Karnataka News
BIGG NEWS : `PSI’ ನೇಮಕಾತಿ ಹಗರಣ : ಸಿಐಡಿಯಿಂದ ಮತ್ತೊಬ್ಬ ಆರೋಪಿ ಅರೆಸ್ಟ್

ಕಲಬುರಗಿ : ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈ ಮೂಲಕ ಪಿಎಸ್ ಐ ಅಕ್ರಮದಲ್ಲಿ ಬಂಧಿತರಾದವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳ ತಂಡ ವಸಂತ ನರಿಬೋಳ ಎಂಬ ಆರೋಪಿಯನ್ನು ಬಂಧಿಸಿದ್ದು, ಈಗಾಗಲೇ ಇವರ ಪುತ್ರ ಸುನಿಲ್ ಕುಮಾರ್ ನರಿಬೋಳನನ್ನು ಬಂಧಿಸಿದೆ.
ಪುತ್ರನ ಬಂಧನವಾಗಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ವಸಂತ ಕುಮಾರ್ ಪರಾರಿಯಾಗಿದ್ದರು. ವಸಂತಕುಮಾರ್ ಕಲಬುರಗಿಗೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಬಂಧಿಸಿದ್ದಾರೆ.
ಇನ್ನು ವಸಂತ ನರಿಬೋಳ ಪಿಎಸ್ ಐ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಗೆ ಲಕ್ಷಾಂತರ ರೂ. ಹಣ ಹೊಂದಿಸಿಕೊಟ್ಟ ಆರೋಪ ಎದುರಿಸುತ್ತಿದ್ದಾರೆ.