fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Crime NewsKarnataka News

Belagavi: ಹಣ ಮಾಡುವ ದುರಾಸೆಯಿಂದ ಕಳ್ಳತನ: ಗೊಬ್ಬರ ಕದಿಯೋಕೆ ಮಾಸ್ಟರ್ ಪ್ಲಾನ್! ಆದರೂ ಸಿಕ್ಕಿಬಿದ್ರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಬೆಳಗಾವಿ(ಜೂ.4): ರಸಗೊಬ್ಬರ (Fertilizer) ಟ್ರಾನ್ಸಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಏಕಾಏಕಿ ಹಣ ಗಳಿಸುವ ಉದ್ದೇಶದಿಂದ ಅದೊಂದು ಖತರ್ನಾಕ ಐಡಿಯಾ ಮಾಡಿದ್ರು. ಅನ್ನ ಹಾಕಿದ ಕಂಪನಿಗೆ ಪಂಗನಾಮ ಹಾಕಲು ಹೊರಟವರು ಬೆಳಗಾವಿ (Belagavi) ಹಿಂಡಲಗಾ ಜೈಲು (Jail) ಸೇರಿದ್ದಾರೆ.
ನಿತ್ಯ ರೈಲಿನಲ್ಲಿ ಲಕ್ಷಾಂತರ ಟನ್ ಸರಕು ಸಾಗಾಟ ನಡೆಯುತ್ತದೆ. ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ರೈಲಿನಲ್ಲಿ ಬರುವ ಸರಕು ಸಾಗಣೆಗಳ ಶೇಖರಣೆಗೆ ಗಾಗಿ ಹತ್ತಾರು ಗೋದಾಮುಗಳು ಬೆಳಗಾವಿ ಸಮೀಪಸ ದೇಸೂರು ಗ್ರಾಮದಲ್ಲಿವೆ. ಕಳೆದ ಮೇ 17 ನೇ ತಾರೀಖು ರೈಲಿನಲ್ಲಿ (Train) ಬಂದ ಸುಮಾರು 72,609 ಚೀಲ ಡಿಎಪಿ ರಸಗೊಬ್ಬರವನ್ನ ದೇಸೂರನಲ್ಲಿರುವ ಸಾಗರ ಟ್ರಾನ್ಸ್ ಪೋರ್ಟ್ ನಲ್ಲಿ ಶೇಖರಿಸಿ ಇಡಲಾಗಿತ್ತು.

ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ ಬರುತ್ತಿರುವ ಮಾಹಿತಿ ತಿಳಿದಿದ್ದ ಸಾಗರ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಪಠಾತ್ ಹಾಗೂ ಪಂಡಿತ ಕಾಳಪ್ಪ ರಸಗೊಬ್ಬರ ಕಳ್ಳತನಕ್ಕೆ ಹೊಂಚು ಹಾಕಿದ್ರು. ಪ್ಲಾನ್ ಪ್ರಕಾರ ಸಾಗರ ಟ್ರಾನ್ಸ್ ಪೋರ್ಟ್ ಚಾಲಕನ ಸಹಾಯ ಪಡೆದು ಮತ್ತೊಂದು ಲಾರಿ ತರಿಸಿಕೊಂಡು ಬರೋಬ್ಬರಿ 900 ಡಿಎಪಿ ರಸಗೊಬ್ಬರ ಚೀಲಗಳನ್ನು ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ರು.

ಬಳಿಕ ರಸಗೊಬ್ಬರವನ್ನ ಬೇರೆ ಬೇರೆ ಸ್ಥಳಗಳಿಗೆ ಸಾಗಿಸುವಾಗ 900 ಚೀಲಗಳ ವ್ಯತ್ಯಾಸ ಕಂಡುಬಂದಿದೆ. ತಕ್ಷಣ ಅಲರ್ಟ ಆದ ಸಾಗರ ಟ್ರಾನ್ಸ್ ಪೋರ್ಟ್ ಮ್ಯಾನೇಜರ್ ಶಿವಾಜಿ, ಮೇ 23 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದರು.

ತಪ್ಪೊಪ್ಪಿಕೊಂಡ ಆರೋಪಿ

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ ಹಂಡಾ, ಸಾಗರ ಟ್ರಾನ್ಸ್ ಪೋರ್ಟ್ ಕೆಲಸಗಾರರ ಮೇಲೆಯೇ ನಿಗಾವಹಿಸಿದ್ರು. ಈ ವೇಳೆ ನಾಗರಾಜ್ ಪಠಾತ ಹಾಗೂ ಪಂಡಿತ ಕಾಳಪ್ಪ ವರ್ತನೆಯಿಂದ ಅನುಮಾನಗೊಂಡ ಪೋಲಿಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಿಸಿದಾಗ ರಸಗೊಬ್ಬರ ಕದ್ದಿದು ನಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಹಣ ಮಾಡುವ ದುರಾಸೆಯಿಂದ ಕಳ್ಳತನ

ಕಳ್ಳತನದ ಮಾಸ್ಟರ್ ಮೈಂಡ್ ಗಳಾದ ನಾಗರಾಜ್ ಪಠಾತ ಹಾಗೂ ಪಂಡಿತ ಕಾಳಪ್ಪ ಹಣ ಮಾಡುವ ದುರಾಸೆಯಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಇಬ್ಬರು ಪ್ರಮುಖ ಆರೋಪಿಗಳಿಗೆ ಲಾರಿ ಚಾಲಕರಾಗಿ ಸಹಕರಿಸಿದ ಲಾರಿ ಚಾಲಕರಾದ ವಸೀಂ ಮಕಾಂದಾರ, ಮಂಜುನಾಥ ಹಮ್ಮನವರ, ಸನದಿ ಎಂಬಾತರನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರಿಂದ 10 ಲಕ್ಷ ಮೌಲ್ಯದ 810 ಚೀಲ ರಸಗೊಬ್ಬರವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. 72 ಸಾವಿರ ಚೀಲಗಳಲ್ಲಿ 900 ಚೀಲ ಕದ್ದರೆ ಯಾರಿಗೂ ಗೊತ್ತಾಗಲ್ಲ ಎಂದು ಅನ್ನ ಹಾಕಿದ್ದ ಕಂಪನಿಗೆ ಕನ್ನ ಹಾಕಿದ ಖದೀಮರು ಅಂದರ ಆಗಿದ್ದು, ಪೋಲಿಸರು ತನಿಖೆ ಮುಂದುವರೆಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: