Karnataka News
ಗೋವಾಗೆ ಅಕ್ರಮ ಗೋಮಾಂಸ ಸಾಗಾಟ : ಇಬ್ಬರು ಆರೋಪಿಗಳು ಅರೆಸ್ಟ್

ಬೆಳಗಾವಿ : ನಿನ್ನೆ ರಾತ್ರಿ ಬಾಗೇವಾಡಿ ಪೊಲೀಸರ ಭರ್ಜರಿ ಬೇಟೆ ಹಾಕಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನು ಪುಂಡರನ್ನು ಹೆಡೆಮುರಿ ಕಟ್ಟಿದ್ದಾರೆ. ಪಿಎಸ್ಐ ಶಶಿಕುಮಾರ್ ಕೊರಲೆ ತಂಡ ರಾತ್ರಿ ಸುಮಾರು 2-30ಕ್ಕೆ ಹಳ್ಗೆ ಮರಡಿ ಕ್ರಾಸ್ ಮುಖಾಂತರ ಎರಡು ವಾಹನಗಳ ಮುಖಾಂತರ ಗೋವಾಗೆ ಗೋ ಮಾಂಸ ಸಾಗಿಸಲಾಗುತ್ತಿತ್ತು.
ಪಿಎಸ್ಐ ಶಶಿಕುಮಾರ್ ತಂಡ ವಾಹನ ಅಡ್ಡಗಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹುಸೇನ್ ದೇಸಾಯಿ ಹಾಗೂ ಆಜಾದ್ ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.