fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News
Trending

ಸುವರ್ಣಸೌಧ ಶಾಂಡಿಗೆ ಕೇಸ್: ಅಂದು ಕಾವಲಿದ್ದ ಪೊಲೀಸರ ವಿರುದ್ಧ ಕ್ರಮಕ್ಕೆ ಭೀಮಪ್ಪ ಗಡಾದ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಶಾಂಡಿಗೆ ಒಣಗು ಹಾಕಿದ್ದು ಇಡೀ ಕನ್ನಡ ನಾಡಿಗೆ ಮಾಡಿದ ಅವಮಾನ. ಇದಕ್ಕೆ ಕಾರಣರಾದ ಅಂದು ಕಾವಲು ಇದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ್ 400 ಕೋಟಿ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಸುವರ್ಣಸೌಧದ ಕಾವಲಿಗೆ ಪೊಲೀಸ್ ಇಲಾಖೆ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಿದೆ. ಆದರೆ ಅಂತಹ ಬಿಗಿ ಭದ್ರತೆ ನಡುವೆಯೂ ಇಂತಹ ಘಟನೆ ನಡೆದಿರುವುದು ಇದು ನಿಜವಾಗಿಯೂ ಬೆಳಗಾವಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಹಾಗೆ ಆಗಿದೆ.

ಆ ಮಹಿಳೆ ಒಳಗೆ ಹೋಗಲು ಕಾರಣ ಯಾರು..? ಅಂದು ಯಾರು ಕರ್ತವ್ಯ ನಿರ್ವಹಿಸುತ್ತಿದ್ದರು..? ಮುಖ್ಯ ಪ್ರವೇಶದ್ವಾರದ ಅಂದು ಯಾರು ಕರ್ತವ್ಯ ನಿರ್ವಹಿಸುತ್ತಿದ್ದರು..? ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾನು ಕಾನೂನಾತ್ಮ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

ಮುಂದುವರಿದು ಮಾತನಾಡಿದ ಭೀಮಪ್ಪ ಗಡಾದ್ ಸುವರ್ಣಸೌಧ ಕಾಯಲು ಎಷ್ಟು ಜನ ಸಿಬ್ಬಂದಿಗಳನ್ನು ನೇಮಕ ಮಾಡಿದ್ದಿರಿ..? ಅಂದಿನ ಘಟನೆಯ ಸಿಸಿಟಿವಿಯ ದೃಶ್ಯಾವಳಿಗಳನ್ನು ಕೊಡುವಂತೆ ಮಾಹಿತಿ ಹಕ್ಕಿನಡಿ ಕೇಳಿದ್ದೇನೆ. ಒಂದು ವೇಳೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಸಂಬಂಧ ಕ್ರಮ ಕೈಗೊಳ್ಳದಿದ್ರೆ ಮಾಹಿತಿ ಹಕ್ಕಿನಿಂದ ಪಡೆದ ದಾಖಲೆಗಳನ್ನು ತೆಗೆದುಕೊಂಡು ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತೇನೆ ಎಂದು ಇದೇ ವೇಳೆ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: