BREAKING NEWS: ಬಾಲಿವುಡ್ ಜನಪ್ರಿಯ ಗಾಯಕ ಕೆಕೆ ಇನ್ನಿಲ್ಲ

ಕೋಲ್ಕತ್ತಾ, ಜೂನ್ 1: ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುಸಿದು ಬಿದ್ದಿದ್ದು, ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಭಿಮಾನಿಗಳಿಗೆ ಕೆಕೆ ಎಂದೇ ಚಿರಪರಿಚತಾರಿದ್ದ ಕೃಷ್ಣಕುನಾರ್ ಕುನ್ನತ್ (53) ಕೋಲ್ಕತ್ತಾದಲ್ಲಿ ಕೋಲ್ಕತಾದಲ್ಲಿ ನಜ್ರುಲ್ ಮಂಜ್ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್ನಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ನೀಡುವಾಗಲೇ ವೇದಿಕೆ ಮೇಲೆಯೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೆಕೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ರಿಂದ ನಗರಕ್ಕೆ ಬಂದಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಗಾಯಕ ಕೃಷ್ಣಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಬದುಕು ಕಟ್ಟಿಕೊಂಡ ಸಂಗೀತದ ವೇದಿಕೆಯಲ್ಲಿ ಹಾಡುತ್ತಲೇ ತನ್ನ ಜೀವನವನ್ನು ಕೊನೆಗೊಳಿಸದ್ದಾರೆ ಖ್ಯಾತ ಗಾಯಕ.
ವೇದಿಕೆಯಲ್ಲಿ ಕುಸಿದ ಕೆಕೆಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ಅಷ್ಟೇ ವೇಗದಲ್ಲಿ ಕೋಲ್ಕತ್ತಾದ ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಕೆಕೆ ಸಾವನ್ನಪ್ಪಿದ್ದರು.