Karnataka News
Hubballi: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ಮಂಗನಂತೆ ಮಾಡೋದನ್ನ ನೋಡಿ ಪೆಚ್ಚಾದ ಜನ

ಹುಬ್ಬಳ್ಳಿ: ರೈಲು (Train) ಹತ್ತುವಾಗ ಅಥವಾ ಇಳಿಯುವಾಗ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕಂಟಕವಾಗಬಲ್ಲದು. ಸ್ವಲ್ಪದರಲ್ಲಿಯೇ ರೈಲಿನಡಿ ಸಿಲುಕಿ ಅದೆಷ್ಟೋ ಜನ ಸಾವಿಗೀಡಾಗಿರೋದನ್ನು ನಾವು ಕಾಣ್ತೇವೆ. ಇಷ್ಟೆಲ್ಲ ನಮ್ಮ ಕಣ್ಣ ಮುಂದಿದ್ದರೂ ಕೆಲವೊಬ್ಬರು ಮಾಡೋ ಹುಚ್ಚು ಸಾಹಸಗಳು ಅಚ್ಚರಿ ಮೂಡಿಸುತ್ತದೆ.
ಚಲಿಸುತ್ತಿರುವ ರೈಲಿನಲ್ಲಿ (Moving Train) ಜೀವದ ಮಹತ್ವವಿಲ್ಲದೆ ಯುವಕನೋರ್ವ (Youth) ಹುಚ್ಚಾಟ ಮೆರೆದ ಘಟನೆ ಮಂಗಳೂರಿನಿಂದ ಹುಬ್ಬಳ್ಳಿ (Managluuru To Hubballi) ಕಡೆಗೆ ಬರುತ್ತಿದ್ದ ರೈಲಿನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಲ್ಲಿ ಯುವಕ ಹುಚ್ಚಾಟ ಮಾಡಿದ ಯುವಕ, ನೋಡುಗರ ಎದೆ ಬಡಿದುಕೊಳ್ಳುವಂತೆ ಮಾಡಿದ್ದಾನೆ. ರೈಲಿನ ಬಾಗಿಲಿನಲ್ಲಿ ನಿಂತ ಯುವಕ, ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವ ದುಸ್ಸಾಹಸ ಮಾಡಿದ್ದಾನೆ.

ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು, ಕಾಲು ಎತ್ತಿ ಜಿಗಿದಂತೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಲೇ ಸಾಗಿದ್ದಾನೆ. ಸುಮಾರು ಹೊತ್ತು ಯುವಕ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.
ರೈಲು ವೇಗವಾಗಿ ಚಲಿಸುತ್ತಿರುವಂತೆಯೇ ಯುವಕನ ಹುಚ್ಚಾಟವೂ ಹೆಚ್ಚಾಗಿದೆ. ಮಾರ್ಗದ ಮಧ್ಯೆ ಸಾಕಷ್ಟು ತಿರುವುಗಳು, ಪ್ರಪಾತಗಳು ಇದ್ದರೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಅಪ್ಪಿ ತಪ್ಪಿ ಏನಾದರೂ ಕಾಲೂ ಜಾರಿ ಬಿದ್ದರೇ ಜೀವವೇ ಹೋಗೋ ಆತಂಕ ಎದುರಾಗಿತ್ತು.
ರೈಲಿನಲ್ಲಿ ಯುವಕನ ಮಂಗನಾಟ
ಪ್ರಾಣದ ಹಂಗಿಲ್ಲದೆ ಮಂಗನ ರೀತಿಯಲ್ಲಿ ಯುವಕ ವರ್ತಿಸಿದ್ದು, ಸಹ ಪ್ರಯಾಣಿಕರನ್ನೂ ಕೆರಳಿಸುವಂತೆ ಮಾಡಿದೆ. ಸಹ ಪ್ರಯಾಣಿಕರು ಬುದ್ಧಿವಾದ ಹೇಳಿದರೂ ಕೇಳದೇ ಯುವಕ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ. ಯುವಕನ ಹುಚ್ಚಾಟದ ದೃಶ್ಯಗಳನ್ನು ನೋಡಿದ್ರೆ ಮೈ ಝುಮ್ಮೆನ್ನುತ್ತೆ. ಯುವಕನ ಹುಚ್ಚಾಟದ ದೃಶ್ಯಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.