BIGG NEWS : ಗ್ರಾಹಕರಿಗೆ ಬಿಗ್ ಶಾಕ್ : 150 ರೂ.ಗಡಿ ದಾಟಿದ ಟೊಮೆಟೊ ಬೆಲೆ
ಬೆಂಗಳೂರು : ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಟೊಮೆಟೊ ಕೆ.ಜಿ. ಬೆಲೆ 150-160 ರೂ.ಗೆ ರೂ.ಗೆ ಏರಿಕೆಯಾಗಿದೆ.
ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ಟೊಮೆಟೊ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.
ಅಗತ್ಯದಷ್ಟು ಟೊಮೆಟೊ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ಟೊಮೆಟೋ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಕೊಪ್ಪಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಹರಾಜಿನಲ್ಲಿ 20 ಕೆಜಿ ಬಾಕ್ಸ್ 2,350 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಇದರ ಪರಿಣಾಮ ವಾರದ ಸಂತೆಯಲ್ಲಿ ಪ್ರತಿ ಕೆಜಿಗೆ 150-160 ರೂ. ವರೆಗೆ ಮಾರಾಟವಾಗಿದೆ. ಕಳೆದ ತಿಂಗಳು ಬೆಲೆ ಇಳಿಕೆಯಾಗಿದ್ದ ಟೊಮೇಟೊ ಬೆಲೆಯಲ್ಲಿ ಇದೀಗ ಭಾರೀ ಏರಿಕೆಯಾಗಿದ್ದು, ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದೆ, ಹೊರರಾಜ್ಯದ ವ್ಯಾಪಾರಿಗಳು ಬಾರದ ಕಾರಣ ಬೆಲೆ ಕುಸಿತವಾಗಿತ್ತು. ಈಗ ಬೆಳೆ ಕಡಿಮೆ ಇರುವುದರಿಂದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ.