PM Narendra Modi: ಪ್ರಧಾನಿ ಮೋದಿ 8 ವರ್ಷಗಳಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ ಹಣ ಎಷ್ಟು? ಅಂಕಿ ಅಂಶ ನೋಡಿ
ಅಬಕಾರಿ ಸುಂಕ ಕಡಿತದ ಸಂಪೂರ್ಣ ಹೊರೆ ಕೇಂದ್ರ ಸರ್ಕಾರದ್ದು
ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಅಬಕಾರಿ ಸುಂಕ ಕಡಿತದ ಸಂಪೂರ್ಣ ಹೊರೆಯನ್ನು ಕೇಂದ್ರವು ಭರಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭಾನುವಾರ ( ಮೇ 22) ಖಚಿತಪಡಿಸಿದ್ದಾರೆ.
ಮೂಲ ಅಬಕಾರಿ ಸುಂಕ (BED), ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED), ರಸ್ತೆ ಮತ್ತು ಮೂಲಸೌಕರ್ಯ ಸೆಸ್ (RIC) ಮತ್ತು ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) ಒಟ್ಟಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂಪಿಸುತ್ತದೆ ಎಂದು ಹಣಕಾಸು ಸಚಿ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಅಬಕಾರಿ ಸುಂಕವನ್ನು ರಾಜ್ಯಗಳ ಜೊತೆ ಕೇಂದ್ರ ಸರ್ಕಾರವು ಹಂಚಿಕೊಳ್ಳಬಹುದಾಗಿದೆ. ಆದರೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED), ರಸ್ತೆ ಮತ್ತು ಮೂಲಸೌಕರ್ಯ ಸೆಸ್ಗಳನ್ನು ಹಂಚಿಕೊಳ್ಳಲಾಗದು ಎಂದು ಅವರು ಸರಣಿ ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
₹ 2,20,000 ಕೋಟಿ ಪರಿಣಾಮ
ಸುಂಕ ಕಡಿತವು ಕೇಂದ್ರ ಸರ್ಕಾರದ ಮೇಲೆ ವರ್ಷಕ್ಕೆ 1,00,000 ಕೋಟಿ ಹೊರೆಯಾಗಿ ಪರಿಣಾಮ ಬೀರುತ್ತದೆ. ಆದರೆ ನವೆಂಬರ್ 2021 ರಲ್ಲಿ ಸುಂಕ ಕಡಿತವು ಸರ್ಕಾರಕ್ಕೆ ವರ್ಷಕ್ಕೆ 20,000 ಕೋಟಿಗಳಷ್ಟು ಪರಿಣಾಮ ಬೀರಿತ್ತು ಎಂದು ಅವರು ಹೇಳಿದರು. ಈ ಎರಡು ಸುಂಕ ಕಡಿತದಿಂದಾಗಿ ಕೇಂದ್ರ ಸರ್ಕಾರದ ಒಟ್ಟು ಆದಾಯದ ವರ್ಷಕ್ಕೆ ₹ 2,20,000 ಕೋಟಿ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.
ಪೆಟ್ರೋಲ್ ಮೇಲೆ ಲೀಟರ್ಗೆ 8 ರೂ. ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 6 ರೂ. ಅಬಕಾರಿ ಸುಂಕ ಕಡಿತವು ಸಂಪೂರ್ಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್ನಡಿ (RIC) ತರಲಾಗಿದೆ ಎಂದು ಅವರು ಹೇಳಿದರು. ನವೆಂಬರ್ 2021 ರಲ್ಲಿಯೂ ಸಹ, ಪೆಟ್ರೋಲ್ನಲ್ಲಿ ಲೀಟರ್ಗೆ 5 ರೂ. ಮತ್ತು ಡೀಸೆಲ್ನಲ್ಲಿ ಲೀಟರ್ನ ಮೇಲೆ 10 ರೂ. ಕಡಿತವನ್ನು ಸಂಪೂರ್ಣವಾಗಿ ಆರ್ಐಸಿಯಲ್ಲಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಆದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳಬಹುದಾದ ಮೂಲ ಅಬಕಾರಿ ಸುಂಕವನ್ನು ಮುಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.