Asha Workers Protest: ಮತ್ತೆ ಹೋರಾಟ ನಡೆಸಲು ಆಶಾ ಕಾರ್ಯಕರ್ತೆಯರು ಸಜ್ಜು – ನಾಳೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ

ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚು ಮಾಡಿಲ್ಲ, ಕೊಒರನಾ ಸಮಯದಲ್ಲಿ ಸೋಂಕು ಹರಡುವುದನ್ನ ತಡೆಯಲು ಕೊರೊನಾ ವಾರಿಯರ್ಸ್ ಆಗಿ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ಆದರೆ ಅದಕ್ಕೆ ಸರಿಯಾದ ಸಂಬಳವನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ ಎಂದು ಕಾರ್ಯಕರ್ತೆಯರು ಪರವಾಗಿ ಎಐಯುಟಿಯುಸಿ ಆಗ್ರಹ ಮಾಡಿದೆ.
ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 5 ಸಾವಿರ ಹಾಗೂ ಕೇಂದ್ರ ಸರ್ಕಾರ 3 ಪ್ರೋತ್ಸಾಹ ದನವನ್ನಿ ನಿಗಧಿ ಮಾಡಿದೆ. ಆದರೆ ಕೇಂದ್ರ ಸರ್ಕಾರದಿಂದ ನೀಡುವ ಹಣದಲ್ಲಿ ಕೇವಲ 650 ರೂಪಾಯಿ ಮಾತ್ರ ಸಿಗುತ್ತಿದೆ. ಇದು ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದಂತೆ, ಹಾಗಾಗಿ ಪ್ರೋತ್ಸಾಹ ಧನ ಹಾಗೂ ಗೌರವ ಧನವಾಗಿ ಎರಡನ್ನು ಸೇರಿಸಿ ಮಾಸಿಕ ವೇತನ ನೀಡಬೇಕು. ಅಲ್ಲದೇ ಈಗಾಗಲೇ ಆರ್ಸಿಹೆಚ್ ಪೋರ್ಟಲ್ ಡೇಟಾ ಎಂಟ್ರಿಯಲ್ಲಿ ಸಮಸ್ಯೆಯಾಗುತ್ತಿದೆ. ಆ ಸಮಸ್ಯೆಯನ್ನು ಬಗೆಹರಿಸಿ, ಆಶಾ ಕಾರ್ಯಕರ್ತೆಯರಿಗೆ ಉಂಟಾಗಿರುವ ನಷ್ಟವನ್ನು ಸರ್ಕಾರವೇ ಕೊಡಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಇನ್ನು ಪತ್ರಿಕೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗಿರಿಜಮ್ಮ, ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಹಗಲಿರುಳು ದುಡಿದರೂ ಅವರಿಗೆ ಸಿಗಬೇಕಾದ ಗೌರ ಸಿಗದಿರುವುದು ಶೋಚನೀಯ ಎಂದಿದ್ದಾರೆ.
ಈ ಮೊದಲು ಕೊರೋನಾ ಮೊದಲ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಸರ್ಕಾರ ಆಶಾ ಕಾರ್ಯಕರ್ತರನ್ನೂ ಕೋವಿಡ್ ವಾರಿಯರ್ ಎಂದು ಘೋಷಿಸಿತ್ತು. ಕೊರೋನಾ ಕೆಲಸದ ವೇಳೆ ಮೃತಪಟ್ಟರೆ 50 ಲಕ್ಷ ಪರಿಹಾರ ಮತ್ತು ಕೂಡಲೇ ಎಲ್ಲರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಕೊರೋನಾದಿಂದ ಈವರೆಗೆ 16 ಜನ ಆಶಾ ಕಾರ್ಯಕರ್ತರು ಮೃತಪಟ್ಟಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿತ್ತು. ಸರ್ಕಾರದ ಈ ನಡೆಯನ್ನು ವಿರೋಧಿಸಿ ಕಳೆದ ವರ್ಷ ಪ್ರತಿಭಟನೆ ಮಾಡಿದ್ದರು.