ಈ ಖ್ಯಾತ ನಿರ್ದೇಶಕನ ಹತ್ಯೆಗೂ ಗ್ಯಾಂಗ್ಸ್ಟರ್ ಬಿಷ್ಣೋಯಿ ಸ್ಕೆಚ್: ತನಿಖೆಯಿಂದ ಬಯಲು

ಮುಂಬೈ: ಪಂಜಾಬ್ ಗಾಯಕನ ಹತ್ಯೆ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯಿ ಲಿಸ್ಟ್ನಲ್ಲಿ ಮತ್ತೊಬ್ಬ ಖ್ಯಾತ ನಿರ್ದೇಶಕನ ಹೆಸರು ಇತ್ತು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಸಲ್ಮಾನ್ ಖಾನ್ಗೆ ಜೀವಬೆದರಿಕೆ ಪತ್ರ ಹಾಗೂ ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಕರಣ್ ಜೋಹರ್ ಹತ್ಯೆಗೂ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರಣ್ ಜೋಹರ್ನನ್ನು ಅಪಹರಿಸಿ 5 ಕೋಟಿ ರೂ. ಬೇಡಿಕೆ ಇಡುವ ಬಗ್ಗೆಯೂ ಈ ಗ್ಯಾಂಗ್ ಯೋಜನೆ ರೂಪಿಸಿತ್ತು. ಒಂದು ವೇಳೆ ದುಡ್ಡು ಸಿಗಲಿಲ್ಲವೆಂದಾದಲ್ಲಿ ಅವರ ಹತ್ಯೆಗೂ ಯೋಜನೆ ರೂಪಿಸಿದ್ದೇವು ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಒಟ್ಟಾರೆ ಬಾಲಿವುಡ್ ನಟರ ಮೇಲೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡ ಸಂಚು ರೂಪಿಸಿದ್ದು, ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ನಡುವೆ ಪಂಜಾಬ್ ಗಾಯಕ ಸಿಧು ಮೂಸೆವಾಲ ಅವರ ಹತ್ಯೆ ಕುರಿತ ತನಿಖೆಯೂ ಚುರುಕುಗೊಂಡಿದೆ.