Politics
BREAKING NEWS: ‘ರಾಜ್ಯಸಭೆ ಚುನಾವಣೆ’ಯಲ್ಲಿ ಅಡ್ಡಮತದಾನ ಮಾಡಿದ ಇಬ್ಬರು JDS ಶಾಸಕರಿಗೆ ನೋಟಿಸ್ – ಸಿಎಂ ಇಬ್ರಾಹಿಂ

ಬೆಂಗಳೂರು: ನಿನ್ನೆ ನಡೆದಂತ ರಾಜ್ಯಸಭೆ ಚುನಾವಣೆಯಲ್ಲಿ ಐ ಲಂವ್ ಕಾಂಗ್ರೆಸ್.. ಐ ವೋಟ್ ಕಾಂಗ್ರೆಸ್ ಎಂಬುದಾಗಿ ಹೇಳಿಕೆ ನೀಡಿ ಅಡ್ಡ ಮತದಾನ ಮಾಡಿದ್ದಂತ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಹಾಗೂ ಬ್ಯಾಲೆಡ್ ಪೇಪರ್ ಖಾಲಿ ಬಿಟ್ಟು ಮತ ಹಾಕದೇ ಇದ್ದಂತ ಗುಬ್ಬಿಯ ಶಾಸಕ ಎಸ್ ಆರ್ ಶ್ರೀನಿವಾಸ್ ಗೆ ನೋಟಿಸ್ ನೀಡಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಒಬ್ಬರು ಕಾಂಗ್ರೆಸ್ ಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿ, ಬಿಜೆಪಿಗೆ ಎರಡನೇ ಪಾಶಸ್ತ್ಯದ ಮತ ಹಾಕಿದ್ದಾರೆ. ಮತ್ತೊಬ್ಬರು ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿ, ಕಾಂಗ್ರೆಸ್ ಗೆ ಎರಡನೇ ಪ್ರಾಶಸ್ತ್ಯದ ಮತ ಹಾಕಿದ್ದಾರೆ ಎಂಬುದಾಗಿ ಹೇಳಿದರು.
ನಿನ್ನೆ ಹೀಗೆ ಮತ ಚಲಾಯಿಸಿದ ಬಗ್ಗೆ ಜೆಡಿಎಸ್ ಎಜೆಂಟ್ ಗಳು ವರದಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಾದ ಶ್ರೀನಿವಾಸ್ ಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.