fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News

Belagavi: ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ತಪ್ಪಾಯ್ತು, ಮಗನನ್ನೇ ಹೊಡೆಸಿದರಾ ಪಿಎಸ್‌ಐ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಬೆಳಗಾವಿ: ಸಮಾಜದಲ್ಲಿ ಶಾಂತಿ (Peace) ಕಾಪಾಡಿ, ಜನರು ತಪ್ಪು ದಾರಿಗೆ ಇಳಿದಾಗ ಅವರನ್ನು ಸರಿದಾರಿಗೆ ತರವುದರ ಜೊತೆಗೆ ಜನರಿಗೆ ನೆಮ್ಮದಿಯ ಜೀವನ (Life) ನೀಡುವ ಜವಾಬ್ದಾರಿ ಪೊಲೀಸ್ ಇಲಾಖೆ (Police Department) ಮೇಲಿರುತ್ತೆ. ಆದ್ರೆ,ಇಲ್ಲೊಬ್ಬ ಪೊಲೀಸ್ ಇಲಾಖೆಯ ಅಧಿಕಾರಿ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಿದ್ದಾನೆ.

ಸಂಬಂಧದಲ್ಲಿ (Relationship) ಮಗಳಾಗುವ (Daughter) ಮಹಿಳೆಯೊಂದಿಗೆ (Women) ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಬುದ್ಧಿ ಹೇಳಲು ಹೋದ ಮಗನ (Son) ಮೇಲೆ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ (Deadly Assault) ಮಾಡಿಸಿದ್ದಾನೆ. ರಾಹುಲ್ ಎಂಬಾತನೇ ಹಲ್ಲೆಗೆ ಒಳಗಾದ ಯುವಕ. ಈತ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ (Gokak) ತಾಲೂಕಿನ ಕೊಣ್ಣೂರ ಗ್ರಾಮದವ. ಸದ್ಯ ಬೆಳಗಾವಿ ಖಾಸಗಿ ಪತ್ರಿಕೆಯಲ್ಲಿ (Paper) ಕೆಲಸ ಮಾಡಿಕೊಂಡಿರುವ ರಾಹುಲ್ ಬೆಳಗಾವಿಯ ವೈಭವ ನಗರದಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದಾರೆ. ಈತನ ತಂದೆ ಗೋಕಾಕ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‌ಐ (PSI) ಆಗಿ ಕೆಲಸ ಮಾಡುತ್ತಿದ್ದು ಆತನ‌ ಹೆಸರು ಸಿದ್ದಪ್ಪ ಕರನಿಂಗ್. ಇವರ ಮೇಲೆ ಇದೀಗ ಆರೋಪ ಕೇಳಿ ಬಂದಿದೆ.

ಮಹಿಳೆಯೊಂದಿಗೆ ಪಿಎಸ್‌ಐ ಅನೈತಿಕ ಸಂಬಂಧ

ರಾಹುಲ್ ತಂದೆ ಪಿಎಸ್‌ಐ ಕರನಿಂಗ್ ಪ್ರಮೋಶನ್ ಮೇಲೆ ಕಳೆದ ನಾಲ್ಕೈದು ವರ್ಷಗಳಿಂದ ಪಿಎಸ್‌ಐ ಆಗಿ ಬಡ್ತಿ ಪಡೆದು ಕುಲಗೋಡ ಠಾಣೆಯ ಪಿಎಸ್‌ಐ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಪೊಲೀಸ್ ಇಲಾಖೆಗೆ‌ ಮುಜುಗರ ತರುವ ಕೆಲಸವನ್ನು ಪಿಎಸ್‌ಐ ಸಿದ್ದಪ್ಪ ಮಾಡಿದ್ದು ಸಹೋದರ ಸಂಬಂಧಿಯ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನಂತೆ. ಇದು ಮನೆಯವರಿಗೆ ಗೊತ್ತಾಗಿ ಸಾಕಷ್ಟು ಬಾರಿ ಮಹಿಳೆ ಮತ್ತು ಪಿಎಸ್‌ಐ ಸಿದ್ದಪ್ಪನಿಗೆ ತಿಳಿಹೇಳಿದ್ದಾರೆ. ಆದ್ರೆ, ಅವರ್ಯಾರು ಇವರ ಮಾತನ್ನ ಕೇಳದೇ ತಮ್ಮ ಹಳೆಯ ಚಾಳಿಯನ್ನ ಮುಂದುವರೆಸಿದ್ದಾನೆ.

ಮಹಿಳೆಗೆ ಬುದ್ಧಿ ಹೇಳಲು ಹೋಗಿದ್ದ ಯುವಕ

ಬೇಸರಗೊಂಡ ಮಗ ರಾಹುಲ್ ಕೊಣ್ಣೂರ ಬಿಟ್ಟ ಬೆಳಗಾವಿಯಲ್ಲಿ ಹೆಂಡತಿಯೊಂದಿಗೆ ಖಾಸಗಿ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೆ, ಕಳೆದ ಮೇ 23ರಂದು ಕೊಣ್ಣೂರ ಗ್ರಾಮಕ್ಕೆ ರಾಹುಲ್ ಹೋದಂತಹ ಸಂದರ್ಭದಲ್ಲಿ ಪಿಎಸ್‌ಐ ತಂದೆಯ ಜೊತೆಗೆ ಅಕ್ರಮ‌ ಸಂಬಂಧ ಇಟ್ಟುಕೊಂಡ ಮಹಿಳೆಗೆ ನಮ್ಮ ತಂದೆಯೊಂದಿಗೆ ಅನೈತಿಕ ಸಂಬಂಧ ಮುಂದುವರೆಸದಂತೆ ಹೇಳಲು ಆಕೆಯ ಮನೆಗೆ ಹಲ್ಲೆಗೊಳಗಾದ ರಾಹುಲ ತೆರಳಿದ್ದಾನೆ.

ಯುವಕನ ಮೇಲೆ ಪೊಲೀಸರಿಂದ ಹಲ್ಲೆ

ಈ ವೇಳೆ ಮಹಿಳೆ ತಕ್ಷಣ ಪೊಲೀಸರು ಮತ್ತು ರಾಹುಲ್ ತಂದೆ ಪಿಎಸ್‌ಐ ಸಿದ್ದಪ್ಪನಿಗೆ ಪೋನ್ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪ್ರಜ್ಞೆತಪ್ಪಿಬಿದ್ದಿದ್ದ ಆತನನ್ನು ಅಲ್ಲೆ ಬಿಟ್ಟು ಹೋಗಿದ್ದಾರೆ. ಪೊಲೀಸರ ಹೊಡೆತಕ್ಕೆ ರಾಹುಲ್ ನ ಮೈಯಾಲ್ಲಾ ಬಾಸುಂಡೆಗಳು ಎದ್ದಿದ್ದು, ರಾಹುಲ್ ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಂದೆ ಹಾಗೂ ಪೊಲೀಸರ ವಿರುದ್ಧ ದೂರು

ಈವರೆಗೂ ಪೊಲೀಸರ ಹೊಡೆತದ ಬಾಸುಂಡೆಗಳು ಕಲೆಗಳು ಹಾಗೇ ಇದ್ದು ನೋಡಿದವರು ಕೂಡ ತಂದೆಯ ಕೃತ್ಯಕ್ಕೆ ‌ಮಮ್ಮಲಮರುಗಿದ್ದಾರೆ. ತಂದೆಯ ಅನೈತಿಕ ಸಂಬಂಧ ಪ್ರಶ್ನಿದ್ದಕ್ಕಾಗಿ ಮಹಿಳೆಯೊಂದಿಗೆ ಸೇರಿಕೊಂಡ ಪೊಲೀಸರು ಮತ್ತು ಆತನ ತಂದೆಯ ಮಾತಿನಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕುರಿತು ರಾಹುಲ್ ಗೋಕಾಕ ಗ್ರಾಮೀಣ ಠಾಣೆ ಹಾಗೂ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರನ್ನ ಭೇಟಿಯಾಗಿ ತಂದೆ ಮತ್ತು ಮಹಿಳೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

ದೂರು ಕೊಟ್ಟಿದ್ದಕ್ಕೆ ಬೆದರಿಕೆ ಕರೆ

ದೂರು ಸ್ವೀಕರಿಸಿದ ಬೆಳಗಾವಿ ಎಸ್ಪಿ ನ್ಯಾಯಕೊಡಿಸುವ ಭರವಸೆ ನೀಡಿದ್ದಾರಂತೆ. ಇತ್ತ ದೂರು ನೀಡಿ ವಾರ ಕಳೆದರೂ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಇದರ ಜೊತೆಗೆ ಕೆಲವರು ಪೋನ್ ಕರೆ ಮಾಡಿ ಕೇಸ್ ಹಿಂಪಡೆದುಕೊಳ್ಳುವಂತೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: