Politics
ಯಡಿಯೂರಪ್ಪ ಒಬ್ಬ ಮಹಾನ್ ನಾಯಕ : ಸತೀಶ್ ಜಾರಕಿಹೊಳಿ

ಬೆಳಗಾವಿ: ಯಡಿಯೂರಪ್ಪ ನವರು ಓರ್ವ ಮಹಾನ್ ನಾಯಕರು, ಅವರ ಮಗನಿಗೆ ಟಿಕೆಟ್ ನೀಡಿಲ್ಲ, ಅವರನ್ನು ಎಲ್ಲಾ ಹಂತದಲ್ಲೂ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಗೋಕಾಕ್ ನಗರದಲ್ಲಿಂದು ಮಾಧ್ಯಮದವರೊಂದಿಗೆ ಯಾದವ್, ಜಬ್ಬಾರ್ ಪರಿಷತ್ ಟಿಕೆಟ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರಾಜ್ ಯಾದವ್, ಜಬ್ಬಾರ್ ಅವರಿಗೆ ಪರಿಷತ್ ಟಿಕೆಟ್ ನೀಡಿದ್ದು, ಕಾರ್ಯಕರ್ತರಿಗೆ ಸಂತೋಷದ ಸಂಗತಿ. ಇದೇ ರೀತಿ ಮುಂದಿನ ಚುನಾವಣೆಯಲ್ಲಿಯೂ ಕಾರ್ಯಕರ್ತರಿಗೆ ಮಣೆ ಹಾಕಬೇಕು.
ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿ ನಿರ್ಣಯ ಕೈಗೊಳ್ಳಬೇಕು. ಮೋದಿ ಅಂದರೆ ಮ್ಯಾಜಿಕ್ ಮ್ಯಾನ್, ಈ ರೀತಿಯ ಅನೇಕ ಮ್ಯಾಜಿಕ್ ಮಾಡ್ತಾರೆ. ನಿತ್ಯ ಇಂಧನ ಬೆಲೆಯನ್ನು 80 ಪೈಸಿ, 1 ರೂಪಾಯಿ ಏರಿಸುತ್ತಾರೆ ಬಳಿಕ ಕಡಿಮೆ ಮಾಡ್ತಾರೆ ಎಂದರು.