BIGG NEWS: ಬಾಗಲಕೋಟೆ ಜಿಲ್ಲಾಡಳಿತ ಕಚೇರಿಯಲ್ಲಿ ಲಂಚದ ಕರ್ಮಕಾಂಡ; ಲಂಚಕ್ಕೆ ಗಂಟು ಬಿದ್ದ ಸರ್ಕಾರಿ ನೌಕರ ಮಾರ್ಕಂಡಯ್ಯ..!!?

ಬಾಗಲಕೋಟೆ: ಡಬಲ್ ಬೇಡ(೨ ಲಕ್ಷ ಬೇಡ..)ಸಿಂಗಲ್ (ಒಂದು ಲಕ್ಷ)ಮಾಡ್ರಿ ..ಎರಡು ಹೇಳಿದ್ರಲ್ಲಾ ಎರಡು ಬೇಡ..ಲಾಸ್ಟ್ಗೆ ಒಂದಾದ್ರೂ ಮಾಡಿ..
ಹೀಗೆ ಬಾಗಲಕೋಟೆಯ ಜಿಲ್ಲಾಡಳಿತ ಕಚೇರಿಯಲ್ಲಿ ಸರ್ಕಾರಿ ನೌಕರ ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್ ಆಗಿದೆ.
ಸದ್ಯ ಬಾಗಲಕೋಟೆಯಲ್ಲಿ ಜಿಲ್ಲಾಆಡಳಿತ ಭವನದಲ್ಲಿ ಕೆಲಸ ನಿರ್ವಹಿಸುತ್ತಾನೆ ಎಂದು ಹೇಳಲಾಗುವ ಸರ್ಕಾರಿ ನೌಕರ ಮಾರ್ಕಂಡಯ್ಯನ ಲಂಚದ ಕರ್ಮಕಾಂಡ ಮೊಬೈಲ್ನಲ್ಲಿ ಸೆರೆಯಾಗಿದೆ.
ಅಂದ ಹಾಗೇ ಬಾಗಲಕೋಟೆ ನಗರದ ಕೆಇಬಿ ವರ್ಕ್ ಆದೇಶ ನೀಡುವುದಕ್ಕೆ ಸರ್ಕಾರಿ ನೌಕರ ಮಾರ್ಕಂಡಯ್ಯಒಂದು ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ.
ಇನ್ನು ಬಸವರಾಜ್ ಮಾಳವಾಡ್ ಜೊತೆ ಸರ್ಕಾರಿ ನೌಕರ ಮಾರ್ಕಂಡಯ್ಯ ಲಂಚದ ಬೇಡಿಕೆ ಇಡುವ ಸಂಬಂಧ ನಡೆಸುವ ಪೂರ್ಣ ಸಂಭಾಷಣೆ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಇನ್ನು ಸರ್ಕಾರಿ ನೌಕರ ಮಾರ್ಕಂಡಯ್ಯ ಮೊದಲಿಗೆ ಮೋಹನ್ ಎಂಬ ವ್ಯಕ್ತಿಗೆ ಫೋನ್ ಕರೆ ಮಾಡಿ, ಸರ್ ಮಾಳವಾಡ್ ಬಂದಿದ್ದಾರೆ. ಅವರು ನಮ್ಮ ರೇಂಜ್ನಲ್ಲಿ ಕುಳಿತಿಲ್ಲ..ನಾನು ಲಾಸ್ಟ್ಗೆ ಏನ್ ಅಂದೆ ಅಂದ್ರೆ ಹಂಗೇ ಮಾಡಿಕೊಂಡ್ರೆ ನಮ್ಮದೇನೂ ಗಂಟು ಹೋಗುತ್ತೆ..ಹಂಗೇ ಮಾಡಿಕೊಂಡ್ರೆ ನಿಮ್ಮದೇನೂ ಗಂಟು ಹೋಗುತ್ತೆ..ಹಂಗೇ ಮಾಡಿಕೊಟ್ರೆ ಒಂದು ಕಿಮ್ಮತ್ತಾದ್ರೂ ಇರುತ್ತೆ..ಇಟ್ಟಿಟ್ಟೂ ರೊಕ್ಕ ತಗೊಂಡು ಮಾಡಿಕೊಟ್ರೆ ಉಪಯೋಗ ಏನ್ ಬರುತ್ತೆ..ಬೇಡ ಬೇಡ ಹಂಗೇ ಮಾಡಿಕೊಂಡು ಹೋಗ್ರಿ ಅಂದಿದ್ದೀನಿ..
ಈಗ ಅವ್ರು ಬಂದರಾ.. ಡಬಲ್ ಬೇಡ(೨ ಲಕ್ಷ ಬೇಡ..)ಸಿಂಗಲ್ (ಒಂದು ಲಕ್ಷ)ಮಾಡ್ರಿ ..ಎರಡು ಹೇಳಿದ್ರಲ್ಲಾ ಎರಡು ಬೇಡ..ಲಾಸ್ಟ್ಗೆ ಎರಡಾದ್ರೂ ಮಾಡಿ ಅಂದಿದ್ದೀನಿ ಎಂದು ಲಂಚಕ್ಕಾಗಿ ಪುಂಖಾನು ಪುಂಖಾವಾಗಿ ಡೈಲಾಗ್ ಗಳನ್ನ ಹೊಡಿದಿರೋದು ಮೊಬೈಲ್ನಲ್ಲಿ ಸೆರೆಯಾಗಿದೆ.
ಇದೇ ವೇಳೆ ಈತ ಸರ್ಕಾರಿ ನೌಕರರ ನೋ ಇಲ್ಲ ಮಧ್ಯವರ್ತಿ ನೋ ಎಂಬ ಅನುಮಾನ ಕಾಡತೊಡಗಿದ್ದು, ಇಷ್ಟಕ್ಕೂ ಮಾರ್ಕಂಡೇಯ ಜೊತೆಗೆ ಮಾತಾಡಿ ಮೋಹನ್ ಯಾರು? ಇವನ ಮೇಲೇ ಯಾರ ಕೃಪಾಕಟಾಕ್ಷ ಇದೆ. ಆ ನಾಲ್ಕು ಮಂದಿ ಅಧಿಕಾರಿಗಳು ಯಾರು…..? ಎಂಬೆಲ್ಲಾ ಪ್ರಶ್ನೆಗಳು ಎದ್ದಿದ್ದು, ಬಾಗಲಕೋಟೆ ಡಿಸಿಯೋ ಅಥವಾ ಎಸಿಬಿ ಅಧಿಕಾರಿಗಳೋ ಸರಿಯಾಗಿ ತನಿಖೆ ಮಾಡಿದ್ರೆ ಪಕ್ಕಾ ಉತ್ತರ ಸಿಗಲಿದೆ.