EducationKarnataka News
ಬೈಲಹೊಂಗಲ ಪಟ್ಟಣದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ U.P.S.C.PASS ದೇಶಕ್ಕೆ 250ನೇ ರ್ಯಾಂಕ್

UPSC exam 2022: ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಯುವತಿ ದೇಶದಲ್ಲಿಯೇ 250ನೇ ರ್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಬೈಲಹೊಂಗಲ ಪಟ್ಟಣದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಯುಪಿಎಸ್ಸಿ ಪಾಸ್ ಆದ ಯುವತಿ. ದೇಶಕ್ಕೆ 250ನೇ ರ್ಯಾಂಕ್ ಬಂದಿದ್ದರೆ ರಾಜ್ಯಕ್ಕೆ 10ನೇ ರ್ಯಾಂಕ್ ಬಂದಿರೋ ಸಾಹಿತ್ಯ. ಸತತ ಆರು ವರ್ಷಗಳಿಂದ ಪ್ರಯತ್ನ ಮಾಡಿದ್ದ ಯುವತಿ ದೆಹಲಿಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದರು. ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆ ಆಗುವ ಮೂಲಕ ತನ್ನ ಗುರಿ ಮುಟ್ಟಿದ್ದಾಳೆ. ಸಾಹಿತ್ಯ ಸಾಧನೆಗೆ ಎಲ್ಲರೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.