ಬೈಲಹೊಂಗಲದಲ್ಲಿ ಜೂನ 19 ರಂದು ಕವಿಗೋಷ್ಠಿ

ಬೈಲಹೊಂಗಲ: ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಬೈಲಹೊಂಗಲ ಹಾಗೂ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬೈಲಹೊಂಗಲ ಇವರ ಸಹಯೋಗದಲ್ಲಿ ಜೂನ 19 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡಿಕಟ್ಟಿಯ ಸಾಹಿತಿಗಳಾದ ಈರಯ್ಯ ಕಿಲ್ಲೇದಾರ ‘ಈನಿಂಕಿ’ ವಹಿಸಲಿದ್ದಾರೆ. ಸವದತ್ತಿಯ ಕವಿ, ವಿಮರ್ಶಕರಾದ ನಾಗೇಶ ಜೆ. ನಾಯಕ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಬೈಲಹೊಂಗಲದ ಖ್ಯಾತ ಹೃದಯ ರೋಗ ತಜ್ಞರಾದ ಡಾ. ಬಸವರಾಜ ಎಸ್. ಮಹಾಂತಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಡಾ. ಫಕೀರನಾಯ್ಕ ಗಡ್ಡಿಗೌಡರ, ಮೀನಾಕ್ಷಿ ಸೂಡಿ, ಚಂದ್ರಶೇಖರ ಕೊಪ್ಪದ, ಎಸ್.ಬಿ. ಜಹಾಗೀರದಾರ, ಸಿದ್ದಪ್ಪ ಗೊಡಚಿ, ಶಿವಾನಂದ ಬೇವಿನಕೊಪ್ಪ, ಸ್ನೇಹಾ ವೆಂಕಣ್ಣವರ, ಶಿವಾನಂದ ಪಟ್ಟಿಹಾಳ, ಡಾ. ಮಲ್ಲಿಕಾರ್ಜುನ ಛಬ್ಬಿ, ಅಣ್ಣಯ್ಯಸ್ವಾಮಿ ಸಂಬಾಳಿಮಠ, ಸಿದ್ದು ನೇಸರಗಿ, ಕಿರಣ ಗಣಾಚಾರಿ, ಮಹಾಂತೇಶ ಕಾಳೆ, ಸದಾಶಿವ ಭಜಂತ್ರಿ, ಉಮಾ ಅಂಗಡಿ, ಶ್ರೀಶೈಲ ಹೆಬ್ಬಳ್ಳಿ, ರಾಧಿಕಾ ಮಾದಾರ, ಎಂ.ಆರ್.ಪಾಟೀಲ, ಡಾ. ಸುನೀಲ ಪರೀಟ, ಗೋದಾವರಿ ಪಾಟೀಲ, ಆನಂದ ಹಕ್ಕೆನ್ನವರ ಸಂಗೀತಾ ಲಚ್ಚಪ್ಪನವರ, ವಸುಧಾ ಕಾಮತ, ಬಿ.ಬಿ.ಇಟ್ಟನ್ನವರ, ಬಿ.ವಿ.ಪತ್ತಾರ, ವಿರುಪಾಕ್ಷ ಕಮತೆ, ಉಮೇಶ ತಿಗಡಿ, ಪುನೀತ ಕಮ್ಮಾರ, ಸೌಮ್ಯ ಕೋಟಗಿ, ಅವಿನಾಶ ಸೆರೆಮನಿ, ಚಿದಾನಂದ ಭಜಂತ್ರಿ, ಈರಣ್ಣ ಗೋದಳ್ಳಿ, ಅರ್ಪಿತಾ ಹೂಗಾರ, ತಿಪ್ಪಣ್ಣ ಶಹಾಪೂರ, ನಾಗರಾಜ ಹಂಪಸಾಗರ, ಪವಿತ್ರಾ ಹುಲಿಕಂತಿಮಠ, ಮಹಾಂತೇಶ ಹೊಂಗಲ, ಸಂಗಮೇಶ ಭಸ್ಮ, ತನುಜಾ ಬಡಿಗೇರ, ಡಾ. ಶಿವಕುಮಾರ ಸೂರ್ಯವಂಶ, ಸಾಕ್ಷಿ ಹಿರೇಮಠ, ಮಾರುತಿ ದೇಸಾಯಿ, ಜಾನಕಿ ಭದ್ರಣ್ಣವರ, ಸದ್ದಾಂ ತಗ್ಗಹಳ್ಳಿ, ಅಂಬುಜಾ ಬಿ, ಸವಿತಾ ಪಾಟೀಲ ಕವಿ-ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರಿಷತ್ತಿನ ಎಲ್ಲ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.