fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
Karnataka NewsPolitics

ಈ ಬಾರಿ ಶಿಕ್ಷಕರ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ನಿಚಿತವಾಗಿದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಗೋಕಾಕ: ಶಿಕ್ಷಕರ ಹಾಗೂ ಪದವೀಧರ ಎರಡು ಚುನಾವಣೆ ಮೂರು ಜಿಲ್ಲೆಯಲ್ಲಿ ಅತ್ಯಂತ ತುರುಸಿನಿಂದು ಮತದಾನ ನಡೆಯುತ್ತಿದ್ದು, ಈ ಬಾರಿ ಶಿಕ್ಷಕರ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ನಿಚಿತವಾಗಿದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತನದಾನ ವೇಳೆ ಮಾದ್ಯಮದವರ ಜತೆ ಮಾತನಾಡಿದ ಅವರು, ಮೂರು ಜಿಲ್ಲೆಗಳಲ್ಲಿ ಪದವೀದರ ಮತದಾರರ ಸಂಖ್ಯೆ ಹೆಚ್ಚಿದ್ದು, ಪದವೀಧರ ಅಭ್ಯರ್ಥಿ ಗೆಲುವಿಗೂ ಸಾಕಷ್ಟು ಶ್ರಮಿಸಲಾಗುತ್ತಿದೆ.

ಒಟ್ಟಾರೆಯಾಗಿ ನಮ್ಮ ಕಾರ್ಯಕರ್ತರು ಕೂಡಾ ಮೂರು ಜಿಲ್ಲೆಗಳಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಈ ಭಾರಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ನಿತವಾಗಿದೆ ಎಂದರು. ಸಮಾಜ ಸೇವ ಮಾಡಲಿಕ್ಕೆ ಯಾವುದೇ ಪದವಿ ಬೇಡ: ಪುಕಾಶ ಹುಕ್ಕೇರಿ ಅವರು ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದಾರೆ. ಕೆಲಸ ಮಾಡಲು ಅವರಿಂದ ಆಗಲ್ಲ ಎಂದು ಪ್ರಭಾಕರ ಕೋರೆ ಹೇಳುತ್ತಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸದ ಅವರು ಬಿಜೆಪಿಯವರಾದ ಉಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿ ಅವರಿಗೆ ಜನರ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಅದರೆ ರೀತಿ ಪ್ರಕಾಶ ಹುಕ್ಕೇರಿ ಅವರು 30 ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ.

ಅಲ್ಲದೇ ಅಲ್ಲಿನ ಕ್ಷೇತ್ರದ ಜನರೇ ಅವರಿಗೆ ಉತ್ತಮ ಕೆಲಸಗಾರ ಎಂದು ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಪ್ರಕಾಶ ಹುಕ್ಕೇರಿ ಅವರು ವಿವಿಧ ರಂಗದಲ್ಲೂ ಅನೇಕ ಕೆಲಸಗಳನ್ನು ಮಾಡಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ. ಏನು ಕಲಿಯದಿದ್ರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ಕಾನೂನಿನಲ್ಲಿ ನಿಯಮವಿದೆ. ಪ್ರಕಾಶ ಹುಕ್ಕೇರಿ ಅವರಿಗೆ ವಯಸ್ಸಾಗಿದೆ ಎಂದು ಪದೇ ಪದೇ ಬಿಜೆಪಿ ಆರೋಪ ಮಾಡುತ್ತಿದೆ.ವಯಸ್ಸಿಗೂ ಕ್ಷೇತ್ರದಲ್ಲಿ ಕೆಲಸ ಮಾಡಲು ಯಾವುದೇ ಸಂಭಂದವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾವಿದೆ ಮುಂದಿನ ಭಾರಿ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗೆ ಎಂಎ ಪಿಎಚ್ ಡಿ ಕಲಿಬೇಕು ಅಂತಾ ಕಾನೂನು ಜಾರಿಗೆ ತರಲಿ ಎಂದ ಅವರು, ಈ ಭಾರಿಯೂ ಪ್ರಕಾಶ ಹುಕ್ಕೇರಿ ಚುನಾವಣೆಯಲ್ಲಿ ಗೆದ್ದು ಬರ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ. ಒಟ್ಟಾರೆ ಬಿಜೆಪಿಯವರು ಹೇಳುತ್ತಿರುವ ಮಾತಿನಲ್ಲಿ ಹಾವುದೇ ಹುರುಳಿಲ್ಲ ಬಿಡಿ ಎಂದು ಸ್ಪಷ್ಟ ಪಡಿಸಿದರು.

ನಮ್ಮಲ್ಲಿ ಯಾವುದೇ ಒಳಒಪ್ಪಂದವಿಲ್ಲ: ನಾವು ಗಂಭೀರವಾಗಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ರೀತಿ ಒಳಒಪ್ಪಂದ ನಡೆಯುತ್ತಿಲ್ಲ. ಒಬ್ಬೊಬ್ಬರಿಗೆ ಶಕ್ತಿ ಹೆಚ್ಚು ಇದ್ದವರೂ ಮುಂದು ಹೋಗುತ್ತಾರೆ.ಶಕ್ತಿ ಕಡಿಮೆ ಇರುವವರೂ ಹಿಂದಿ ಉಳಿತಾರೆ. ಅದೇ ರೀತಿ ಹೀಗೆ ಅನುಸುತ್ತೇ ಹೊರತೂ ಇನ್ನೊಂದಿಲ್ಲ. ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಪುಚಾರ ಮಾಡುತ್ತಿಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ಜಿಲ್ಲೆಗಳಲ್ಲಿ ಒಟ್ಟು 90 ಸಾವಿರ ಮತದಾರರು ಇದಾರೆ. ಪ್ರತಿಯೊಬ್ಬರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವ ಮೊದಲು ಕಾರ್ಯರಕರ್ತರು ಪ್ರಚಾರ ಮಾಡಬೇಕಾಗುತ್ತದೆ. ಇರದಲ್ಲೂ ನಮ್ಮದು ಹೆಚ್ಚಿನ ಜವಾಬ್ದಾರಿ ಇದೆ. ಬಿಜೆಪಿಯವರದು ಬೊಗಳೆ ಮಾತುಗಳಿಗೆ ತೆಲೆ ಕೆಡಿಸಿಕೊಳ್ಳಲ್ಲ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಶಂಕರ ಗಿಡನ್ನವರ, ಸಿದ್ಧಲಿಂಗ ದಳವಾಯಿ, ಅಶೋಕ ಪಾಟೀಲ, ವಿವೇಕ ಜತ್ತಿ ಇತರರು ಇದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published.

error: Content is protected !!
%d bloggers like this: