ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆವೊಡ್ಡಿದ ಪ್ರಕರಣ ಶಂಕಿತ ಮೂವರ ಬಂಧನ

ಮುಂಬೈ,ಜೂ.12- ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಮೂವರು ಶಂಕಿತರನ್ನು ಮುಂಬೈ ಕ್ರೈಂ ಬ್ರಾಂಚ್ನ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಮೂವರು ಶಂಕಿತರು ಜಲೋರ್ನಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಮುಂಬೈ ಕ್ರೈಂ ಬ್ರಾಂಚ್ ಘಟಕ 12ರ ತಂಡವು ರಾಜಸ್ಥಾನದ ಪಾಲ್ಘರ್ ತೆರಳಿತ್ತು.
ಈ ಮೂವರು ಶಂಕಿತರು ಪಾಲ್ಘರ್ ಜಿಲ್ಲೆಯ ವಾಡಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ಆಡಳಿತದಿಂದ ಶಂಕಿತರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲಾಗಿದೆ ಎಂದು ತಿಳಿಸಿದೆ. ಪಾಲ್ಘರ್ನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಬಾಳಾಸಾಹೇಬ್ ಪಾಟೀಲ್, ಇದು ಅಪರಾಧ ವಿಭಾಗದ ಚಿಂತನಶೀಲ ಕಾರ್ಯಾಚರಣೆಯಾಗಿದೆ ಮತ್ತು ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಗಾಯಕ ಸಿಧು ಮೂಸ್ ವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಹೊತ್ತಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸೂಚನೆ ಮೇರೆಗೆ ಪಾಲುದಾರ ವಿಕ್ರಮ್ ಬ್ರಾರ್ ಎಂಬಾತ ನಟ ಸಲ್ಮಾನ್ಖಾನ್ ಅವರ ಮನೆಗೆ ಬೆದರಿಕೆ ಪತ್ರ ರವಾನಿಸಿದ್ದರು.
ಜೂ.5ರಂದು ಮುಂಬೈನ ಬಾಂದ್ರಾ ಬ್ಯಾಂಡ್ಸ್ಟ್ಯಾಂಡ್ ವಾಯುವಿಹಾರದಲ್ಲಿ ಸಲೀಂ ಖಾನ್ ಅವರನ್ನು ಉದ್ದೇಶಿಸಿ ತುಮ್ಹಾರಾ ಮೂಸ್ ವಾಲಾ ಕರ್ ಡೆಂಗೆ ಎಂಬ ಸಂದೇಶದೊಂದಿಗೆ ಸಹಿ ಮಾಡಿದ ಬೆದರಿಕೆ ಪತ್ರ ಪತ್ತೆಯಾಗಿತ್ತು. ಪ್ರಚಾರ ಗಿಟ್ಟಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ನಟ ಸಲ್ಮಾನ್ಖಾನ್ಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿತ್ತು.