fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsPolitics

Belagavi: ಬೆಳಗಾವಿಗೂ ಕಾಲಿಟ್ಟ ಮಸೀದಿ, ಮಂದಿರ ವಿವಾದ; ಕುಂದಾನಗರಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿಕೆಯ ಕಿಚ್ಚು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಬೆಳಗಾವಿ: ಮಂಗಳೂರು, ಕಲಬುರಗಿ, ಬೀದರ್ ಬಳಿಕ ಮಸೀದಿ-ಮಂದಿರ (Mosque- Temple Row) ವಿವಾದ ಇದೀಗ ಬೆಳಗಾವಿಗೂ ಕಾಲಿಟ್ಟಿದೆ. ಬೆಳಗಾವಿಯಲ್ಲಿ (Belagavi) ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಿಸಿದ್ದಾರೆ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ್ (BJP MLA Abhay Patil) ಹೊಸ ಬಾಂಬ್ ಸಿಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮಸೀದಿ-ಮಂದಿರ ವಿವಾದ ಹೊಸ ಕಿಚ್ಚು ಹೊತ್ತಿಸಿದೆ. ಹಿಜಾಬ್ (Hijab), ಹಲಾಲ್ ಕಟ್ (Halalcut), ಅಜಾನ್ (Azan) ವಿವಾದ ರಾಜ್ಯದಲ್ಲಿ ತಣ್ಣಗಾಗುತ್ತಿದ್ದಂತೆ ಮಸೀದಿ-ಮಂದಿರ ವಿವಾದ ಹುಟ್ಟಿಕೊಂಡಿದೆ. ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದು ಬೆಳಗಾವಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಮಸೀದಿ, ಮರಳಿ ದೇವಾಲಯ ಆಗಬೇಕು ಎಂಬುದು ಬೆಳಗಾವಿಯ ಎಲ್ಲ ಹಿಂದೂಗಳ ಭಾವನೆ, ಸ್ಥಳೀಯ ಹಿರಿಯರು ಇದು ಪುರಾತನ ಹಿಂದೂ ದೇವಾಲಯ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ ಎನ್ನುವ ಮೂಲಕ ಶಾಂತವಾಗಿದ್ದ ಬೆಳಗಾವಿಯಲ್ಲಿ ಕಿಚ್ಚು ಹೊತ್ತಿಸಿದ್ದಾರೆ.

ಮಸೀದಿಯೊಳಗೆ ಗರ್ಭಗುಡಿಯ ಬಾಗಿಲುಗಳಿವೆಯಂತೆ!

ರಾಮದೇವ ಗಲ್ಲಿಯಲ್ಲಿರುವ ದೇವಸ್ಥಾನ ಸುಮಾರು ಐನೂರು ವರ್ಷದ ಹಿಂದಿನದು ಎಂಬ ಅಂದಾಜಿದೆ. ಇಲ್ಲಿನ ಮಸೀದಿಯಲ್ಲಿ ಗರ್ಭಗುಡಿಗಳಲ್ಲಿ ಇರುವಂತೆ ದೇವಸ್ಥಾನದ ಬಾಗಿಲುಗಳಿವೆ. ಹೊರಗಿನ ಒಂದು ಸೈಡ್ ನೋಡಿದ್ರೆ ಅದು ಯಾವ ರೀತಿಯ ಕಟ್ಟಡ ಇದೇ ಅನೋದು ಗೊತ್ತಾಗುತ್ತದೆ.

ದೇವಸ್ಥಾನ ಪುನರ್ ನಿರ್ಮಾಣ ಆಗಬೇಕಂತೆ!

