Shocking News: 10,000 ರೂ. ಹಣ, ಬಾತುಕೋಳಿ ಆಸೆ ಈಡೇರಿಸದಕ್ಕೆ ಕಸ್ಟಡಿಯಲ್ಲಿ ವ್ಯಕ್ತಿ ಕೊಲೆ: ಧಗಧಗಿಸಿದ ಪೊಲೀಸ್ ಠಾಣೆ! ಏನಿದು ಘಟನೆ?

ಅಸ್ಸಾಂ: 10,000 ರೂಪಾಯಿ ಮತ್ತು ಬಾತುಕೋಳಿಯ ಬೇಡಿಕೆಯನ್ನು ಈಡೇರಿಸದ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳು ಸ್ಥಳೀಯ ನಿವಾಸಿಯೊಬ್ಬನನ್ನು
ಕೊಂದಿದ್ದಾರೆ ಎಂದು ಆರೋಪಿಸಿ ಗುಂಪೊಂದು ಅಸ್ಸಾಂನ ಬಟಾದ್ರಬಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಇಲ್ಲಿನ ಸಲೋನಿಬರಿ ನಿವಾಸಿ ಸಫೀಕುಲ್ ಇಸ್ಲಾಂ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಶುಕ್ರವಾರ ರಾತ್ರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಪೊಲೀಸರು ಆತನನ್ನು ತಡೆದು 10,000 ರೂ ಮತ್ತು ಬಾತುಕೋಳಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಸಫೀಕುಲ್ ಅವರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದಾಗ, ಆತನನ್ನು ಬಂಧಿಸಿ ಹಣ ಮತ್ತು ಬಾತುಕೋಳಿಯನ್ನು ವ್ಯವಸ್ಥೆ ಮಾಡಲು ಅವರ ಕುಟುಂಬ ಸದಸ್ಯರನ್ನು ಕರೆಯುವಂತೆ ಹೇಳಿದ್ದರಂತೆ. ಈ ವೇಳೆ ಸಫೀಕುಲ್ ತನ್ನ ಹೆಂಡತಿಗೆ ಕರೆ ಮಾಡಿ ಹಣ ಮತ್ತು ಬಾತುಕೋಳಿಯನ್ನು ಪೊಲೀಸ್ ಠಾಣೆಗೆ ತರುವಂತೆ ಹೇಳಿದ್ದಾನೆ ಎಂದು ವರದಿಯಾಗಿದೆ.
ಆದಾಗ್ಯೂ, ಹೆಂಡತಿ ಬಾತುಕೋಳಿಯೊಂದಿಗೆ ಠಾಣೆಗೆ ಬಂದಳು. ಆದ್ರೆ, ಅವಳು ಹಣವನ್ನು ವ್ಯವಸ್ಥೆ ಮಾಡಲು ವಿಫಲವಾದಳು. ಈ ವೇಳೆ ಪೊಲೀಸರು ಸಫೀಕುಲ್ಗೆ ಆತನ ಪತ್ನಿಯ ಎದುರೇ ಥಳಿಸಿದ್ದಾರೆ. ಇದನ್ನು ನೋಡಲಾಗದೇ ಹೆಂಡತಿ ಹಣವನ್ನು ವ್ಯವಸ್ಥೆ ಮಾಡಲು ಅಲ್ಲಿಂದ ಹೊರಟೂ. ಆದರೆ ಅವಳು ಹಣದೊಂದಿಗೆ ಹಿಂದಿರುಗಿದಾಗ, ಅವಳ ಪತಿಯನ್ನು ನಾಗಾನ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಲಾಯಿತು. ಈ ವೇಳೆ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆ ತಲುಪಿದ ಪತ್ನಿಗೆ ಶವಗಾರದಲ್ಲಿ ಸಫೀಕುಲ್ ಶವ ಪತ್ತೆಯಾಗಿದೆ.
ಘಟನೆಯಿಂದ ರೊಚ್ಚಿಗೆದ್ದ ಸಫೀಕುಲ್ ಕುಟುಂಬಸ್ಥರು ನೂರಾರು ಗ್ರಾಮಸ್ಥರು ಸೇರಿ ಆತನ ಶವವನ್ನು ಬಟದ್ರಬಾ ಪೊಲೀಸ್ ಠಾಣೆಗೆ ತಂದು ಪ್ರತಿಭಟನೆ ಆರಂಭಿಸಿದರು. ಗುಂಪು ಮತ್ತು ಪೊಲೀಸರ ನಡುವಿನ ಮಾತಿನ ಚಕಮಕಿಯಲ್ಲಿ ಪ್ರತಿಭಟನೆ ನಡೆಸಿತು. ನಂತರ ಗುಂಪು ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿತು. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಪೊಲೀಸ್ ಠಾಣೆ ಹಾಗೂ ಕೆಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಪಡೆ ಪರಿಸ್ಥಿತಿಯನ್ನು ಹತೋಟಿಗೆ ತಂದಿತು.