Yasin Malik: ಯಾರು ಈ ಯಾಸಿನ್ ಮಲಿಕ್? ಜೀವಾವಧಿ ಶಿಕ್ಷೆ ವಿಧಿಸಲು ಕಾರಣವೇನು?

ಯಾಸಿನ್ ಮಲಿಕ್ ಶಿಕ್ಷೆಯ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ಇನ್ನೂ ಇದೆ. ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UPA) ಸೇರಿದಂತೆ ಎಲ್ಲಾ ಆರೋಪಗಳಿಗೆ ಮಲಿಕ್ ಈ ಹಿಂದೆ ತಪ್ಪೊಪ್ಪಿಕೊಂಡಿದ್ದ. ಹೀಗಾಗಿ ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯವು ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಆರೋಪಗಳನ್ನು ಒಪ್ಪಿಕೊಂಡಿದ್ದ ಮಲಿಕ್
ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಲಿಕ್ಗೆ ಮರಣದಂಡನೆ ವಿಧಿಸುವಂತೆ ಕೋರಿತ್ತು. 56ರ ವರ್ಷದ ಮಲಿಕ್ಗೆ 10 ಲಕ್ಷ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದ್ದು, ದಾಖಲಾಗಿರುವ ವಿವಿಧ ಸೆಕ್ಷನ್ಗಳಿಗೆ ನ್ಯಾಯಾಲಯವು ವಿಭಿನ್ನ ಮೊತ್ತದ ದಂಡ ವಿಧಿಸಿದೆ.
ಮಲಿಕ್ ಬಂಧನವಾದದ್ದು ಯಾವಾಗ?
2017 ರಲ್ಲಿ ತೆರೆದ ಭಯೋತ್ಪಾದನೆ ಕೃತ್ಯಗಳಿಗೆ ಧನಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್ ಅವರನ್ನು 2019 ರಲ್ಲಿ ಎನ್ಐಎ ಬಂಧಿಸಿತ್ತು.
ಯಾಸಿನ್ ಮಲಿಕ್ ಮೇಲೆ ಇದ್ದ ಆರೋಪವೇನು?
ಭಯೋತ್ಪಾದಕ ಕೃತ್ಯ, ಭಯೋತ್ಪಾದನೆಗಾಗಿ ನಿಧಿ ಸಂಗ್ರಹಿಸುವುದು, ಭಯೋತ್ಪಾದಕ ಗುಂಪಿನ ಸದಸ್ಯ ಮತ್ತು ಕ್ರಿಮಿನಲ್ ಪಿತೂರಿ ಮತ್ತು ದೇಶದ್ರೋಹದ ಭಾಗವಾಗಿ ಮಲಿಕ್ ಮೇಲೆ ಯುಎಪಿಎ ಅಡಿಯಲ್ಲಿ ಆರೋಪವಿತ್ತು.
ಕಣಿವೆ ರಾಜ್ಯದಲ್ಲಿ ದುಷ್ಕೃತ್ಯಗಳ ಆರೋಪ
ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಲಷ್ಕರ್-ಎ-ತೊಯ್ಬಾದ ಹಫೀಜ್ ಸಯೀದ್ ಮತ್ತು ಹಿಜ್ಬುಲ್-ಮುಜಾಹಿದ್ದೀನ್ನ ಸೈಯದ್ ಸಲಾವುದ್ದೀನ್ ಸೇರಿದಂತೆ ಪಾಕಿಸ್ತಾನದಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು ಎನ್ಐಎ ಹೇಳಿತ್ತು. ಕಲ್ಲು ತೂರಾಟ, ಸುಡುವ ಮೂಲಕ ಕಣಿವೆಯಲ್ಲಿ ತೊಂದರೆ ಉಂಟುಮಾಡಲು ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ಆಯೋಜಿಸುವುದು ಮುಂತಾದ ಕೃತ್ಯಗಳಲ್ಲಿ ಯಾಸಿನ್ ಮಲಿಕ್ ಭಾಗವಹಿಸಿದ ಆರೋಪವಿತ್ತು.
