ಬೀದಿ ಬದಿ ಸೋಪ್ ಮಾರಿ ಜೀವನ ಸಾಗಿಸುತ್ತಿರುವ ಸ್ಟಾರ್ ನಟಿ! ಯಾರು ಗೊತ್ತಾ?

ಒಂದು ಕಾಲದಲ್ಲಿ ಸ್ಟಾರ್ ನಟಿ ಆಗಿದ್ದ ನಟಿ ಈಗ ಸಾಬೂನು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರೇ ನಂಬಲು ಅಸಾಧ್ಯವಾದರೂ ನಂಬಲೇಬೇಕು.
ಹೌದು, ಸ್ಟಾರ್ ಗಳು ಸಿನಿಮಾ ಕಲಾವಿದರು ಅಂದರೆ ಕೋಟಿಗಟ್ಟಲೆ ಸಂಪಾದಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ.
ಆದರೆ ಸ್ಟಾರ್ ಗಿರಿ ತಪ್ಪಿದಾಗ ಅವರು ಯಾವ ಸ್ಥಿತಿಯಲ್ಲಿದ್ದಾರೆ ಅಂತ ಬಂದು ನೋಡುವವರೂ ಇರುವುದಿಲ್ಲ.
ಅಂತಹ ಸ್ಥಿತಿಯಲ್ಲಿದ್ದಾರೆ ಬಹುಭಾಷಾ ಸ್ಟಾರ್ ನಟಿ. ಐಶ್ವರ್ಯ ಆಲಿಯಾಸ್ ಐಶ್ವರ್ಯ ಭಾಸ್ಕರ್ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿದ್ದ ಈ ನಟಿ ಕನ್ನಡದಲ್ಲಿ ಪಾಂಡವರು, ಒಗ್ಗರಣೆ ಸೇರಿದಂತೆ ಹಲವು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಮಲಯಾಳಂ ಮೂಲದ ಈ ನಟಿ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಅದರಲ್ಲೂ ಅವರು ನಟಿಸಿದ್ದ ಬಟರ್ ಫ್ಲೈ, ನರಸಿಂಹಂ ಮತ್ತು ಪ್ರಜಾ ಮುಂತಾದ ಮಲಯಾಳಂ ಚಿತ್ರಗಳು ಬಾಕ್ಸ್ ಆಫೀಸನಲ್ಲಿ ಧೂಳೀಪಟ ಮಾಡಿತ್ತು. ಅದರಲ್ಲೂ ಪ್ರಜಾ ಚಿತ್ರದಲ್ಲಿ ಮೋಹನ್ ಲಾಲ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ಬೆಳ್ಳಿ ಪರದೆಯಲ್ಲಿ ಚಿತ್ರಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಐಶ್ವರ್ಯ ಈಗ ಅದರಲ್ಲೂ ಅವಕಾಶಗಳಿಲ್ಲದೇ ಬೀದಿ ಬದಿಗಳಲ್ಲಿ ಸಾಬೂನು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.
ಹೌದು, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿರುವ ಐಶ್ವರ್ಯ, ನನಗೆ ಅವಕಾಶಗಳು ಬರುತ್ತಿಲ್ಲ. ಹಾಗಾಗಿ ಹೊಟ್ಟೆಪಾಡಿಗಾಗಿ ಬೀದಿ ಬದಿಯಲ್ಲಿ ಸಾಬೂನು ಮಾರಿ ಜೀವನ ಸಾಗಿಸುತ್ತಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಟಾಯ್ಲೆಟ್ ತೊಳೆಯುವ ಕೆಲಸ ಕೊಟ್ಟರೂ ಮಾಡುವ ಸ್ಥಿತಿಯಲ್ಲಿದ್ದೇನೆ. ನಟನೆಗೆ ಅವಕಾಶ ಇನ್ನಾದರೂ ಬರುತ್ತದೆಯೇ ಎಂದು ಕಾದು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ನಾನು ಮಗಳ ಮದುವೆ ಮಾಡಿದ್ದೇನೆ. ನಾನು ದುಡಿದದ್ದನ್ನೆಲ್ಲಾ ಕುಡಿದು ಹಾಳು ಮಾಡಿಲ್ಲ. ನಾವು ವೃತ್ತಿಜೀವನದಲ್ಲಿ ಟಾಪಲ್ಲಿ ಇದ್ದಿದ್ದೇ ಮೂರು ವರ್ಷ. ನಾನೀಗ ಒಂಟಿ. ಹಾಗಾಗಿ ನಾನು ನನ್ನ ಜೀವನ ನೋಡಿಕೊಳ್ಳಲು ಅಗತ್ಯ ಇರುವಷ್ಟು ಸಂಪಾದಿಸಿದರೆ ಸಾಕು. ಡಿವೋರ್ಸ್ ನೀಡಿದ ಪತಿ ಹಾಗೂ ಆತನ ಎರಡನೇ ಪತ್ನಿ ಜೊತೆ ಈಗಲೂ ಒಡನಾಟ ಇದೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ.