fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News

ಜೈಲಲ್ಲಿ ಕಣ್ಣೀರಿಡುತ್ತಾ ಆಯಸಿಡ್​ ನಾಗನಿಂದ ಪಶ್ಚಾತಾಪದ ಮಾತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆಯಸಿಡ್​ ದಾಳಿ ನಡೆಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡು 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ನಾಗೇಶ್​ ಕೊನೆಗೂ ತಾನು ಮಾಡಿದ್ದು ಬಹಳ ದೊಡ್ಡ ತಪ್ಪು ಎಂದು ಪಶ್ಚಾತಾಪದ ಮಾತುಗಳಾಡಿದ್ದಾನೆ.

 

ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಆಯಸಿಡ್ ನಾಗನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಾನು ದೊಡ್ಡ ಪ್ರಮಾದ ಮಾಡಿದೆ. ಆ ಹುಡುಗಿಗೆ ಆಯಸಿಡ್ ಹಾಕಬೇಕು ಅಂತ ಕನಸು, ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಎಂದು ಪೊಲೀಸ್ ಕಸ್ಟಡಿ ವೇಳೆ ನಾಗೇಶ್​ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾನೆ.

ನನಗೆ ಸಿಗದಿದ್ದು, ಬೇರೆಯವರಿಗೆ ಸಿಗಬಾರದು ಅನ್ನೋ ಕಾರಣಕ್ಕೆ ಆಯಸಿಡ್​ ಹಾಕಿಬಿಟ್ಟೆ. ಹಾಕಿದ ಮರುಕ್ಷಣ ಮನಪರಿವರ್ತನೆ ಆಯ್ತು, ಹೆದರಿಕೆಯು ಆಯ್ತು. ಅದರಿಂದ ಊರು ಬಿಟ್ಟೆ. ನನಗಿದು ಕಡಿಮೆ ಶಿಕ್ಷೆ. ಇನ್ನೂ ಹೆಚ್ಚಿನ ಶಿಕ್ಷೆ ಆಗಬೇಕು ಎಂದು ನಾಗೇಶ್ ಹೇಳುತ್ತಿದ್ದಾನೆ. ನಮ್ಮ ಅಣ್ಣ ಬೈದಿದ್ದಕ್ಕೆ ಆ ರೀತಿ ಮಾಡಿಬಿಟ್ಟೆ, ಅದು ಬಿಟ್ಟು ಬೇರೆನು ಕಾರಣ ಇಲ್ಲ. ನಾನು ನಾರ್ಮಲ್ ಆಗಬೇಕು, ತಪ್ಪು ತಿದ್ದಿಕೊಳ್ಳಬೇಕು ಅಂತ ತಮಿಳುನಾಡಿಗೆ ಹೋಗಿದ್ದೆ ಎಂದಿದ್ದಾನೆ.

ಮೊದಲು ಸಾಯೋಣ ಅನ್ಕೊಂಡೆ, ಆದ್ರೆ ಆಗ ಭಯ ಆಯ್ತು‌. ಸಾಯಲು ಮನಸ್ಸು ಬರಲಿಲ್ಲ ಎಂದಿರುವ ನಾಗೇಶ್​, ಈ ಹಿಂದೆ ನಾವು ಅಕ್ಕಪಕ್ಕದ ಮನೆಯಲ್ಲೇ ಇದ್ದೆವು. ಇಬ್ಬರ ಜಾತಿ ಬೇರೆ ಬೇರೆ ಇತ್ತು. 18 ವರ್ಷ ಇದ್ದಾಗ ಇಬ್ಬರು ಚೆನ್ನಾಗಿ ಮಾತಾಡ್ಕೊಂಡು ಇದ್ವಿ. ಆಕೆ ನನ್ನ ಜೊತೆ ಚೆನ್ನಾಗಿ ಮಾತಾಡೋದನ್ನು ನೋಡಿ ನನ್ನ ಮೇಲೆ ಲವ್ ಇದೆ ಅನ್ಕೊಂಡೆ. ಆದರೆ, ಅವಳಿಗೆ ನನ್ನ ಮೇಲೆ ಲವ್ ಇರಲಿಲ್ಲ. ನಂತರ ನಮ್ಮ ಮನೆಯವರು ಕೂಡ ಸ್ವಲ್ಪ ದೂರ ಮಾಡೋಕೆ ನೋಡಿದರು. 2020 ರಲ್ಲಿಯೂ ಆಯಸಿಡ್​ ದಾಳಿ ಯೋಚನೆ ಮಾಡಿದ್ದೆ, ಆಗ ಕರೊನಾ ಬಂದಿದ್ದರಿಂದ ಓಡಾಡೋಕೆ ಆಗಿಲ್ಲ ಎಂದು ಹೇಳಿದ್ದಾನೆ.

ಕಾಲೇಜಿನಲ್ಲೂ ಯುವತಿಯ ಮೇಲೆ ಗೂಢಾಚಾರಿಕೆ ಮಾಡಿಸಿರುವುದಾಗಿ ನಾಗೇಶ್ ಇದೇ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ. ಯಾರಾದರೂ ಆಕೆಯನ್ನ ನೋಡಿದ್ರೆ, ಮಾತಾಡಿದ್ರೆ ಮತ್ತು ಆಕೆಯ ತಂಟೆಗೆ ಹೋದ್ರೆ ಸರಿಯಿರಲ್ಲ ಅಂತಾ ಎಚ್ಚರಿಕೆ ಮಾಡಿದ್ದನಂತೆ. ಇದಾದ ಬಳಿಕ ಇತ್ತೀಚಿಗೆ ಮದುವೆ ಪ್ರಸ್ತಾಪ ಇಟ್ಟಿದ್ದ. ಆದ್ರೆ, ಅದಕ್ಕೆ ಯುವತಿ ಒಪ್ಪಲಿಲ್ಲ. ಅಲ್ಲದೆ, ನನ್ನ ಅಣ್ಣನಿಗೆ ಹೇಳಿ ನಿಂದಿಸಿದ್ದರಿಂದ ಅತಿರೇಕಕ್ಕೆ ಒಳಗಾಗಿ ತಪ್ಪು ಮಾಡಿಬಿಟ್ಟೆ. ಇನ್ನೂ ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ. ಶಿಕ್ಷೆ ಅನುಭವಿಸಿಕೊಂಡು, ಒಳ್ಳೆಯವನಾಗಬೇಕು. ಇನ್ನೂ ಮದುವೆನೂ ಆಗಲ್ಲ, ನನ್ನ ಪಾಡಿಗೆ ನಾನು ಇದ್ಬಿಡ್ತಿನಿ ಎಂದು ಆಯಸಿಡ್ ನಾಗ ತಿಳಿಸಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: