
ಬೆಳಗಾವಿ : ನಾನು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾಗಿ ನನಗೆ ಹೆಮ್ಮೆಯಿಂದ ಶಿವಾಜಿ ಮಹಾರಾಜರ ಹೆಸರು ಹೇಳಲು ಜೈಕಾರ ಕೂಗಲು ಹೆಮ್ಮೆಯಾಗುತ್ತದೆ, ಆದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಹೇಳಿ ಅವರ ಗುಣಗಾನ ಮಾಡಿ ಮತ ಕೇಳುವ ಅಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಬಿಜೆಪಿ ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ್ ಚೀಮಾರಿ ಹಾಕಿದ್ದಾರೆ.
ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಆದರ್ಶ ನಮ್ಮೆಲ್ಲರಿಗೂ ಪ್ರೇರಕವಾಗಿದೆ. ಆದರೆ ಈಗಿನ ಸ್ಥಿತಿಯಲ್ಲಿ ಕೇಸರಿ ಧ್ವಜ ಒಂದು ಸಾಂಕೇತಿಕ ಧರ್ಮದ ಪ್ರತಿಬಿಂಬವಾಗಿದೆ. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಜಾತಿ ಧರ್ಮ ಜನಾಂಗ ವನ್ನು ಸೇರಿಸಿ ಸ್ವರಾಜ್ಯ ಅವನು ನಿರ್ಮಿಸಿದರು.
ಆದರೆ ಈಗಿನ ಸರ್ಕಾರ ಜಾತಿಮತ ಭೇದಗಳ ಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಅಭಿವೃದ್ಧಿ ಪರವಾಗಿ ಮಾತನಾಡುವುದನ್ನು ಬಿಟ್ಟಿದೆ. ಬೆಲೆ ಏರಿಕೆ ಬಗ್ಗೆ ಆಗಲಿ ಪೆಟ್ರೋಲ್ ಡೀಸೆಲ್ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತಾಡ್ತಾ ಇಲ್ಲ ಇವರಿಗೆ ಅಭಿವೃದ್ಧಿ ರಾಜಕಾರಣ ಬೇಕಾಗಿಲ್ಲ ಇವರಿಗೆ ಜಾತಿ ಮತ ಭೇದ ರಾಜಕಾರಣಬೇಕಾಗಿದೆ.
ಈ ಸಂದರ್ಭದಲ್ಲಿ ನಾನು ಬಡವರ ಅನ್ನದಾತ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಬಡವರ ಹಿತಕಾಯುವ ಕಾರ್ಯಕ್ರಮಗಳಾಗಿದ್ದವು ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಸಮೃದ್ಧಿಯ ಸಾಂಕೇತಿಕವಾಗಿ ಇರುವಂತ ಪಕ್ಷವಾಗಿದೆ ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅದರ ಜೊತೆಗೆ ಪದವೀಧರ ಮತಕ್ಷೇತ್ರ ಹಾಗೂ ಶಿಕ್ಷಕರ ಮತಕ್ಷೇತ್ರ ಅಭ್ಯರ್ಥಿಗಳಾದ ಪರವಾಗಿ ಪ್ರಕಾಶ್ ಹುಕ್ಕೇರಿ ಮತ್ತು ಸುನಿಲ್ ಸಂಕ ಅವರಿಗೆ ಮತನೀಡಿ ನಮ್ಮ ಹಿತ ಕಾಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.