fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EntertainmentMake Money

ಸಲ್ಮಾನ್ ಖಾನ್​ ಸಂಭಾವನೆ, ಒಟ್ಟೂ ಆಸ್ತಿ ಎಷ್ಟು? ಅಬ್ಬಬ್ಬಾ ಇಷ್ಟೊಂದಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸಲ್ಮಾನ್ ಖಾನ್ ಬಹಳ ಕಷ್ಟಪಟ್ಟು ಮೇಲೆ ಬಂದ ನಟ. ಆರಂಭದಲ್ಲಿ ಅವಕಾಶಗಳು ಇಲ್ಲದಾಗ ಸಲ್ಲು ದುಡ್ಡು ಕೊಟ್ಟು ಸುಳ್ಳು ಸುದ್ದಿ ಬರೆಸಿಕೊಂಡಿದ್ದರು. ಈಗ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ.ನಟ ಸಲ್ಮಾನ್ ಖಾನ್ (Salman Khan) ಬಾಲಿವುಡ್​ನ ಬೇಡಿಕೆಯ ನಟ.

ಸಲ್ಲು ಭಾಯ್ಎಂದೇ ಅವರು ಫೇಮಸ್. ಅವರು ಬಾಲಿವುಡ್​ನಲ್ಲಿ (Bollywood) ದೊಡ್ಡ ಮಟ್ಟದ ಹವಾ ಇಟ್ಟಿದ್ದಾರೆ. ಅವರು ಪ್ರತಿ ಚಿತ್ರಕ್ಕೆ ಕೋಟಿಕೋಟಿ ಸಂಭಾವನೆ ಪಡೆಯುತ್ತಾರೆ. ಸಲ್ಲು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕ ಹೊರತಾಗಿಯೂ ಆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಉದಾಹರಣೆ ಸಾಕಷ್ಟಿದೆ. ಅವರಿಗೆ ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಆದಾಗ್ಯೂ ಅವರ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಅವರ ನೆಟ್​ವರ್ತ್​ ಎಷ್ಟಿದೆ, ಅವರು ಪ್ರತಿ ಸಿನಿಮಾಗೆ ಪಡೆವ ಸಂಭಾವನೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಂಭಾವನೆ

ಸಲ್ಮಾನ್ ಖಾನ್ ಬಹಳ ಕಷ್ಟಪಟ್ಟು ಮೇಲೆ ಬಂದ ನಟ. ಆರಂಭದಲ್ಲಿ ಅವಕಾಶಗಳು ಇಲ್ಲದಾಗ ಸಲ್ಲು ದುಡ್ಡು ಕೊಟ್ಟು ಸುಳ್ಳು ಸುದ್ದಿ ಬರೆಸಿಕೊಂಡಿದ್ದರು. ಈಗ ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. 2016ರ ‘ಸುಲ್ತಾನ್​’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನುವ ವಿಚಾರ ಸುದ್ದಿ ಆಗಿತ್ತು. ನಂತರ ‘ಟೈಗರ್ ಜಿಂದಾ ಹೈ’ ಚಿತ್ರಕ್ಕಾಗಿ 130 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದರು.

ನೆಟ್​ವರ್ತ್​

ಸಲ್ಮಾನ್​ ಖಾನ್​ಗೆ ಸಿನಿಮಾದಿಂದ ಮಾತ್ರ ಹಣ ಬರುತ್ತಿಲ್ಲ. ಅವರು ಸಾಕಷ್ಟು ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಹಲವು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರ ಒಟ್ಟೂ ಆಸ್ತಿ 2,225 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಇಂಡಿಯಾ.ಕಾಮ್ ವರದಿ ಪ್ರಕಟ ಮಾಡಿದೆ.

ಹಲವು ಕಡೆಗಳಲ್ಲಿ ಪ್ರಾಪರ್ಟಿ

ಸಲ್ಮಾನ್ ಖಾನ್ ಮುಂಬೈನ ಕೆಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ಜಾಗ ಹೊಂದಿದ್ದಾರೆ. ಬಾಂದ್ರಾದಲ್ಲಿ ದೊಡ್ಡ ಅಪಾರ್ಟ್​ಮೆಂಟ್ ಇದೆ. ಇನ್ನು ಪನ್ವೇಲ್​ನಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಇದಲ್ಲದೆ ಇನ್ನೂ ಅನೇಕ ಕಡೆಗಳಲ್ಲಿ ಸಲ್ಮಾನ್ ಪ್ರಾಪರ್ಟಿ ಹೊಂದಿದ್ದಾರೆ.

ತಿಂಗಳ ವೇತನ

ಸಲ್ಮಾನ್ ಖಾನ್ ಅವರು ಪ್ರತಿ ತಿಂಗಳು ಕೋಟಿ ಕೋಟಿ ಸಂಭಾವನೆ ಎಣಿಸುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ ಅವರಿಗೆ ಪ್ರತಿ ತಿಂಗಳು 16 ಕೋಟಿ ರೂಪಾಯಿ ವೇತನ ಬರುತ್ತದೆ.

ಕೈಯಲ್ಲಿದೆ ಹಲವು ಸಿನಿಮಾ

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ‘ಟೈಗರ್ 3’ ಸಿನಿಮಾದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು 100+ ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಶಾರುಖ್​ ನಟನೆಯ ‘ಪಠಾಣ್​’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಪಡೆದಿಲ್ಲ. ‘ಕಭಿ ಈದ್​ ಕಭಿ ದಿವಾಲಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: