Politics
ಈಗ ಕರ್ನಾಟಕದ ಶಾಸಕರ ಪರಿಷ್ಕೃತ ಮಾಸಿಕ ವೇತನವೆಷ್ಟು ಗೊತ್ತೇ?
ಬೆಂಗಳೂರು: ರಾಜ್ಯ ವಿಧಾನಸಭೆಯ ಸದಸ್ಯರ ವೇತನ ಪರಿಷ್ಕರಣೆಯಾಗಿದ್ದು, ಮಾಸಿಕ 2.05 ಲಕ್ಷ ರೂಪಾಯಿ ಪಡೆಯಲಿದ್ದಾರೆ.
ಫೆಬ್ರವರಿಯಲ್ಲಿ ಬಜೆಟ್ ಸೆಷನ್ ಗೂ ಮುನ್ನ ಕರ್ನಾಟಕ ವಿಧಾನಸಭೆ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ಉಭಯ ಸದನಗಳಲ್ಲಿಯೂ ಅಂಗೀಕರಿಸಲಾಗಿತ್ತು.
ಈ ತಿದ್ದುಪಡಿ ಕಾಯ್ದೆ ಅಂಗೀಕಾರಗೊಳ್ಳುವ ಮೂಲಕ ಶಾಸಕರ ವೇತನ, ಭತ್ಯೆಗಳಲ್ಲಿ ಶೇ.50 ರಷ್ಟು ಏರಿಕೆ ಮಾಡಲು ಉಭಯ ಸದನಗಳಲ್ಲಿಯೂ ಅನುಮೋದನೆ ದೊರೆತಿತ್ತು. ಅಷ್ಟೇ ಅಲ್ಲದೇ 5 ವರ್ಷಗಳಲ್ಲಿ ಒಮ್ಮೆ ಸ್ವಯಂ ಚಾಲಿತವಾಗಿ ಏರಿಕೆಗೂ ಈ ತಿದ್ದುಪಡಿ ಕಾಯ್ದೆಯ ಮೂಲಕ ಅನುಮೋದನೆ ನೀಡಲಾಗಿತ್ತು. ಏ.1, 2022 ರಿಂದ ಪರಿಷ್ಕೃತ ವೇತನ ಜಾರಿಗೆ ಬಂದಿದೆ.
ಶಾಸಕರ ಮೂಲ ವೇತನ 40,000 ರೂಪಾಯಿಗಳಿದ್ದು, ಕ್ಷೇತ್ರ ಭತ್ಯೆ 60,000, 60,000 ಕ್ಷೇತ್ರ ಪ್ರವಾಸ ಭತ್ಯೆ, 20,000 ರೂಪಾಯಿ ಸಿಬ್ಬಂದಿ, ಸಹಾಯಕರ ವೇತನ, 5,000 ರೂಪಾಯಿ ಪೋಸ್ಟಲ್ ಭತ್ಯೆ, 20,000 ರೂಪಾಯಿ ಫೋನ್ ಭತ್ಯೆಯನ್ನು ನಿಗದಿಪಡಿಸಲಾಗಿದೆ.