BIG BREAKING NEWS: ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ‘ನಟ ಜಗ್ಗೇಶ್, ನಿರ್ಮಲಾ ಸೀತಾರಾಮನ್’ಗೆ ಟಿಕೆಟ್ ಘೋಷಣೆ

ಬೆಂಗಳೂರು: ರಾಜ್ಯಸಭಾ ಚುನಾವಣೆಯ ( Rajya Sabha Election ) ನಾಲ್ಕು ಸ್ಥಾನಗಳಿಗೆ ಘೋಷಣೆಯಾಗಿದ್ದಂತ ಚುನಾವಣೆಗೆ, ಇದೀಗ ಬಿಜೆಬಿಯಿಂದ ( BJP ) ಇಬ್ಬರು ಹುರಿಯಾಳುಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ರಾಜ್ಯಸಭಾ ಎರಡು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳಾಗಿ ನಟ ಜಗ್ಗೇಶ್ ( Actor Jaggesh ) ಹಾಗೂ ನಿರ್ಮಲಾ ಸೀತಾರಾಮನ್ ( Nirmala Seetaraman ) ಅವರಿಗೆ ಟಿಕೆಟ್ ನೀಡಲಾಗಿದೆ.
ತೀವ್ರ ಕುತೂಹಲವನ್ನು ರಾಜ್ಯಸಭಾ ಚುನಾವಣೆ ಹುಟ್ಟು ಹಾಕಿದೆ. ಎರಡು ಸ್ಥಾನಗಳಿಗೆ ಬಿಜೆಪಿ, ಒಂದು ಸ್ಥಾನಗಳಿಗೆ ಕಾಂಗ್ರೆಸ್ ಫಿಕ್ಸ್ ಆಗಿದ್ದರೇ, ಮತ್ತೊಂದು ಸ್ಥಾನಕ್ಕಾಗಿ ಎರಡು ಪಕ್ಷಗಳ ದೋಸ್ತಿ ಅತ್ಯಗತ್ಯವಾಗಿದೆ. ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಮೂರೂ ಪಕ್ಷಗಳಲ್ಲಿ ಯಾವುದೇ ಬಹುಮತವಿಲ್ಲ. ಒಂದು ಪಕ್ಷ ಮತ್ತೊಂದು ಪಕ್ಷವನ್ನ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಜೊತೆ ಬಿಜೆಪಿ ಕೈಜೋಡಿಸಲಿದೆಯಾ ? ಬಿಜೆಪಿಗೆ ಜೆಡಿಎಸ್ ಸಾಥ್ ನೀಡಲಿದೆಯಾ ? ಇಲ್ಲವೇ ಜೆಡಿಎಸ್ ನ್ನ ಕೈಪಡೆ ದೋಸ್ತಿ ಮಾಡಿಕೊಳ್ಳಲಿದೆಯಾ ? ಎನ್ನುವ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ರಾಜ್ಯಸಭಾ ದೋಸ್ತಿ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಈಗಾಗಲೇ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಬಿಜೆಪಿ ಕೂಡ ಮೂರನೇ ಅಭ್ಯರ್ಥಿಯನ್ನಾಗಿ ಪ್ರಕಾಶ್ ಶೆಟ್ಟಿಯನ್ನ ಕಣಕ್ಕಿಳಿಸಲು ಆಸಕ್ತಿ ತೋರಿದೆ. ಆದರೆ, ಯಾರು ಯಾವ ಪಕ್ಷದ ಜೊತೆ ಕೈಜೋಡಿಸುತ್ತಾರೆಂಬ ಜಿಜ್ಞಾಸೆ ಕಾಡುತ್ತಿದೆ. ಅಲ್ಲದೇ ಒಂದು ಸ್ಥಾನ ಗೆಲ್ಲಲು ಜೆಡಿಎಸ್ ಅಸಾಧ್ಯವಾದರೂ 32 ಮತಗಳನ್ನ ಹೊಂದಿಕೆಯ ಕಸರತ್ತು ನಡೆಸುತ್ತಿದೆ.
ಈ ನಡುವೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಅಭ್ಯರ್ಥಿಗಳಾಗಿ ಇಬ್ಬರಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿಯಿಂದ ಜಗ್ಗೇಶ್ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ನಿರ್ಮಲಾ ಸೀತಾರಾಮನ್ ಅವರು ಮತ್ತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗೋದು ಖಚಿತಗೊಂಡಿದೆ.