fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Crime NewsKarnataka News

ನಾನು ವಾಟ್ಸ್​ಆಯಪ್​ನಲ್ಲೇ ಹೇಳಿದ್ದೆ.ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್​!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿದೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿರುವ ಮಾತುಕತೆಯ ಒಂದೊಂದೆ ಆಡಿಯೋ ಹೊರಬರುತ್ತಿದೆ. ಇದೀಗ ಮತ್ತೊಂದು ಆಡಿಯೋ ಸೋರಿಕೆಯಾಗಿದ್ದು, ಅದರಲ್ಲಿ ಗರ್ಭಪಾತದ ಬಗ್ಗೆ ಇಬ್ಬರು ಮಾತನಾಡಿರುವುದು ಬೆಳಕಿಗೆ ಬಂದಿದೆ.

 

ಇದುವರೆಗೂ ಸೋರಿಕೆಯಾದ ನಾಲ್ಕು ಆಡಿಯೋದಲ್ಲಿ ಸುಮಾ ಮತ್ತು ರೇಖಾ ಪರಸ್ಪರ ಮಾತಿನಲ್ಲೇ ಕಿತ್ತಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಸೋರಿಕೆಯಾಗಿರುವ ಆಡಿಯೋದಲ್ಲಿ ಇಬ್ಬರು ಶಾಂತವಾಗಿಯೇ ಮಾತನಾಡಿದ್ದಾರೆ. ರೇಖಾಳ ಗರ್ಭಪಾತದ ಬಗ್ಗೆ ಇಬ್ಬರು ಮಾತನಾಡಿಕೊಂಡಿದ್ದಾರೆ.

ನಿನ್ನ ಮಗುವಿಗೆ ತಾಯಿಯಾಗಿದ್ದೀನಿ ಎಂಬ ವಿಚಾರವನ್ನು ನೀನು ಅನಂತುಗೆ ಹೇಳಿದ್ಯಾ? ಇಲ್ವಾ? ಎಂದು ಸುಮಾ ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರ ನೀಡಿರುವ ರೇಖಾ, ಹೇಳಿದ್ದೆ ಸುಮಾ, ಧರ್ಮಸ್ಥಳದ ಮಂಜುನಾಥನ ಆಣೆಗೂ ನಾನು ಹೇಳಿದ್ದೆ. ಗರ್ಭಿಣಿಯಾಗಿದ್ದೇನೆ ಎಂದು ವಾಟ್ಸ್​ಆಯಪ್​ನಲ್ಲೇ ಹೇಳಿದ್ದೆ. ನಾನು ಕಳುಹಿಸಿದ್ದ ವಾಟ್ಸ್​ಆಯಪ್​ ಮೆಸೇಜ್​ ಚಾಟ್​ ಹಿಸ್ಟರಿಯಲ್ಲಿ ಇರಬಹುದು. ನಾನು ವಾಟ್ಸ್​ಆಯಪ್​ನಲ್ಲೇ ಗರ್ಭಿಯಾಗಿದ್ದ ವಿಚಾರ ಹೇಳಿದ್ದೆ ಎಂದು ರೇಖಾ ಹೇಳಿದ್ದಾರೆ.

ಗರ್ಭಿಣಿ ಅಂತಾ ಹೇಳಿದ್ದಕ್ಕೆ ಅನಂತು ಏನು ಹೇಳಿದ ಎಂದು ಸುಮಾ ಮರುಪ್ರಶ್ನೆ ಮಾಡಿದಾಗ, ಅದಕ್ಕೆ ಉತ್ತರಿಸಿದ ರೇಖಾ, ಗರ್ಭಪಾತ ಮಾಡಿಸಿಕೊಳ್ಳಲು ಹೇಳಿದರು. ಗರ್ಭಪಾತ ಆದಾಗಲೂ ನನಗೆ ಫೋನ್​ ಮಾಡಿ ಗರ್ಭಪಾತ ಆಯ್ತಾ ಅಂತಾ ಕೇಳಿದರು ಮತ್ತು ವಿಶ್ರಾಂತಿ ಪಡೆಯಲು ತಿಳಿಸಿದರು. ಎರಡು ಬಾರಿ ಗರ್ಭಪಾತ ಆಗಿದೆ. ಎರಡೂ ಬಾರಿ ಗರ್ಭಪಾತ ಮಾಡಿಸಿರುವುದು ಅವರಿಗೆ ತಿಳಿದಿತ್ತು ಎಂದು ರೇಖಾ ಮಾತನಾಡಿದ್ದಾರೆ.

ನನಗು ಒಂದು ಮಗು ಇರಲಿ ನಮ್ಮಿಬ್ಬರ ಸಂಬಂಧ ಇನ್ನೂ ಗಟ್ಟಿಯಾಗಿರುತ್ತದೆ ಎಂದು ನೀವಿಬ್ಬರು ಮಾತನಾಡಿದ್ದಾಗಿ ಅನಂತು ಹೇಳಿದ ಎಂದು ಸುಮಾ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರೇಖಾ, ಖಂಡಿತವಾಗಿಯೂ ನಾನು ಆ ರೀತಿ ಹೇಳಿರಲಿಲ್ಲ. ನಾನು ಗರ್ಭಿಣಿ ಅಂತಾ ಹೇಳಿದ್ದಕ್ಕೆ ಅವರು ಹೇಳಿದ್ದು ಒಂದೇ ಮಾತು, ನಿಮಗೆ ಎರಡು ಹೆಣ್ಣು ಮಕ್ಕಳಿದ್ದಾರೆ ಮತ್ತು ನನಗೆ ಮೂರು ಮಕ್ಕಳಿದ್ದಾರೆ. ಈ ಮಕ್ಕಳನ್ನೇ ಸಾಕುವುದು ತುಂಬಾ ಕಷ್ಟ. ಹೀಗಿರುವಾಗ ಇನ್ನೊಂದು ಮಗು ಏನಕ್ಕೆ? ನಾಳೆ ನಿನ್ನ ಗಂಡ ವಿನೋದ್​ಗೆ ಗೊತ್ತಾದರೆ ತೊಂದರೆ ಆಗುತ್ತೆ. ನನ್ನನ್ನು ನಂಬೋದಾದ್ರೆ ಮಗು ತೆಗೆಸು ಎಂದು ಹೇಳಿದ್ದರು ಎಂದು ರೇಖಾ, ಸುಮಾಗೆ ಉತ್ತರ ನೀಡಿದ್ದಾರೆ.

ನಿನಗೆ ಆಸೆ ಇತ್ತಂತೆ ಎಂದು ಸುಮಾ ಕೇಳಿದಾಗ ಹೌದು, ನನಗೆ ಗಂಡು ಮಗು ಇಟ್ಟುಕೊಳ್ಳಬೇಕೆಂಬ ಆಸೆ ಇತ್ತು ಎಂದು ಆಡಿಯೋ ಕೊನೆಯಲ್ಲಿ ರೇಖಾ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: