
ಬೆಂಗಳೂರು: ಹಣ ಕೊಡು ಎಂದು ಸದಾ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ ಈ ಕೊಲೆ ನಡೆದಿದೆ.
ಆರ್.ಟಿ.ನಗರದ ಚಾಮುಂಡಿನಗರದ ನಿವಾಸಿ ಸುಲೇಮಾನ್ (18) ಕೊಲೆಗೀಡಾದ ಯುವಕ.
ಈತನ ತಂದೆ ಮಹಮ್ಮದ್ ಶಂಶೀರ್ ಕೊಲೆ ಆರೋಪಿ. ವಿದ್ಯಾಭ್ಯಾಸ ಅರ್ಧಕ್ಕೇ ನಿಲ್ಲಿಸಿದ್ದ ಸುಲೇಮಾನ್ ಎಲ್ಲಿಯೂ ಕೆಲಸಕ್ಕೂ ಹೋಗದೆ ಸುಮ್ಮನೆ ಅಲೆದಾಡುತ್ತಿದ್ದ.
ಅಷ್ಟೇ ಅಲ್ಲದೆ, ಹಣ ಕೊಡು ಎಂದು ತಂದೆಯನ್ನು ಯಾವಾಗಲೂ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತು. ಈ ವೇಳೆ ತಂದೆ ಮಗನ ತಲೆಗೆ ಸರಳಿನಿಂದ ಹೊಡೆದಿದ್ದು, ತೀವ್ರ ರಕ್ತಸ್ರಾವಕ್ಕೀಡಾದ ಮಗ ಮೃತಪಟ್ಟಿದ್ದಾನೆ. ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಮ್ಮದ್ ಶಂಶೀರ್ನನ್ನು ಬಂಧಿಸಿದ್ದಾರೆ.