಂದರ್ ಆಗಿದ್ದಾನೆ. ಆಯಸಿಡ್ ದಾಳಿಗೊಳಗಾದ ಸಂತ್ರಸ್ಥ ಹೆಣ್ಣು ಜೀವ ನೋವಿನಲ್ಲಿ ನರಳುತ್ತಿದ್ದಾಳೆ. ಆರೋಪಿ ಸಿಕ್ಕಿದಕ್ಕೆ ನೋವಿನಲ್ಲೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಅಮಾನವೀಯ ಕೃತ್ಯ ವೆಸಗಿದ ಆರೋಪಿಗೆ ತಕ್ಕಶಿಕ್ಷೆ ಸಿಗಲೆಂದು ಪೋಷಕರ ಎದುರು ಮರುಗುತ್ತಾ ಚೇತರಿಕೆ ಕಾಣ್ತಿದಾಳೆ. ಒಟ್ನಲ್ಲಿ ಸೆರೆಸಿಕ್ಕ ಬಳಿಕ ಮಿಸುಕಾಡಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕೆ ಆತ್ಮರಕ್ಷಣೆಗೆ ಪೊಲೀಸರು ಗುಂಡುಹಾರಿಸಿ ಬಂಧಿಸಿ, ಮಕಾಡೆ ಮಲಗಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: