National
ಶೀಘ್ರ ಖಾದ್ಯ ತೈಲ ಬೆಲೆ ಇಳಿಕೆ
ಹೊಸದಿಲ್ಲಿ: ಇಂಡೊನೇಶ್ಯವು ಭಾರತಕ್ಕೆ 2 ಲಕ್ಷ ಟನ್ ಕಚ್ಚಾ ತಾಳೆ ಎಣ್ಣೆಯನ್ನು ರಫ್ತು ಮಾಡಿದ್ದು, ಇದರಿಂದಾಗಿ ಮುಂಬರುವ ವಾರಗಳಲ್ಲಿ ದೇಶದಲ್ಲಿ ಖಾದ್ಯ ಲಭ್ಯತೆ ಹೆಚ್ಚಿ ಬೆಲೆಯೂ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತೈಲ ಆಮದುದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡೊನೇಶ್ಯ ಕಚ್ಚಾ ತಾಳೆ ಎಣ್ಣೆಯ ರಫ್ತಿನ ಮೇಲೆ ಹೇರಿದ್ದ ನಿಷೇಧವನ್ನು ತೆರವು ಮಾಡಿದ ಬಳಿಕ ಸೋಮವಾರ ಈ ಕಚ್ಚಾತೈಲವನ್ನು ನಿರ್ಯಾತ ಮಾಡಲಾಗಿದ್ದು, ಇದೇ ವಾರ ಭಾರತಕ್ಕೆ ಆಗಮಿಸಲಿದೆ. ಸಗಟು ಮಾರುಕಟ್ಟೆಯಲ್ಲಿ ಜೂನ್ 15ರ ವೇಳೆಗೆ ಎಣ್ಣೆ ಲಭ್ಯವಾಗುವ ನಿರೀಕ್ಷೆಯನ್ನು ಆಮದುದಾರರು ವ್ಯಕ್ತಪಡಿಸಿದ್ದಾರೆ.
ಕಚ್ಚಾ ತಾಳೆ ಎಣ್ಣೆಯ ಆಮದು ಖಾದ್ಯ ತೈಲ ಮಾತ್ರವಲ್ಲದೆ ಸಾಬೂನುಗಳು, ಶಾಂಪೂ, ಬಿಸ್ಕಿಟ್ ಮತ್ತು ಚಾಕಲೇಟ್ನಂತಹ ಉತ್ಪನ್ನಗಳ ಬೆಲೆ ಇಳಿಕೆಗೂ ಕಾರಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.