ಹನ್ನೆರಡು ಪ್ರತ್ಯೇಕತಾವಾದಿಗಳನ್ನು ಬಂಧಿಸಿತ್ತು ಎಎನ್ಐ
ವರದಿಯ ಪ್ರಕಾರ ಮಲಿಕ್, ದುಖ್ತರನ್-ಎ-ಮಿಲ್ಲತ್ನ ಆಸಿಯಾ ಅಂದ್ರಾಬಿ ಮತ್ತು ಜಮ್ಮು ಮತ್ತು ಕಾಶ್ಮೀರ ಡೆಮಾಕ್ರಟಿಕ್ ಫ್ರೀಡಂ ಪಾರ್ಟಿಯ ಶಬೀರ್ ಶಾ ಸೇರಿದಂತೆ ಹನ್ನೆರಡು ಪ್ರತ್ಯೇಕತಾವಾದಿಗಳನ್ನು ಎನ್ಐಎ ಈ ಪ್ರಕರಣದಲ್ಲಿ ಬಂಧಿಸಿತ್ತು.
ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ನ ಅಧ್ಯಕ್ಷ ಮಲಿಕ್ನನ್ನು ಭಾರೀ ಭದ್ರತೆಯ ನಡುವೆ ಮೊದಲು ನ್ಯಾಯಾಲಯಕ್ಕೆ ಕರೆತರಲಾಯಿತು. ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸರ ಸಿಬ್ಬಂದಿಯನ್ನು ಸಹ ನ್ಯಾಯಾಲಯದ ಒಳಗೆ ನಿಯೋಜಿಸಲಾಗಿತ್ತು.
ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ಮೇ 19 ರಂದು ಮಲಿಕ್ನ್ನುನ ದೋಷಿ ಎಂದು ಘೋಷಿಸಿದ್ದರು. ವಿಧಿಸಬಹುದಾದ ದಂಡದ ಮೊತ್ತವನ್ನು ನಿರ್ಧರಿಸಲು ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸಲು NIA ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಮಹಾತ್ಮಾ ಗಾಂಧೀಜಿಯವರ ತತ್ವ ಅನುಸರಿಸಿದ್ದೆ ಎಂದಿದ್ದ ಯಾಸಿನ್ ಮಲಿಕ್!
ಹಿಂದಿನ ಬುಧವಾರ ಹಿಂಸಾಚಾರವನ್ನು ತ್ಯಜಿಸಿದಾಗಿನಿಂದ “ಮಹಾತ್ಮ ಗಾಂಧಿಯವರ ತತ್ವಗಳನ್ನು ಅನುಸರಿಸಿದ್ದೇನೆ” ಎಂದು ನ್ಯಾಯಾಲಯದಲ್ಲಿ ಹೇಳಿದ್ದ ಮಲಿಕ್, ಭಾರತದ ಏಳು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದ. 1994 ರ ನಂತರ ಬಂದೂಕುಗಳನ್ನು ತ್ಯಜಿಸಿದಾಗ ಯಾವುದೇ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿದ್ದೆ ಎಂದು ಗುಪ್ತಚರ ಸಂಸ್ಥೆಗಳು ಸಾಬೀತುಪಡಿಸಲಿ ಎಂದು ಸಹ ಸವಾಲು ಹಾಕಿದ್ದ.
ಯಾವ ಸೆಕ್ಷನ್ಗಳಡಿ ಬಂಧನವಾಗಿತ್ತು?
ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು), 18 (ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ) ಮತ್ತು 20 (ಸದಸ್ಯನಾಗಿರುವುದು) ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳಿಗೆ ತಾನು ಹೊಣೆಗಾರನಲ್ಲ ಎಂದು ಮೇ 10 ರಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದ. UAPA ಯ ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಮತ್ತು IPC ಯ 120-B (ಅಪರಾಧದ ಪಿತೂರಿ) ಮತ್ತು 124-A (ದೇಶದ್ರೋಹ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.