ಹಿಂದೂ ದೇವಸ್ಥಾನಗಳ ಒಳಗೆ ಕಂಬಗಳು ಇದ್ದಂತೆ ಮೇಲ್ನೋಟಕ್ಕೆ ಇಲ್ಲಿಯೂ ಕಾಣಿಸುತ್ತಿವೆ. ಜಿಲ್ಲಾಡಳಿತ ಈ ಬಗ್ಗೆ ತ್ವರಿತವಾಗಿ ಪರಿಶೀಲನೆ ನಡೆಸಿ ಇತಿಹಾಸದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು. ಸರ್ವೇ ಆದ ನಂತರ ನೂರಕ್ಕೆ ನೂರು ಅದು ದೇವಸ್ಥಾನ ಎನ್ನುವುದು ಖಚಿತವಾಗುತ್ತದೆ. ಅದಾದ ಬಳಿಕ ಮರಳಿ ದೇವಸ್ಥಾನ ಪುನರ್ ಸ್ಥಾಪನೆಯಾಗಬೇಕು, ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನವಿದೆ. ಅದು ಯಾವ ದೇವಸ್ಥಾನ ಎಂಬ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ.

ಶಾಸಕನಾಗಿ ನಾನೇ ಒಳಗೆ ಹೋಗಿ ಪರಿಶೀಲನೆ ಮಾಡಲು ಆಗುತ್ತಿಲ್ಲ. ನಮ್ಮ ಗಮನಕ್ಕೆ ಬಂದಿರೋದನ್ನು‌ ನಾನು ತಿಳಿಸಿದ್ದೇನೆ ಎಂದು ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವೆ!

ತಕ್ಷಣವೇ ಜಿಲ್ಲಾಡಳಿತ ಸರ್ವೇ ಮಾಡಿರಿ, ಇಲ್ಲವಾದ್ರೆ ಇದನ್ನು ಸಾಬೀತು ಮಾಡಿ. ಮೇಲ್ನೋಟಕ್ಕೆ ನೂರಕ್ಕೆ ನೂರರಷ್ಟು ಇದು ಮಂದಿರವಾಗಿದೆ. ಸರ್ವೇ ಆದ ಬಳಿಕ ಸತ್ಯಾಂಶ ಹೊರಬರಲಿದೆ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ವಿಷಯ ತಿಳಿಸುತ್ತೇನೆ, ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳದಿದ್ರೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗ್ತಿವಿ ಎಂದ್ರು.

ಬಿಜೆಪಿ ಶಾಸಕ ಅಭಯ ಪಾಟೀಲ್ ಹೇಳಿಕೆ, ಶಾಂತವಾಗಿದ್ದ ಬೆಳಗಾವಿಯಲ್ಲಿ ಕೋಮುವಾದದ ಕಿಡಿ ಹೊತ್ತಿಸಿದ್ದು ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಹಲವು ಚರ್ಚೆಗಳು ವಾದ-ವಿವಾದ

ವಾರಣಾಸಿ ಜ್ಞಾನವಾಪಿ ಮಸೀದಿ, ಬಸವಕಲ್ಯಾಣದ ಅನುಭವ ‌ಮಂಟಪ ನೆಲಸಮ ಮಾಡಿ ಪೀರ ಪಾಷಾ ದರ್ಗಾ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಈ ವಿವಾದ ಬೆಳಗಾವಿ ನಗರಕ್ಕೂ ಕಾಲಿಟ್ಟಿದೆ, ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕು.

ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ

ಲಖನ್ ಜಾರಕಿಹೊಳಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅಥಣಿಯಲ್ಲಿ ಹೇಳಿಕೆ ನೀಡಿದ್ದ ಲಖನ್ ಜಾರಕಿಹೊಳಿ, ನಾನು ಪಕ್ಷೇತರ ಪರಿಷತ್ ಸದಸ್ಯನಾಗಿ ಮುಂದುವರೆಯುತ್ತೇನೆ. ಆದರೆ ನನ್ನ ಬೆಂಬಲ ಮಾತ್ರ ಬಿಜೆಪಿಗೆ ಎಂದಿದ್ದರು‌.

ಲಖನ್ ಹೇಳಿಕೆಗೆ ಟಾಂಗ್ ಕೊಟ್ಟಿರೋ ಸಚಿವ ಉಮೇಶ್ ಕತ್ತಿ, ಲಖನ್ ಜಾರಕಿಹೊಳಿ ಬೆಂಬಲ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಟಾಂಗ್ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: