fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
National

Rakhi Sawant: ಪೊಲೀಸ್​ ಠಾಣೆ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
Rakhi Sawant Social Media Hack: ಮಾಜಿ ಗಂಡನ ಕಾಟ ತಾಳಲಾರದೇ ಪೊಲೀಸ್​ ಠಾಣೆಯ ಎದುರು ರಾಖಿ ಸಾವಂತ್​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.ನಟಿ ರಾಖಿ ಸಾವಂತ್​ (Rakhi Sawant) ಅವರದ್ದು ವಿಚಿತ್ರ ವ್ಯಕ್ತಿತ್ವ.

ಸೋಶಿಯಲ್​ ಮೀಡಿಯಾದಲ್ಲಿ ಅವರ ವಿಡಿಯೋಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಸಲ್ಮಾನ್​ ಖಾನ್​ ಅವರ ಜೊತೆಯಲ್ಲಿ ಅವರಿಗೆ ಒಡನಾಟ ಬೆಳೆಯಿತು. ಪಾಪರಾಜಿಗಳು ಅವರ ಹಿಂದೆ ಬೀಳುವುದು ಕೂಡ ಹೆಚ್ಚಾಯಿತು. ರಾಖಿ ಸಾವಂತ್​ ಅವರ ಖಾಸಗಿ ಜೀವನ ಅಷ್ಟೇನೂ ಖುಷಿಯಾಗಿ ಉಳಿದುಕೊಂಡಿಲ್ಲ. ರಿತೇಶ್​ ಎಂಬ ವ್ಯಕ್ತಿಯ ಜೊತೆ ಅವರು ಮದುವೆ ಮಾಡಿಕೊಂಡಿದ್ದರು. ಆದರೆ ಆ ಮದುವೆ ಕೆಲವೇ ದಿನಗಳಲ್ಲೇ ಮುರಿದು ಬಿತ್ತು. ಈಗ ರಿತೇಶ್​ನಿಂದಾಗಿರಾಖಿ ಸಾವಂತ್​ಸಿಕ್ಕಾಪಟ್ಟೆ ಕಷ್ಟ ಅನುಭವಿಸುತ್ತಿದ್ದಾರೆ. ಮಾಜಿ ಗಂಡನ ಕಿರುಕುಳ ತಾಳಲಾರದೇ ಅವರೀಗ ಪೊಲೀಸ್​ ಠಾಣೆಯ ಮೆಟ್ಟಿಲು ಏರಿದ್ದಾರೆ. ರಾಖಿ ಸಾವಂತ್​ ಅವರ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಕ್​ (Hacking) ಮಾಡಲಾಗಿದೆ. ಇದು ಮಾಜಿ ಗಂಡನ ಕೆಲಸ ಎಂದು ಅವರು ಆರೋಪಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ಸೋಶಿಯಲ್​ ಮೀಡಿಯಾ ತುಂಬ ಮುಖ್ಯ. ಆ ಮೂಲಕ ಅವರು ಹಣ ಸಂಪಾದಿಸುತ್ತಾರೆ. ಪ್ರಚಾರಕ್ಕಾಗಿ, ಅಭಿಮಾನಿಗಳ ಜೊತೆ ಸಂಪರ್ಕಕ್ಕಾಗಿ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ ಮುಂತಾದ ಖಾತೆಗಳಲ್ಲಿ ಸಕ್ರಿಯವಾಗಿ ಇರುತ್ತಾರೆ. ರಾಖಿ ಸಾವಂತ್​ ಅವರ ಎಲ್ಲ ಸೋಶಿಯಲ್​ ಮೀಡಿಯಾ ಖಾತೆಗಳು ಹಾಗೂ ಜಿ-ಮೇಲ್​ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ.

ರಿತೇಶ್​ ಮತ್ತು ರಾಖಿ ಸಾವಂತ್​ ಬೇರೆಬೇರೆ ಆಗಿದ್ದಾರೆ. ಹೊಸ ಬಾಯ್​ ಫ್ರೆಂಡ್​ ಆದಿಲ್​ ಖಾನ್​ ಜೊತೆ ರಾಖಿ ಸುತ್ತಾಡುತ್ತಿದ್ದಾರೆ. ಆದಿಲ್​ ಮತ್ತು ರಾಖಿ ಜೊತೆಯಾಗಿ ಬಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನನ್ನ ಜೀವನವನ್ನು ಹಾಳು ಮಾಡಲು ಮಾಜಿ ಗಂಡ ರಿತೇಶ್​ ಈ ರೀತಿ ಮಾಡಿದ್ದಾನೆ. ನಾನು ಆದಿ ಜೊತೆ ಇರುವುದನ್ನು ಅವನು ಸಹಿಸುತ್ತಿಲ್ಲ’ ಎಂದು ರಾಖಿ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: