fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsNational

Suvarna Soudha: ನಿನ್ನೆ ಸಸ್ಪೆಂಡ್ ಆಗಿದ್ದ ಮಲ್ಲವ್ವ ಇಂದು ಕೆಲಸಕ್ಕೆ ಹಾಜರ್; ಶಾವಿಗೆ ಒಣಗಿಸಿದ್ದ ಮಹಿಳೆಗೆ ಸಿಗ್ತು ಸೂರಿನ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಬೆಳಗಾವಿ (ಜೂ.3): ಉತ್ತರ ಕರ್ನಾಟಕದ ಶಕ್ತಿ ಸೌಧ ಆಗಬೇಕಿದ್ದ ಸುವರ್ಣ ಸೌಧ (Suvarna Soudha) ಬಿಳಿ ಆನೆಯಾಗಿದೆ. ಸೌಧದಲ್ಲಿ ದಿನಗೂಲಿ ‌ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರು (Women) ಮೆಟ್ಟಿಲ ಮೇಲೆ ಶಾವಿಗೆ ಒಣಗಿಸಿದ್ದರು. ಈ ಚಿತ್ರಗಳು ಸರ್ಕಾರ ನಿರ್ಲಕ್ಷ್ಯ ಧೋರಣೆಗೆ ಕನ್ನಡಿಯಂತೆ ಇತ್ತು.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದವು. ಬಡ ಮಹಿಳೆಯ ಮೇಲೆ ಪ್ರತಾಪ ತೋರಿಸಿದ ಅಧಿಕಾರಿಗಳು ಮಲ್ಲವ್ವಳನ್ನು ಕೆಲಸದಿಂದ ಹೊರಗೆ ಹಾಕಿದ್ರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳೀಯ ಗುತ್ತಿಗೆದಾರನಿಗೆ ನೋಟಿಸ್ ಕೊಟ್ಟಿದ್ದರು. ಗುತ್ತಿಗೇದಾರ ಮಲ್ಲವ್ವಗೆ (Mallavva) ಕೆಲಸಕ್ಕೆ ಬರಬೇಡಿ ಎಂದು ಹೇಳಿ ಕಳಿಸಿದ್ದರು.

ನ್ಯೂಸ್​ 18 ಇಂಪ್ಯಾಕ್ಟ್​

ಮಲ್ಲವ್ವ ಕುಟುಂಬದ ಸ್ಥಿತಿ, ಬಡತನದ ಬಗ್ಗೆ ನ್ಯೂಸ್18 ಕನ್ನಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಮಲ್ಲವ್ವಗೆ ಮರಳಿ ಕೆಲಸ ನೀಡಿದ್ದು, ಮನೆ ನಿರ್ಮಿಸಿ ‌ಕೊಡುವ ಭರವಸೆ ನೀಡಿದೆ. ಮಲ್ಲವ್ವಳನ್ನು ಸುವರ್ಣ ಸೌಧದ ದಿನಗೂಲಿ ನೌಕರೆ ಮಲ್ಲಮ್ಮ ಕೆಲಸದಿಂದ ಹೊರಕ್ಕೆ ಹಾಕಿದ್ರು. ಕೊಂಡಸಕೊಪ್ಪ ಗ್ರಾಮದಲ್ಲಿ ಕೇವಲ 4- 6 ಅಡಿಯ ಪುಟ್ಟ ಮನೆಯಲ್ಲಿ ವಾಸವಿರೋ ಮಲ್ಲಮ್ಮ, ದಿನಗೂಲಿ ನಂಬಿಯೇ ಜೀವನ ನಡೆಸುತ್ತಿದ್ದಾರೆ.

ಮಲ್ಲಮ್ಮನ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿರೋ ಸಹೋದರರು, ಮಗನ ಜತಗೆ ಪುಟ್ಟ ಕೋಣೆಯಲ್ಲಿ ಮಲ್ಲವ್ವ ವಾಸವಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಮಲ್ಲಮ್ಮಗೆ ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೇದಾರ ಹೇಳಿದ್ದಾರೆ. 2007 ರಿಂದ ಸುವರ್ಣ ಸೌಧದಲ್ಲಿ ದಿನಗೂಲಿ ಆದಾರದ ಮೇಲೆ ಕೆಲಸ,‌ಕಸ, ನೆಲ ಒರಿಸುವ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಮೊದಲು ಕೂಲಿ ಕಮ್ಮಿ ಇತ್ತು, ಈಗ ದಿನಕ್ಕೆ 200 ರೂಪಾಯಿ ಆಗಿದೆ. 20ಕ್ಕೂ ಹೆಚ್ಚು ಜನ ಮಹಿಳೆಯರು ಕೆಲಣ ಮಾಡುತ್ತೇವೆ.

ನಮ್ಮ ಸಂಬಂಧಿಕರು ಶಾವಿಗೆ ತಂದು ಕೊಟ್ಟಿದ್ದರು

ಮೊನ್ನೆ ನಮ್ಮ ಸಂಬಂಧಿಕರು ಶಾವಿಗೆ ತಂದು ಕೊಟ್ಟಿದ್ದರು. ಬಳಿಕ‌ ಚೀಲದಲ್ಲಿ ಶಾವಿಗೆ ಇಟ್ಟಿದ್ದೆ, ಬಾಟಲಿಯಲ್ಲಿ ಇದ್ದ ನೀರು ಬಿತ್ತು. ಒದ್ದೆಯಾಗಿದ್ದ ಶಾವಿಗೆಯನ್ನು ಮೆಟ್ಟಿಲ ಮೇಲೆ ಒಣಗಿಸಿದೆ. ಊಟಕ್ಕೆ ಬಂದ ಬಳಿಕ ಗುತ್ತಿಗೇದಾರ ಬೈದ್ರು ತೆಗೆದು ಇಟ್ಟು ಬಿಟ್ಟೆ, ನಂತರ ನಾಲ್ಕು ದಿನ ಕೆಲಸಕ್ಕೆ ಬರಬೇಡ ಅಂದ್ರು‌ ಇನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವ ಬಗ್ಗೆ ಹೇಳಿಲ್ಲ. ಬರೀ ನೋಡೊಣ ಎನ್ನುವ ಭರವಸೆ ನೀಡಿದ್ದಾರೆ ಅಷ್ಟೇ ಎಂದು ಮಲ್ಲವ್ವ ಹೇಳಿದರು.

ಮಲ್ಲವ್ವಗೆ ಮತ್ತೆ ಕೆಲಸಕ್ಕೆ ಅವಕಾಶ

ಮಲ್ಲವ್ವ ಮರಳಿ ಕೆಲಸಕ್ಕೆ ಸೇರಿಸಿ ಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯಿತು.ಇದಕ್ಕೆ ನ್ಯೂಸ್ 18 ಕನ್ನಡ ಸಹ ಸಾಥ್ ನೀಡಿತ್ತು. ನಿರಂತರ ವರದಿಯ ಫಲಶೃತಿಯಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಪ್ರಕರಣ ಬಗ್ಗೆ ಗುತ್ತಿಗೇದಾರಿಗೆ ನೋಟಿಸ್ ನೀಡಲಾಗಿತ್ತು. ಬಳಿಕ ಅವರ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬೇರೆ ಕಡೆ ಕಳುಹಿಸಲಾಗಿತ್ತು.

ವಾಪಸ್ ಸುವರ್ಣ ಸೌಧದಲ್ಲಿ ಕೆಲಸ ಕೊಡಬೇಕು ಎಂದು ಒತ್ತಡ. ಮಾಧ್ಯಮ ಹಾಗೂ ಜನರಿಗೆ ನನಗೆ ಮನವಿ ಬಂದಿದೆ. ಹೀಗಾಗಿ ಮಲ್ಲವ್ವ ಅವರನ್ನು ಮತ್ತೆ ಸೌಧದಲ್ಲಿ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಗುತ್ತಿಗೇದಾರರಿಗೆ ಈಗಾಗಲೇ ಸೌಧದಲ್ಲಿ ಕೆಲಸಕ್ಕೆ ಅವಕಾಶ ಕೊಡಿ ಎಂದು ಸೂಚನೆ. ಸುವರ್ಣ ಸೌಧದ ಘನತೆಗೆ ಧಕ್ಕೆ ಬರದಂತೆ ಕ್ರಮ ವಹಿಸಲು ಸೂಚನೆ.

ನನ್ನ ಪರ ನಿಂತವರಿಗೆ ಧನ್ಯವಾದ- ಮಲ್ಲವ್ವ

ಇಂದು ಅಥವಾ ನಾಳೆಯಿಂದಲೇ ಮಲ್ಲವ್ವ ಕೆಲಸಕ್ಕೆ ಹಾಜರು, ಅವರ ಸಂಬಳವನ್ನು ಯಾವುದೇ ಕಾರಣಕ್ಕು ತಡೆ ಹಿಡಿಯಲ್ಲ. ಮಲ್ಲವ್ವ ಕೊಂಡಸಕೊಪ್ಪ ಗ್ರಾಮದ ಸಂಬಂಧಿಕರ ಮನೆಯಲ್ಲಿ ಇದ್ದಾರೆ. ಅವರಿಗೆ ಮನೆ ನೀಡುವ ಬೇಡಿಕೆ ಸಹ ಇದೆ.ಬಸ್ತವಾಡ ಗ್ರಾಮದಲ್ಲಿ ಜಾಗ ಕೊಟ್ಟು ಮನೆ ನಿರ್ಮಿಸುತ್ತೇವೆ. ಈ ಬಗ್ಗೆ ಈಗಾಗಲೇ ಜಿಪಂ ಸಿಇಓ ಜತಗೆ ಚರ್ಚೆ ನಡೆಸಲಾಗಿದೆ ಎಂದರು.

ಇನ್ನೂ ಇಂದಿನಿಂದಲೇ ಕೆಲಸ ಆರಂಭಿಸಿದ ಮಲ್ಲವ್ವ ನನ್ನ ಪರವಾಗಿ ಅಭಿಯಾನ ಮಾಡಿದವರಿಗೆ ಧನ್ಯವಾದ ಅರ್ಪಿಸಿದರು. ಜಿಲ್ಲಾಧಿಕಾರಿ ನಮ್ಮ‌ ಊರಿನಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟರೇ ಒಳ್ಳಯೆದು. ನಮ್ಮ ಕಷ್ಟಕ್ಕೆ ಸ್ಪಂಧಿಸಿ ಎಲ್ಲರಿಗೂ ಧನ್ಯವಾದ ಹೇಳಿದ್ರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: