ಕಾಶ್ಮೀರಿ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ : ʼನಟಿ ಸಾಯಿ ಪಲ್ಲವಿʼ ವಿರುದ್ಧ ಕೇಸ್ ದಾಖಲು

ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ನಟಿ ಸಾಯಿ ಪಲ್ಲವಿ ತನ್ನ ಇತ್ತೀಚಿನ ಚಿತ್ರ ವಿರಾಟ ಪರ್ವಂ ಚಿತ್ರ ಪ್ರಚಾರ ಮಾಡುವಾಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನ ಗೋರಕ್ಷಣೆಯೊಂದಿಗೆ ಹೋಲಿಸಿ, ವಿವಾದಕ್ಕೆ ಗುರಿಯಾಗಿದ್ದಾರೆ.
ಸಧ್ಯ ಈ ನಟಿಮಣಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಟಿಯ ವಿರುದ್ಧ ಬಜರಂಗದಳ ವಿದ್ಯಾನಗರ ಜಿಲ್ಲಾ ಸಮಿಯೋಜಕ್ ದೂರು ನೀಡಿದ್ದು, ಹೈದರಾಬಾದ್ʼನಲ್ಲಿ ಪ್ರಕರಣ ದಾಖಲಿಸಲಾಗಿದೆ.
Bajrangdal Vidyanagar Jilla Samyojak @akhilsindole ji & @AbhishekKurma Balopasama Kendra pramukh filed a case against Sai Pallavi at Sultanbazar PS 🚩@Sai_Pallavi92 apologize to whole country especially Kashmiri Hindus for your derogatory remarks or else it will get worse. pic.twitter.com/aIUc1THVG3
— Bajrangdal Bhagyanagar (@BJDLBhagyanagar) June 16, 2022
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಸಂಘಟನೆ, ಸುಲ್ತಾನ್ ಬಜಾರ್ ಪಿಎಸ್ʼನಲ್ಲಿ ಸಾಯಿ ಪಲ್ಲವಿ ವಿರುದ್ಧ ಬಲೋಪಸಮ ಕೇಂದ್ರ ಪ್ರಮುಖ್ ಪ್ರಕರಣ ದಾಖಲಿಸಿದ್ದಾರೆ. ‘ನಿಮ್ಮ ಅವಹೇಳನಕಾರಿ ಹೇಳಿಕೆಗಳಿಗಾಗಿ ಇಡೀ ಸಂಘಟನೆ, ದೇಶಕ್ಕೆ ವಿಶೇಷವಾಗಿ ಕಾಶ್ಮೀರಿ ಹಿಂದೂಗಳಿಗೆ ಕ್ಷಮೆಯಾಚಿಸಿ, ಇಲ್ಲದಿದ್ದರೆ ಅದು ಇನ್ನಷ್ಟು ಹದಗೆಡುತ್ತದೆ’ ಎಂದಿದೆ.