ಅಸ್ಪೃಶ್ಯತೆ ಬೇಡ ಎಂದು ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್ ಅಹಮದ್ ಖಾನ್

ಬೆಂಗಳೂರು : ಅಸ್ಪೃಶ್ಯತೆ ಬೇಡ, ದಲಿತರು ಎಂದು ದೂರ ಇಡಬಾರದು, ನಾವೆಲ್ಲಾ ಒಂದೇ ಎಂದು ಕಾಂಗ್ರೆಸ್ ನಾಯಕ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ದಲಿತ ಸ್ವಾಮೀಜಿಯೊಬ್ಬರ ಎಂಜಲು ತಿನ್ನುವ ಮೂಲಕ ಸುದ್ದಿಯಾಗಿದ್ದಾರೆ.
ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾನ್ ಪ್ರಯುಕ್ತ ಬಿಬಿಎಂಪಿಯ ಪೌರ ಕಾರ್ಮಿಕರಿಗೆ ಇಂದು ಆಹಾರ ವಿತರಣೆ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಪಕ್ಕದಲ್ಲಿದ್ದ ಸ್ವಾಮೀಜಿಯೊಬ್ಬರಿಗೆ ಆಹಾರ ತಿನ್ನಿಸಿದರು. ಅವರ ಬಾಯಲ್ಲಿದ್ದ ಆಹಾರವನ್ನೇ ಮತ್ತೆ ವಾಪಸ್ ತೆಗೆದು ಜಮೀರ್ ತಾವು ತಿಂದಿದ್ದಾರೆ. ಆ ಬಳಿಕ ಆಕ್ರೋಶಿತರಾದಂತೆ ಕಂಡು ಬಂದ ಅವರು ಮೇಜನ್ನು ತಟ್ಟಿ ಇದು ನಮ್ಮ ದೇಶ ಕಣ್ರೀ ಎಂದರು.
ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು.
ನಾನು, ನೀವು, ಎಲ್ಲರೂ ಮನುಷ್ಯ ಜಾತಿ.
ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ.#ಸಾಮರಸ್ಯ #ಮಾನವೀಯತೆ pic.twitter.com/3qVCvA6XuO— B Z Zameer Ahmed Khan (@BZZameerAhmedK) May 22, 2022
ಜಾತಿ, ಧರ್ಮಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನಮ್ಮ ನಡುವಿನ ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮಗಳು ಎಂದಿಗೂ ಅಡ್ಡಬರಬಾರದು.ನಾನು, ನೀವು, ಎಲ್ಲರೂ ಮನುಷ್ಯ ಜಾತಿ.ಮನುಷ್ಯನಾಗಿ ಬಾಳುವುದೇ ನಿಜವಾದ ಧರ್ಮ ಎಂದು ಟ್ವೀಟ್ ಮಾಡಿದ್ದಾರೆ.