ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದಲ್ಲಿ ಮಸೀದಿಯ ಅಧ್ಯಕ್ಷ ಜಹೀರ್ ಸಾಹಜನ್ ಹಾಗೂ ಅಂಜುಮನ್ ಅಧ್ಯಕ್ಷ ರಾಜು ಸೇಠ್ ಆರ್ಸಿ ಭೇಟಿ

ಬೆಳಗಾವಿಯ ಅಂಜುಮನ್ ಕಮೀಟಿ ಮತ್ತು ಬಾಪಟ ಗಲ್ಲಿಯ ಶಾಹಿ ಮಸೀದಿ ಸದಸ್ಯರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅವರನ್ನು ಭೇಟಿಯಾಗಿ ಶಾಸಕ ಅಭಯ್ ಪಾಟೀಲ್ ಎತ್ತಿರುವ ಪ್ರಶ್ನೆ ಕುರಿತು ಲಿಖಿತ ದಾಖಲೆಗಳನ್ನು ಸಲ್ಲಿಸಿದರು.
ಮೊನ್ನೆಷ್ಟೇ ಬಾಪಟ ಗಲ್ಲಿಯಲ್ಲಿ ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದರು. ಬಳಿಕ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಮಸೀದಿಯನ್ನು ಸರ್ವೇ ಮಾಡಬೇಕು ಎಂದು ಅಭಯ್ ಪಾಟೀಲ್ ಆಗ್ರಹ ಮಾಡಿದ್ದರು. ಇದಾದ ಬಳಿಕ ಸಾಯಂಕಾಲ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದಲ್ಲಿ ಮಸೀದಿಯ ಅಧ್ಯಕ್ಷ ಜಹೀರ್ ಸಾಹಜನ್ ಹಾಗೂ ಅಂಜುಮನ್ ಅಧ್ಯಕ್ಷ ರಾಜು ಸೇಠ್ ಸಾಯಂಕಾಲ ಆರ್ಸಿ ಅವರಿಗೆ ಭೇಟಿಯಾಗಿ ಅಭಯ್ ಪಾಟೀಲ್ ಆರೋಪದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು. ಯಾವ ರಾಜನೂ 900 ಸ್ಕ್ವೇರ್ ಫೂಟ್ ಜಾಗದಲ್ಲಿ ಮಂದಿರ ಕೆಡವಿ ಮಸೀದಿ ಕಟ್ಟಿರೋದಿಲ್ಲ. ಅದೇ ರೀತಿ ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ಅನೇಕರು ಧ್ವಂಸ ಮಾಡಿದ್ದಾರೆ. ಹೀಗಾಗಿ ಬಾಪಟ್ ಗಲ್ಲಿಯ ಮಸೀದಿ ಬಗ್ಗೆ ವಿಚಾರಣೆ ಮಾಡಬೇಕು. ಆಗಿನ ಕಾಲದಲ್ಲಿ ಹೊರ ದೇಶಗಳಿಂದ ಶಿಲ್ಪಕಾರರು ಆಯಾ ಸ್ಥಳಗಲ್ಲಿ ಕಟ್ಟಿದ್ದಾರೆ. ಭಾರತೀಯ ಸಂಸ್ಕøತಿಯಲ್ಲಿಯೇ ಧಾರ್ಮಿಕ ಸ್ಥಳಗಳನ್ನು ಕಟ್ಟಲಾಗಿದೆ. ಹೀಗಾಗಿ ಇದಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ, ಪ್ರಾಚೀನ ಕಟ್ಟಡವಾಗಿದ್ದರೆ ಅದು ಪುರಾತತ್ವ ಇಲಾಖೆಗೆ ಒಳಪಡುತ್ತದೆ ಎಂದರು.
ಪ್ರಾದೇಶಿಕ ಆಯುಕ್ತರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಫಿರೋಜ್ ಸೇಠ್ ಯಾವುದೇ ಸರ್ಕಾರ ಆಡಳಿತದಲ್ಲಿ ಇರಲಿ ರಾಷ್ಟ್ರದಲ್ಲಿ ಶಾಂತಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ವಸ್ತು ಸ್ಥಿತಿ ಏನಿದೆ ಅದರ ಬಗ್ಗೆ ಅವರ ಜೊತೆಗೆ ಮಾತಾಡಿದ್ದೇವೆ. ಅಭಯ್ ಪಾಟೀಲ್ ಓರ್ವ ಜವಾಬ್ದಾರಿಯುತ ಶಾಸಕರಾಗಿ ಜನರ ಮಧ್ಯ ಗೊಂದಲ ಮೂಡಿಸುವ ಕೆಲಸ ಮಾಡಬಾರದಿತ್ತು ಎಂದು ಅಸಮಾಧಾನ ಹೊರ ಹಾಕಿದರು.
