ನಿಮ್ ನಿಮ್ ಚಡ್ಡಿ ನೀವು ಬಿಚ್ಕೊಳಿ, ಬೇರೆಯವರದ್ದು ಬಿಚ್ಚಿದ್ರೆ ಏನ್ ಸಿಗತ್ತೆ ಎಂದು ಪ್ರಶ್ನಿಸಿದ ಎಚ್ಡಿಕೆ
ಬೆಳಗಾವಿ: ದಯವಿಟ್ಟು.. ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ, ನಿನ್ನ ನಿನ್ನ ಚಡ್ಡಿ ಉದುರಿಸಿಕೊಳ್ಳಿ, ಬೇರೆಯವರದ್ದು ಬಿಚ್ಚಿದ್ರೆ ಏನ್ ಸಿಗತ್ತೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಚಡ್ಡಿ ಬಿಚ್ಚಿದ್ರೇ ಏನೂ ಸಿಗುತ್ತೆ.
ಕಾಂಗ್ರೆಸ್ ಅವರು ಚಡ್ಡಿ ಸುಟ್ಟರು. ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಅಂತಾರೆ. ಮೊದಲು ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ ಎಂದೂ ಬಿಜೆಪಿ, ಕಾಂಗ್ರೆಸ್ ಅನ್ನು ಟೀಕಿಸಿದರು.
ರಾಜ್ಯದ ಜನತೆ ಗೌರವವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿ. ನಿಮ್ಮ ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ. ರಾಜ್ಯದ ಜನತೆಗೆ ಅವಮಾನ ಆಗದ ರೀತಿ ಜನಗಳ ಚಡ್ಡಿ ಬಿಚ್ಚಬೇಡಿ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಕುರಿತು ಮಾತನಾಡಿದ ಎಚ್ಡಿಕೆ, ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಟೈಂ ತೆಗೆದುಕೊಳ್ಳಲು ಆಗಲ್ಲ. ದೆಹಲಿಗೆ ಹೋಗ್ತಾರೆ ಖಾಲಿ ಕೈಯಲ್ಲಿ ವಾಪಸ್ ಬರ್ತಾರೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಮುಖ್ಯಮಂತ್ರಿಗಳಿಗೆ ಗೌರವೇ ಇಲ್ಲ. ಸಿಎಂ ಅಷ್ಟೇ ಅಲ್ಲ ಇಡೀ ರಾಜ್ಯದ ಜನರಿಗೆ ಮಾಡಿರೋ ಅವಮಾನ ಎಂದು ಹೇಳಿದರು.
ನವ ಕರ್ನಾಟಕ ನಿರ್ಮಾಣದ ಬಗ್ಗೆ ಸಿಎಂ ಮಾತನಾಡುತ್ತಾರೆ. ಯಾವ ನವ ಕರ್ನಾಟಕ ಮಾಡ್ತಿರಿ? ಯಾವ ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತಿವೆ? ಕೇವಲ ಕಾಗದ ಮೇಲೆ ಹೇಳಿದ್ರೆ ಆಗಲ್ಲ. ಬೆಂಗಳೂರಿನಲ್ಲಿ ಮೊನ್ನೆ ಪ್ರವಾಹ ಬಂತು. ನಾನು ಅನೇಕ ಕಡೆಗಳಲ್ಲಿ ಭೇಟಿ ನೀಡಿದ್ದೇನೆ. ಕೈಗಾರಿಕೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಆಗಿದೆ. ಅವರಿಗೆ ಏನ್ ಪರಿಹಾರ ಕೊಡ್ತಿರಿ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಸರ್ಕಾರ ಯಾರು ನಿಯಂತ್ರಣ ಮಾಡುತ್ತಾರೆ ಅಂತ ಅವರೇ ಹೇಳಬೇಕು. ಸರ್ಕಾರದ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇದೆ. ಅದು ಎಲ್ಲಾರಿಗೂ ಗೊತ್ತಿದೆ ನಾನೇನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಣದ ಕೈಗಳ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಕಿಡಿ ಕಾರಿದರು.