Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್

ಹಾಗೆ, ಹುಡುಗಾಟವಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದೀಗ ವೈರಲ್ ಆಗಿರುವ ವಿಡಿಯೋ ಸಾಕ್ಷಿ. ಬೋನ್ನಲ್ಲಿದ್ದ ಸಿಂಹವೊಂದನ್ನು (Lion) ಕೆಣಕಲು ಹೋದ ಪ್ರವಾಸಿಗ ಆ ಬೋನಿನ ಒಳಗೆ ಕೈ ಹಾಕಿ, ಸಿಂಹವನ್ನು ಕೆಣಕುತ್ತಿದ್ದ. ಇದರಿಂದ ಕೋಪಗೊಂಡ ಸಿಂಹ ಒಂದೆರಡು ಬಾರಿ ಆತನನ್ನು ನೋಡಿ ಘರ್ಜಿಸಿತು. ಅದರಿಂದ ಇನ್ನಷ್ಟು ಉದ್ರೇಕಿತನಾದ ಯುವಕ ತನ್ನ ಕೈಯನ್ನು ಬೋನಿನ ಒಳಗೆ ಹಾಕಿ ಮತ್ತೆ ಕೆಣಕಿದ. ಕೋಪಗೊಂಡಸಿಂಹಆತನ ಕೈಗಳನ್ನು ಕಚ್ಚಿ ಹಿಡಿದು ತನ್ನ ಆಕ್ರೋಶ ಹೊರಹಾಕಿದೆ. ಈ ಆಘಾತಕಾರಿ ವಿಡಿಯೋ (Shocking Video) ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ.
ಶುಕ್ರವಾರ ಸೇಂಟ್ ಎಲಿಜಬೆತ್ನ ಜಮೈಕಾ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಸಿಂಹದ ಪಂಜರದ ಒಳಗೆ ಕೈ ಹಾಕಿದ ಘಟನೆ ನಡೆದಿದೆ. ಮನುಷ್ಯನ ನಿರಂತರ ಚುಡಾಯಿಸುವಿಕೆಯಿಂದ ಕೋಪಗೊಂಡ ಸಿಂಹ ತನ್ನ ಹಲ್ಲುಗಳನ್ನು ತೋರಿಸುತ್ತಾ, ಘರ್ಜಿಸುತ್ತಾ ಆ ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿತು. ಆದರೆ, ಆ ವ್ಯಕ್ತಿ ಅದರತ್ತ ಗಮನ ಕೊಡಲಿಲ್ಲ. ಮತ್ತೆ ಮತ್ತೆ ಆತ ಸಿಂಹವನ್ನು ಛೇಡಿಸತೊಡಗಿದಾಗ ಕೋಪಗೊಂಡ ಸಿಂಹವು ಆ ಯುವಕನ ಬೆರಳನ್ನು ಕಚ್ಚಿತು. ಮನುಷ್ಯನ ಬೆರಳು ಸಿಂಹದ ಬಾಯಿಯಲ್ಲಿ ಸಿಲುಕಿಕೊಂಡಿತು.
ಇದರಿಂದ ಗಾಬರಿಯಾದ ಯುವಕ ತನ್ನ ಕೈಗಳನ್ನು ಹೊರಗೆ ಎಳೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಬಿಡದ ಸಿಂಹ ಆತನ ಕೈಗಳನ್ನು ಗಟ್ಟಿಯಾಗಿ ಕಚ್ಚಿ ಹಿಡಿಯಿತು. ಇದರಿಂದ ಆ ಯುವಕನ ಕೈ ಬೆರಳುಗಳು ಅರ್ಧ ತುಂಡಾಗಿವೆ. ಸುತ್ತಲೂ ಇದ್ದವರು ಇದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮೊದಲು ಅದನ್ನು ತಮಾಷೆ ಎಂದು ಭಾವಿಸಿದೆ. ಅದು ಇಷ್ಟು ಗಂಭೀರವಾಗಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಆ ಯುವಕ ನೆಲದ ಮೇಲೆ ಬಿದ್ದಾಗ ನಮಗೆ ಭಯವಾಯಿತು. ಆತನ ಕೈಗಳ ಚರ್ಮ ಮತ್ತು ಅವನ ಬೆರಳಿನ ಮೂಳೆ ಮುರಿದುಹೋಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಸಿಂಹವನ್ನು ಕೆಣಕಿದ್ದಕ್ಕೆ ಹಲವರು ವ್ಯಕ್ತಿಯನ್ನು ಛೀಮಾರಿ ಹಾಕಿದ್ದಾರೆ. ಅತಿಯಾಗಿ ಹುಡುಗಾಟವಾಡಿದ್ದಕ್ಕೆ ಆತನಿಗೆ ಸರಿಯಾದ ಶಾಸ್ತಿಯಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.