ಕಾಕತಿ ಪೋಲಿಸರ ಭರ್ಜರಿ ಕಾರ್ಯಾಚರಣೆ ಬೆಳಗಾವಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1220 ಅಕ್ಕಿ ಚೀಲ ವಶಕ್ಕೆ

ಬೆಳಗಾವಿ : ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಕಾಕತಿ ಪೋಲಿಸ್ ಠಾಣೆಯಲ್ಲಿ ಪೋಲಿಸರ ಭರ್ಜರಿ ಕಾರ್ಯಾಚರಣೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ, ಆದರೆ ವಾಸ್ತವ ಬೇರೆಯೇ ಇದೆ, ಕನ್ನಡ ಪ್ರೇಮಿಗಳು, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಪದಾಧಿಕಾರಿಗಳು ಜಿಲ್ಲಾದ್ಯಕ್ಷ ಬಾಳಪ್ಪ ಗುಡಗನಟ್ಟಿ ಅವರ ಮಾರ್ಗದರ್ಶನಲ್ಲಿ ಅಕ್ರಮ ಅಕ್ಕಿ ಹೇರಿಕೊಂಡು ಲಾರಿ ನೆರೆ ರಾಜ್ಯ ಮಹಾರಾಷ್ಟಕ್ಕೆ ಹೊಗುತ್ತಿರುವ ವಾಹನ ಪತ್ತೆ ಮಾಡಿದ್ದಾರೆ.
ಒಂದು ದಾಬಾ ಬಳಿ ಅನುಮಾನಸ್ಪದವಾಗಿ ಕಂಡ ಲಾರಿ ಬಳಿ ನಿಂತು ವಾಹನದಲ್ಲಿ ಏನಿದೆ ಎಂದು ನೋಡಲು ಹೊರಟಾಗ ಲಾರಿಯ ಚಾಲಕ ಬಂದು ಗಾಡಿಲಿ ಅಕ್ರಮ ಅಕ್ಕಿ ಇದೆ ಎಂದು ಹೇಳಿದಾಗ ತಕ್ಷಣವೇ ಪೋಲಿಸರ ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ್ದಾರೆ.
ಕರೆ ಮಾಡಿದ ಕೇವಲ ಎಂಟು ನಿಮಿಷಕ್ಕೆ ಘಟನಾ ಸ್ಥಳಕ್ಕೆ ೧೧೨ ಪೋಲಿಸ್ ಸಿಬ್ಬಂದಿ ತುಕಾರಾಮ್ ದೊಡಮನಿ ಹಾಗೂ ಡ್ರೈವರ್ ಎಲ್ಲಪ್ಪ ಅವರು ಬಂದಿದ್ದು ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.ಪೋಲಿಸರು ಬಂದು ಆಹಾರ ಇಲಾಖೆಯ ಸಿಬ್ಬಂದಿಯಿಂದ ಪಡಿತರ ಅಕ್ಕಿ ಎನ್ನುವುದು ಖಚಿತಪಡಿಸಿಕೊಂಡು ಲಾರಿಯನ್ನ ಪೋಲಿಸ್ ಠಾಣೆಗೆ ಓಯ್ದಿದ್ದಾರೆ.
ಆಹಾರ ಅಧಿಕಾರಿಗಳು ರಾತ್ರಿ ಬಂದು ಪರಿಶೀಲಿಸಿ ಹೋಗಿದ್ದಾರೆ, ಇದು ಇದ್ದ ಮ್ಯಾಟರ್ರು, ಆದರೆ ಕಾಕತಿ ಪೋಲಿಸರು ಸಾರ್ವಜನಿಕರ ಕಣ್ಣಿಗೆ ಹೀರೋ ಆಗಲು ತಾವೇ ವಾಹನ ಹಿಡಿದು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ ಎಂದು ಕೆಲ ಪತ್ರಿಕೆಗಳಿಗೆ ತಪ್ಪು ಮಾಹಿತಿ ನೀಡಿ ಹೀರೋ ಆಗಲು ಯತ್ನಿಸಿದ್ದಾರೆ..
ಈ ಪ್ರಕರಣದ ರಿಯಲ್ ಹೀರೋಗಳು ಕನ್ನಡ ರಕ್ಷಣಾ ವೇದಿಕೆಯ ಯುವ ಘಟಕದ ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷರಾದ ಬಾಳಪ್ಪ ಗುಡಗನಟ್ಟಿ ಅವರು ಹಾಗೂ ೧೧೨ ಪೋಲಿಸ್ ಸಿಬ್ಬಂದಿಗಳಾದ ತುಕಾರಾಮ್ ದೊಡಮನಿ ಹಾಗೂ ಎಲ್ಲಪ್ಪ ಅವರು.ಕನ್ನಡಪರ ಸಂಘಟನೆಗಳು ಹಾಗೂ ಪತ್ರಕರ್ತರು ಅನೇಕ ಅಕ್ರಮಗಳನ್ನ ಹಿಡಿದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ, ಇಂತವರಿಗೆ ಪೋಲಿಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಸೂಕ್ತ ರಕ್ಷಣೆ ಹಾಗೂ ಗೌರವ ಕೊಡಬೇಕು ಎಂಬುವುದು ನಮ್ಮ ಆಶಯ.
ಸಧ್ಯ ಈ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
1) ಮಹಮ್ಮದಹ ಹುಸೇನ ಅಬ್ದುಲ್ ಖಾದತ ಹುಲಗುರ ,
ವಯಸ್ಸು 34 ವರ್ಷ ಸಾ ॥ ರಾಮಲಿಂಗೇಶ್ವರ ನಗರ,
ಗೋಕುಲ ರೋಡ , ಉದ್ಯಮ ನಗರ. ಹುಬ್ಬಳ್ಳಿ
2) ಖಾಜಾಮೈನುದ್ದೀನ್ ಖಾದರಬಾಷಾ ಬನ್ನೂರ ಸಾ ॥
ನೇಕಾರ ನಗರ , ಹಳೇ ಹುಬ್ಬಳ್ಳಿ ಇಬ್ಬರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಇವರಿಬ್ಬರು ಎರಡು ಟ್ರಕ್ (Ka33B0699& Ka63 8749) ನೇದ್ದರಲ್ಲಿ 50 ಕೆ.ಜಿ.ಯ 600 ಚೀಲಗಳಷ್ಟು ಮತ್ತು ಟ್ರಕ್ ನಂ (4-63 /8749 ರಲ್ಲಿ 50 ಕೆ. ಜಿ.ಯ 620 ಚೀಲಗಳಷ್ಟು , ಒಟ್ಟು 12,00,000 /-(12 ಲಕ್ಷರೂ) ಮೌಲ್ಯದ ಒಟ್ಟು 60 ಟನ್ 10 ಕ್ಲಿಂಟಲ್ ರೇಶನ್ / ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.