Viral Video: ಭೀಕರ ಅಪಘಾತದಿಂದ ಮಗುವನ್ನು ರಕ್ಷಿಸಿದ ಪೊಲೀಸ್!

ಎಲೆಕ್ಟ್ರಿಕ್ ರಿಕ್ಷಾದಿಂದ ಕೆಳಕ್ಕೆ ಬಿದ್ದ ಮಗುವಿನ ಜೀವವನ್ನು ಉಳಿಸಿದ ಪೊಲೀಸರು
ಪೊಲೀಸರ ಸಮಯೋಚಿತ ಸಹಾಯವು ಎಲೆಕ್ಟ್ರಿಕ್ ರಿಕ್ಷಾದಿಂದ ಕೆಳಕ್ಕೆ ಬಿದ್ದ ಮಗುವಿನ ಜೀವವನ್ನು ಹೇಗೆ ಉಳಿಸಿತು ಎಂಬುದನ್ನು ಇದು ತೋರಿಸುತ್ತದೆ. ಈ ವೀಡಿಯೋಗೆ ಇದುವರೆಗೂ 1.5 ಮಿಲಿಯನ್ ವೀಕ್ಷಣೆಗಳು ಮತ್ತು 82,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಇಷ್ಟೇ ಅಲ್ಲದೆ ಈ ವೀಡಿಯೋವನ್ನು 9,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಸಹ ಮಾಡಿದ್ದಾರೆ.
ಈ ವೈರಲ್ ಆಗಿರುವ ವೀಡಿಯೋದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಅಂಬೆಗಾಲಿಡುವ ಮಗುವೊಂದು ಎಲೆಕ್ಟ್ರಿಕ್ ರಿಕ್ಷಾದಿಂದ ಕೆಳಕ್ಕೆ ಬೀಳುವುದನ್ನು ನೋಡಿದಾಗ ಸಂಚಾರವನ್ನು ನಿಯಂತ್ರಿಸುತ್ತಿರುವುದನ್ನು ಕಾಣಬಹುದು. ಒಂದು ಬಸ್ ಆ ಮಗುವಿನ ಸಮೀಪ ಬರುತ್ತಿದ್ದು, ಆ ಬಸ್ ಅನ್ನು ಕೈ ಮಾಡಿ ನಿಲ್ಲಿಸಿದ್ದು ಅಲ್ಲದೆ ಆ ಕೆಳಗೆ ಬಿದ್ದಂತಹ ಮಗುವನ್ನು ಕರೆದೊಯ್ಯಲು ಕೂಡಲೇ ಆ ಸ್ಥಳಕ್ಕೆ ಓಡೋಡಿ ಬಂದರು. ಅಂಬೆಗಾಲಿಡುವ ಮಗುವಿನೊಂದಿಗೆ ಅವನ ತಾಯಿಯೂ ಸಹ ಇದ್ದಳು, ಅವನು ರಿಕ್ಷಾದಿಂದ ಕೆಳಗೆ ಬಿದ್ದ ನಂತರ ಅವಳು ಕೂಡಲೇ ಆಟೋದಿಂದ ಕೆಳಗಿಳಿದು ಮಗು ಬಿದ್ದ ಸ್ಥಳಕ್ಕೆ ಬಂದರು.
ಪೊಲೀಸರ ಸಮಯ ಪ್ರಜ್ಞೆಗೆ ಶ್ಲಾಘಿಸಿದ ನೆಟ್ಟಿಗರು
ಈ ವೀಡಿಯೋ ನೋಡಿದ ನೆಟ್ಟಿಗರು ಈ ಸಂಚಾರ ಪೊಲೀಸರ ಶೌರ್ಯವನ್ನು ಶ್ಲಾಘಿಸಿದರೆ, ಕೆಲವರು ರಿಕ್ಷಾ ಚಾಲಕನಿಂದ ತುಂಬಾನೇ ಅಸಮಾಧಾನಗೊಂಡರು. “ಪೊಲೀಸ್ ಅಧಿಕಾರಿಗಳ ಜಾಗರೂಕತೆ ಮತ್ತು ಬಸ್ ಚಾಲಕನ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಬೇಕು. ಅದೇ ಸಮಯದಲ್ಲಿ, “ಇಲೆಕ್ಟ್ರಿಕ್ ರಿಕ್ಷಾ ಚಾಲಕನಿಗೆ ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ದಂಡ ವಿಧಿಸಬೇಕಾಗಿದೆ. ಒಂದು ವೇಳೆ ಬಸ್ ಹಿಂಬದಿಯಿಂದ ವೇಗವಾಗಿ ಬಂದಿದ್ದರೆ ಆ ವಾಹನದಲ್ಲಿದ್ದವರು ಏನಾಗುತ್ತಿದ್ದರು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ट्रैफ़िक पुलिस के जवान सुंदर लाल.🙏 pic.twitter.com/ulmX48a5ki
— Awanish Sharan (@AwanishSharan) June 12, 2022
ವೈರಲ್ ವಿಡಿಯೋಗೆ ಕಾಮೆಂಟ್ ಗಳು ಹೀಗಿವೆ
ಟ್ರಾಫಿಕ್ ಪೋಲಿಸ್ ಸಹ ಅಷ್ಟೇ ವೇಗವಾಗಿ ಈ ಘಟನೆಗೆ ಪ್ರತಿಕ್ರಿಯಿಸಿ ಆ ಬರುತ್ತಿರುವ ಬಸ್ ಅನ್ನು ನಿಲ್ಲಿಸುವುದರೊಂದಿಗೆ ಮಗುವನ್ನು ಸಹ ಕಾಪಾಡಿದರು ಎಂದು ಹೇಳಲಾಗುತ್ತಿದೆ. ಈ ವೀಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಬಸ್ ಚಾಲಕ ಸಹ ವಿವೇಚನಾಯುಕ್ತನಾಗಿದ್ದನು ಹಾಗೂ ಸಂಚಾರಿ ಪೊಲೀಸ್ ಧೈರ್ಯಶಾಲಿ ಮತ್ತು ವಿವೇಚನಾಶೀಲನಾಗಿದ್ದರು. ಚಲಿಸುತ್ತಿರುವ ಬಸ್ಸಿನ ಮುಂದೆ ತನ್ನ ಜೀವದ ಹಂಗು ತೊರೆದು ಓಡಿಹೋಗಿ ಮಗುವನ್ನು ರಕ್ಷಿಸಿದ್ದಾರೆ, ತನ್ನ ಜೀವದ ಬಗ್ಗೆ ಸ್ವಲ್ಪವೂ ಯೋಚಿಸಿಲ್ಲ. ಇವರಂತಹ ನಿಸ್ವಾರ್ಥ ಜನರಿಂದಾಗಿಯೇ ಇನ್ನೂ ಸಮಾಜದಲ್ಲಿ ಮಾನವೀಯತೆ ಉಳಿದುಕೊಂಡಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ವೀಡಿಯೋ ನೋಡಿ “ನಮ್ಮ ಮಣ್ಣಿನ ಧೈರ್ಯಶಾಲಿ ಮಗ ಮತ್ತು ನಮ್ಮ ಹೆಮ್ಮೆಯ ಸುಂದರ್ ಲಾಲ್ ಜೀ ಅವರಿಗೆ ಅಭಿನಂದನೆಗಳು. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅವರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು “ಅಪಘಾತದಿಂದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸಾಹಸಮಯ ಟ್ರಾಫಿಕ್ ಪೊಲೀಸ್ ಸುಂದರ್ ಲಾಲ್ ಅವರಿಗೆ ಸೆಲ್ಯೂಟ್” ಎಂದು ಬರೆದಿದ್ದಾರೆ.