ʼಶಕ್ತಿಮಾನ್ʼನಂತೆ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ಆದರೆ ಈ ಭೂಪ ಓಡ್ತಿರೋ ಬೈಕ್ ಸೀಟ್ ಮೇಲೆ ಮಲಗುತ್ತಾ ಸಾಗಿದ್ದ. ಆತನ ಆ ಸ್ಟಂಟ್ ಶಕ್ತಿಮಾನ್ ಅನ್ನೊ ಕ್ಯಾರೆಕ್ಟರ್ ನೆನಪು ಮಾಡಿಕೊಳ್ಳುವ ಹಾಗಿತ್ತು. ಕೆಲವರು ಆತನ ಈ ಸ್ಟಂಟ್ಸ್ ನೋಡಿ ಶಾಕ್ ಆಗಿ ತಮ್ಮ ತಮ್ಮ ಮೊಬೈಲ್ನಲ್ಲಿರೆಕಾರ್ಡ್ ಮಾಡಿಕೊಂಡಿದ್ದರು.
Shaktiman in Noida: बाइक पर सवार यह शक्तिमान सड़कों पर भरता है उड़ान, देखें Video@noidapolice @noida_authority #Shaktiman #ViralVideo https://t.co/m2YwXf6nBO pic.twitter.com/dSHpS76sSu
— India.com (हिन्दी) (@IndiacomNews) May 27, 2022
ನಡುರಸ್ತೆಯಲ್ಲಿ ವಿಕಾಸ್ ಎಂಬ ಯುವಕ ಹೀಗೆ ಮಾಡ್ತಿರೋದು ಗೊತ್ತಾದ ತಕ್ಷಣವೇ ನೋಯ್ಡಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕೊನೆಗೂ ಈ ಮಾರ್ಡನ್ ಝಮಾನಾದ ಶಕ್ತಿಮಾನ್ನನ್ನ ಅರೆಸ್ಟ್ ಮಾಢಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಆತನ ಜೊತೆ ಜೊತೆಗೆ ಈ ಬೈಕ್ ಸ್ಟಂಟ್ನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿರೋ ಆತನ ಗೆಳೆಯರಾದ ಗೌರವ್ ಸೂರಜ್ ಅವರನ್ನ ಸಹ ಬಂಧನ ಮಾಡಲಾಗಿದೆ.
ಈ ಕುರಿತಾಗಿ ಸೆಕ್ಟರ್ -63ನೋಯ್ಡಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಇದೇ ರೀತಿ ಸ್ಟಂಟ್ ಮಾಡಿದ ಪುಂಡರನ್ನ ಪೊಲೀಸರು ಬಂಧಿಸಿದ್ದನ್ನ ಸ್ಮರಿಸಿಕೊಳ್ಳಬಹುದಾಗಿದೆ.