ಇಲ್ಲಿದೆ ನೋಡಿ ಥಳಿಸುತ್ತಿರುವ ವಿಡಿಯೋ: ಮದುವೆ ತಡೆಯಲು ಫೋಟೋ ವೈರಲ್ ಮಾಡಿ ಬೆದರಿಕೆ! ವಿದ್ಯಾರ್ಥಿನಿ ಜತೆ ಬೆಳಗಾವಿ ಶಿಕ್ಷಕನ ‘ರೊಮಾನ್ಸ್’
ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ಬೆಳಗಾವಿ ಜಿಲ್ಲೆಯ ಸವದತ್ತಿನ ಶಾಲಾ ಶಿಕ್ಷಕನನ್ನು ಗ್ರಾಮಸ್ಥರು ಥಳಿಸುತ್ತಿರುವ ದೃಶ್ಯ

ಬೆಳಗಾವಿ: ವಿದ್ಯಾರ್ಥಿನಿಯರ ಜತೆ ಶಿಕ್ಷಕರ ಕಾಮದಾಟ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ನಡುವೆಯೇ ಬೆಳಗಾವಿಯಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.
ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳಿಗೆ ಸರ್ಕಾರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಬಾಲಕಿಯನ್ನು ಪುಸಲಾಯಿಸಿ ರೊಮಾನ್ಸ್ ಮಾಡಿದ ಶಿಕ್ಷಕ ಮೊಬೈಲ್ನಲ್ಲಿ ಫೋಟೋ ತೆಗೆದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿನಿ ಎಂಟನೆ ಕ್ಲಾಸ್ನಲ್ಲಿ ಇರುವಾಗಲೇ ಈ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ. ವಿದ್ಯಾರ್ಥಿನಿ 10ನೇ ಕ್ಲಾಸ್ಗೆ ಹೋಗುವವರೆಗೂ ಇದೇ ಮುಂದುವರೆದಿದೆಯಂತೆ. ನಂತರ ವಿದ್ಯಾರ್ಥಿನಿ ಕಾಲೇಜು ಸೇರಿದಾಗ ಮನೆಯಲ್ಲಿ ಆಕೆಗೆ ಮದುವೆ ಗೊತ್ತು ಮಾಡುವ ವೇಳೆ ಶಿಕ್ಷಕ ಈ ಫೋಟೋಗಳನ್ನು ತಮ್ಮ ವಾಟ್ಸ್ಆಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡು ವೈರಲ್ ಮಾಡಿರುವುದಾಗಿ ಹೇಳಲಾಗಿದೆ.
ಯುವತಿ ಮದುವೆ ನಿಲ್ಲಿಸುವ ದುರುದ್ದೇಶದಿಂದ ಶಿಕ್ಷಕ ಈ ರೀತಿ ಮಾಡುತ್ತಿರುವುದಾಗಿ ಆರೋಪಿಸಲಾಗಿದೆ. ಮೂರು ದಿನಗಳ ಹಿಂದೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಫೋಟೋಗಳು ವೈರಲ್ ಆಗುತ್ತಿದ್ದಂತೆ ದೈಹಿಕ ಶಿಕ್ಷಣ ಶಿಕ್ಷಕನಿಗೆ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಯ ಕುಟುಂಬಸ್ಥರು, ಗ್ರಾಮಸ್ಥರು ಶಿಕ್ಷಕನಿಗೆ ಚಪ್ಪಲಿ ಏಟು ನೀಡಿ ಥಳಿಸಿದ್ದಾರೆ.
ಹೈಸ್ಕೂಲ್ನಲ್ಲಿ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ, ಯುವತಿ ನೀಡಿದ ದೂರಿನ ಮೇರೆಗೆ ದೈಹಿಕ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.
ಇಲ್ಲಿದೆ ನೋಡಿ ಥಳಿಸುತ್ತಿರುವ ವಿಡಿಯೋ:
ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ಬೆಳಗಾವಿ ಜಿಲ್ಲೆಯ ಸವದತ್ತಿನ ಶಾಲಾ ಶಿಕ್ಷಕನನ್ನು ಗ್ರಾಮಸ್ಥರು ಥಳಿಸುತ್ತಿರುವ ದೃಶ್ಯ pic.twitter.com/PQNOGIEHiq
— Vijayavani (@VVani4U) June 9, 2022