fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka News

ಅಕ್ರಮ ಮರಳು ದಂಧೆಗಿಲ್ಲ ತಡೆ : ಎತ್ತ ಸಾಗುತ್ತಿದೆ ಅಧಿಕಾರಿಗಳ ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಅಕ್ರಮ ಮರಳು ದಂಧೆಗಿಲ್ಲ ತಡೆ : ಎತ್ತ ಸಾಗುತ್ತಿದೆ ಅಧಿಕಾರಿಗಳ ನಡೆ

ಸಿರುಗುಪ್ಪ : ಸರ್ಕಾರವು ಜಾರಿಗೆ ತಂದ ಮರಳು ನೀತಿಯಿಂದಾಗಿ ತಾಲೂಕಿನೆಲ್ಲೆಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ಹಾಡಹಗಲೇ ನಡೆಯುತ್ತಿದ್ದರೂ ಅಕ್ರಮ ತಡೆಯಬೇಕಿದ ಇದಕ್ಕೆ ಸಂಬ0ದಿಸಿದ ಅಧಿಕಾರಿಗಳು ಮಾತ್ರ ಇಲ್ಲಿ ಎನೂ ನಡೆಯುತ್ತಿಲ್ಲವೆಂಬ0ತೆ ಜಾಣಕುರುಡುತನ ಪ್ರದರ್ಶನದ ನಡೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ತಾಲೂಕಿನಲ್ಲಿ ಒಂದು ಕಡೆ ತುಂಗಾಭದ್ರ ನದಿ ಇನ್ನೊಂದೆಡೆ ವೇದಾವತಿ ನದಿ ಹರಿಯುತ್ತಿದ್ದು, ಇಲ್ಲಿ ನಡೆಯುವ ಯಥೇಚ್ಛ ಅಕ್ರಮ ಮರಳು ದಂಧೆಗಾರಿಕೆಯಿ0ದಾಗಿ ಅಧಿಕಾರಿಗಳಿಗೆ ಲಾಭವಾದರೆ ಜನಸಾಮಾನ್ಯರು ಮಾತ್ರ ಬೆಲೆಯೇರಿಕೆ ಬಿಸಿಯಿಂದ ತತ್ತರಿಸುವಂತಾಗಿದೆ.

ಹಾಡಹಗಲೇ ಮರಳು ದಂಧೆಗೆ ಅಧಿಕಾರಿಗಳ ಮೌನ : ತಾಲೂಕಿನ ಗಡಿ ಗ್ರಾಮ ಹಾಗೂ ತುಂಗಾಭದ್ರ ನದಿತೀರದ ಗ್ರಾಮಗಳಾದ ನಡವಿ, ರುದ್ರಪಾದ, ಎಂ.ಸೂಗೂರು, ಮಣ್ಣೂರು ಗ್ರಾಮಗಳ ಭಾಗದಲ್ಲಿ ಹಾಡಹಗಲೇ ಕಬ್ಬಿಣದ ದೋಣಿಗಳಿಂದ ನದಿಯ ನೀರಿನಲ್ಲಿನ ಮರಳು ತೆಗೆಯುತ್ತಿದ್ದರೂ ಸಂಬ0ದಿಸಿದ ಸಮೀಪದ ಠಾಣೆಯ ಅಧಿಕಾರಿಗಳು ಮೌನವಹಿಸುತ್ತಿರುವುದೇಕೆನ್ನುವುದೇ ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.

ದಂಧೆಕೋರನಿ0ದ ಚಿತ್ರೀಕರಣಕ್ಕೆ ಅಡ್ಡಿ : ಇಲ್ಲಿನ ಮಣ್ಣೂರು ಸೂಗೂರು ಗ್ರಾಮದಲ್ಲಿ ಹಗಲಿನಲ್ಲೇ ಅಕ್ರಮ ಮರಳು ಅಡ್ಡೆಗೆ ಸುದ್ದಿಗಾಗಿ ತೆರಳಿದ್ದ ವರದಿಗಾರರ ಮೊಬೈಲ್ ಮತ್ತು ಬೈಕಿನ ಕೀ ಕಸಿಯುವುದಲ್ಲದೇ ದಂಧೆಯನ್ನು ಚಿತ್ರೀಕರಿಸದಂತೆ ಅವಾಜ್ ಹಾಕುತ್ತಿರುವುದನ್ನು ಸಾರ್ವಜನಿಕರೇ ತರಾಟೆಗೆ ತೆಗೆದುಕೊಂಡರು.

ದಂಧೆಗೆ ಅಧಿಕಾರಿಗಳ ಮತ್ತು ಪತ್ರಕರ್ತನ ಅಭಯ : ಕಳೆದ ಐದು ವರ್ಷಗಳಿಂದ ಇಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದಕ್ಕೆ ಪತ್ರಕರ್ತನ ಅಭಯವೇ ಕಾರಣವಾಗಿದ್ದು, ಈ ಅಕ್ರಮದ ಬಗ್ಗೆ ಯಾರೂ ತುಟಿಪಿಟಿಕೆನ್ನದೇ ಭಯದ ವಾತಾವರಣವನ್ನು ಸೃಷ್ಟಿಸಿದ್ದಾನಲ್ಲದೇ ಪೋಲೀಸರಿಗೆ ಕರೆ ಮಾಡುವುದಾಗಿ ಪತ್ರಕರ್ತನ ಅಣ್ಣ ಬೆದರಿಕೆ ಹಾಕುತ್ತಿರುವುದಕ್ಕೆ ಸಮೀಪದ ಪೋಲೀಸ್ ಅಧಿಕಾರಿಗಳ ಕುಮ್ಮಕ್ಕೂ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ದೂರುನೀಡಿದಲ್ಲಿ ಮಾತ್ರ ಕ್ರಮದ ಹಾರಿಕೆ ಉತ್ತರ : ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಸಿರಿಗೇರಿ ಪೋಲೀಸ್ ಠಾಣೆಗೆ ಕರೆ ಮೂಲಕ ಮಾಹಿತಿ ನೀಡಿದ ಪತ್ರಕರ್ತರಿಗೆ ನೀವು ಲಿಖಿತ ರೂಪದಲ್ಲಿ ದೂರು ಮಾಡಿದರೆ ಮಾತ್ರ ಕ್ರಮ ಜರುಗಿಸುವುದಾಗಿ ಠಾಣೆಯ ಪಿ.ಎಸ್.ಐ ಹಾರಿಕೆ ಉತ್ತರ ನೀಡುತ್ತಿದ್ದು, ಇನ್ನೂ ಜನಸಾಮನ್ಯರ ಮಾಹಿತಿಗೆ ಸ್ಪಂದಿಸುವುದಾದರೂ ಯಾವಾಗ ಎಂಬುದೇ ಸ್ಥಳೀಯರ ವಾದವಾಗಿದೆ.

2016ರಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸುವ ಉದ್ದೇಶದಿಂದ ಮರಳು ನೀತಿ ಜಾರಿಗೆಯಾಗಿದೆಯಾದರೂ ಅನೇಕ ಅಭಿವೃದ್ದಿ ಕಾಮಗಾರಿಗಳಿಗೆ ಅಕ್ರಮ ಮರಳು ದಂಧೆಗೆ ಅನುವು ಮಾಡಿಕೊಟ್ಟಂತಾಗಿದಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿಯೋಜನೆ ಅಡಿಯಲ್ಲಿ ಜನಸಾಮಾನ್ಯರು ಮನೆ ಕಟ್ಟಿಸಿಕೊಳ್ಳಲು ಹರಸಾಹಸಪಡುವಂತಾಗಿದ್ದು ಇನ್ನೂ ಮುಂದಾದರೂ ಅಧಿಕಾರಿಗಳು ಸಮಾಜದಲ್ಲಿ ನಡೆಯುವ ಅಕ್ರಮ ಮರಳು ದಂಧೆಯನ್ನು ತಡೆದು ಜನಸಾಮಾನ್ಯರಿಗೆ ಯೋಗ್ಯ ಧರದಲ್ಲಿ ಮರಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: