Karnataka News
ಐವತ್ತೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ
ಹಾವೇರಿ: ಐವತ್ತೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮ ಪಂಚಾಯತಿ ಪಿಡಿಓ ಸವಿತಾ ಯರೆಸೀಮೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪ್ಲಾಟುಗಳು ಖಾತೆ ಬದಲಾವಣೆಗೆ ಹಾವೇರಿ ನಗರದ ನಿವಾಸಿ ಮುರುಗೇಶ ಎಂಬುವರಿಂದ ಐವತ್ತೈದು ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ವೇಳೆ ಇವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಜಮೀನುಗಳ ಖಾತೆ ಬದಲಾವಣೆಗೆ ಮಾಡುವುದಕ್ಕಾಗಿ ತಮ್ಮಿಂದ ಇವರು ಲಂಚ ಕೇಳುತ್ತಿರುವ ಬಗ್ಗೆ ಮುರುಗೇಶ್ ಅವರು ದೂರು ದಾಖಲಿಸಿದ್ದರು.
ಎಸಿಬಿ ಡಿವೈಎಸ್ಪಿ ಗೋಪಿ.ಬಿ.ಆರ್, ಸಿಪಿಐಗಳಾದ ಬಸವರಾಜ ಬುದ್ನಿ, ಪ್ರಭಾವತಿ ಶೇತಸನದಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ. ಹಾವೇರಿ ಎಸಿಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.