ರಸ್ತೆಯ ಮೇಲೆ ಡ್ರೈನೇಜ್ ನೀರು: ಪಾಲಿಕೆ ನಿರ್ಲಕ್ಷಕ್ಕೆ ಸಾರ್ವಜನಿಕರ ಬೇಸರ..!

ಬೆಳಗಾವಿ ನಗರದ ಟಿಳಕವಾಡಿ ಶುಕ್ರವಾರ್ ಪೇಟ್ದ ಮುಖ್ಯರಸ್ತೆಯ ಮೇಲೆ ಡ್ರೈನೇಜ್ ನೀರು ಹರಿಯುತ್ತಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಇದು ಬೆಳಗಾವಿಯ ಮಿಲ್ಲೇನಿಯಂ ಗಾರ್ಡ್ನ್ ಮುಂದಿನ ರಸ್ತೆ. ಇಲ್ಲಿ ಸುಮಾರು ಎರಡು ದಿನಗಳಿಂದ ಡ್ರೈನೇಜ್ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನು ಪಕ್ಕದಲ್ಲಿಯೇ ಶಾಲೆಯಿದ್ದು, ಮಕ್ಕಳಿಗೆ ಶಾಲೆಗೆ ಹೋಗಲೂ ಕೂಡ ತೊಂದರೆಯಾಗುತ್ತಿದೆ. ಇಲ್ಲಿಯೇ ಮಹಾನಗರ ಪಾಲಿಕೆಯ ದಕ್ಷಿಣ ವಲಯ ಕಚೇರಿ ಇದೆ. ಇಲ್ಲಿಯೇ ಸುತ್ತಮುತ್ತಲೂ ಪಾಲಿಕೆಯ ಹೆಲ್ಥ ಇನ್ಸ್ಪೆಕ್ಟರ್ ಓಡಾಡುತ್ತಾರೆ. ಈ ದೃಶ್ಯಗಳು ಅವರ ಕಣ್ಣಿಗೆ ಕಾಣುತ್ತಿಲ್ಲವಾ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತಾರೆ. ಆದರೆ ಶುದ್ಧ ರಸ್ತೆಯ ಮೇಲೆ ಡ್ರೈನೇಜ್ ನೀರು ಹರಿದರೆ ಅದಕ್ಕೇನು ಬೆಲೆ ಬರುತ್ತದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಆದಷ್ಟು ಬೇಗನೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.