Crime News
ಮಹಾರಾಷ್ಟ್ರ: 6 ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿದ ತಾಯಿ!

ಮುಂಬೈ: ಮಹಿಳೆಯೊಬ್ಬರು ತನ್ನ 6 ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ಕುಟುಂಬ ಕಲಹದಿಂದ ಬೇಸತ್ತು ಮಹಿಳೆ ಈ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮುಂಬೈ ನಿಂದ 100 ಕಿ.ಮೀ ದೂರದಲ್ಲಿರುವ ಮಹದ್ ತಾಲೂಕ್ ನಲ್ಲಿರುವ ಖಾರವಾಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
30 ವರ್ಷದ ಮಹಿಳೆ ಈ ರೀತಿ ಮಾಡಿದ್ದು, ಆಕೆಯನ್ನು ಪತಿಯ ಕುಟುಂಬ ಸದಸ್ಯರು ಥಳಿಸುತ್ತಿದ್ದರು. ಇದರಿಂದ ಬೇಸತ್ತು ಮಕ್ಕಳನ್ನು ಕೊಂದಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
18 ತಿಂಗಳಿನ ಮಗು ಸೇರಿದಂತೆ 10 ವರ್ಷದ ಮಕ್ಕಳು ಸಾವನ್ನಪ್ಪಿವೆ.