ಎಲ್ಲಾರೂ ಕೂಡಿ ವಿಚಾರ ಮಾಡಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಪ್ರಾದೇಶಿಕ ಆಯುಕ್ತರ ಜೊತೆಗೆ ಮಾತನಾಡಿದ್ದೇನೆ. 1991ರ ಕಾನೂನು ಏನಿದೆ ಆ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. 1991ರ ಕಾನೂನು ಪ್ರಕಾರ ಯಾವ್ಯಾವ ಪ್ರಾರ್ಥನಾ ಸ್ಥಳಗಳು ಯಾವ ರೀತಿ ಇವೆ. ಅದೇ ರೀತಿ ಮುಂದುವರಿಯಬೇಕು ಎಂಬ ಕಾನೂನು ಇದೆ. ಅಲ್ಲಿಗೆ ಮುಗಿಯತು ಅದು. 500 ವರ್ಷ ಆಯಿತು, 700 ವರ್ಷ ಆಯಿತು ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಜ್ಞಾನವ್ಯಾಪಿಯದ್ದು ಏನಾಗಿತು ಎಂಬುದು ನನಗೆ ಗೊತ್ತಿಲ್ಲ. ಆ ವಿಷಯ ಬೇರೆ, ಈ ವಿಷಯ ಬೇರೆ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಸರ್ವೇ ಬಗ್ಗೆ ಏನಾಗುತ್ತದೆಯೋ ನೋಡೋಣ. ಸಧ್ಯಕ್ಕೆ ಶಾಂತಿಗೆ ಭಂಗ ಆಗಬಾರದು. ಸಾವಿರಾರು ಕೋಟಿ ವ್ಯವಹಾರದ್ದೂ ಏನೂ ಇಲ್ಲ. ಕೇವಲ 900 ಸ್ಕೇವರ್ ಫೂಟ್ ಜಾಗ ಇದೆ. ಇದಕ್ಕಾಗಿ ಯಾರೋ ರಾಜ ಮಂದಿರ ಕೆಡವಿ ಮಸೀದಿ ಕಟ್ಟಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ ಅನೇಕ ಧಾರ್ಮಿಕ ಕೇಂದ್ರಗಳು ಭಾರತೀಯ ಸಂಸ್ಕøತಿ ಪ್ರಕಾರ ಕಟ್ಟಡಗಳನ್ನು ಕಟ್ಟಲಾಗಿದೆ. ಇಡೀ ದೇಶದಲ್ಲಿ ಅನೇಕ ಧಾರ್ಮಿಕ-ಐತಿಹಾಸಿಕ ಕೇಂದ್ರಗಳ ಬಗ್ಗೆ ಚರ್ಚೆ ಶುರುವಾಗಿದೆ. ಉದ್ದೇಶಪೂರ್ವಕವಾಗಿ ಮುಸ್ಲಿಂರನ್ನು ಪ್ರಚೋದಿಸುತ್ತಿದ್ದಾರೆ. ಅದೇ ರೀತಿ ಪ್ರಯತ್ನ ಬೆಳಗಾವಿಯಲ್ಲಿಯೂ ಆಗುತ್ತಿದೆ. ಆದರೆ ಇದಕ್ಕೆ ನಾವು ಯಾರೂ ಪ್ರಚೋದನೆಗೆ ಒಳಗಾಗುವುದಿಲ್ಲ. ಮೊದಲೇ ಕೊರೊನಾದಿಂದ ಈಗಷ್ಟೇ ಚೇತರಿಕೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಏನಾದ್ರೂ ಶಾಂತಿ ಕದಡುವ ಕೆಲಸ ಆದ್ರೆ ಬಾಪಟ ಗಲ್ಲಿಯ ಬಡ ವ್ಯಾಪಾರಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ನಮಗೆ ಜಿಲ್ಲಾಡಳಿತದ ಮೇಲೆ ನಂಬಿಕೆಯಿದೆ ಎಂದರು.