fbpx
ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (FLASH 24/7) ಸುದ್ದಿಗಳ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ ನೀವು ದೈನಂದಿನ ಸುದ್ದಿಗಳಿಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಕೇವಲ ಕೆಲವೇ ಕೆಲವು ಕ್ಷಣದಲ್ಲಿ ಪಡೆಯಿರಿ ರಾಜ್ಯ,ರಾಷ್ಟ್ರ,ದೇಶ,ವಿದೇಶ,ರಾಜಕೀಯ, ಕ್ರೀಡೆ, ಸಿನೆಮಾ ಹೀಗೆ ಹತ್ತು ಹಲವು ಪ್ರಮುಖ ಸುದ್ದಿಗಳನ್ನ ಬರೀ ಒಂದು ಕ್ಲಿಕ್ ಮಾಡುವ ಮೂಲಕ.
EducationEntertainmentKarnataka News

ಭಾರತದಲ್ಲಿ PUBG ಬ್ಯಾನ್‌ ಆಗಿದ್ದರೂ ಇನ್ನೂ ಯಾಕೆ ಲಭ್ಯ..?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

ಕೆಲವೇ ಕೆಲವು ವರ್ಷಗಳ ಹಿಂದಿನ ಮಾತು, PUBG ಗೇಮ್ ಆಟದ ಹುಚ್ಚು ಪ್ರತಿಯೊಬ್ಬರಿಗೂ ಹತ್ತಿತ್ತು. PUBG ಹುಚ್ಚಾಟಕ್ಕೆ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವೇ ಬರ್ಬಾದ್ ಆಗಿ ಹೋಗಿತ್ತು. ಆ ಹುಚ್ಚು ಬಿಡಿಸಲೆಂದೇ ಸರ್ಕಾರ PUBG ಆಟವನ್ನ ಬ್ಯಾನ್ ಮಾಡಿತ್ತು. ಆದರೂ PUBG ಆಟ ಮಾತ್ರ ಇನ್ನುವರೆಗೂ ಮೊಬೈಲ್ಗಳಲ್ಲಿ ಲಭ್ಯವಾಗುತ್ತಿದೆ.

 

ಈಗ ಇದನ್ನೇ ಮಕ್ಕಳ ರಕ್ಷಣಾ ಆಯೋಗ ಪ್ರಶ್ನೆ ಮಾಡಿದೆ. PUBG ಆನ್ಲೈನ್ ವಿಡಿಯೋ ಗೇಮ್ ಭಾರತದಲ್ಲಿ ಏಕೆ ಲಭ್ಯ ಇದಕ್ಕೆ ಕಾರಣ ಕೊಡಿ ಅಂತ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಕೇಂದ್ರ ಸರ್ಕಾರದ ಹಿರಿಯ ಅಧಿಕಾಗಳನ್ನ ಕೇಳಿದೆ.

ಕೇಂದ್ರ ಸರ್ಕಾರವು PUBG ಮೊಬೈಲ್ ಮತ್ತು ಅದರ ಆವೃತ್ತಿ PUBG ಲೈಟ್ ಸೇರಿದಂತೆ 118 ಚೀನೀ ಅಪ್ಲಿಕೇಶನ್‌ಗಳನ್ನು ಸೆಪ್ಟೆಂಬರ್ 2, 2020ರಂದು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸುರಕ್ಷತೆಗೆ ಕಂಟಕ” ಎಂದು ಸರ್ಕಾರ ಆಗ ಹೇಳಿತ್ತು.

ಅಕ್ಟೋಬರ್ 30,2020 ರಂದು PUBG ತನ್ನ ಮೊಬೈಲ್ ಆವೃತ್ತಿಯನ್ನು ಇನ್ನು ಮುಂದೆ ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗುವುದಿಲ್ಲ ಎಂದು ಹೇಳಿತ್ತು. ಆದರೂ ಪಬ್‌ಜಿ ಮೊಬೈಲ್ ಗೇಮ್ ಭಾರತದಲ್ಲಿ ಲಭ್ಯವಾಗುತ್ತಿದೆ.

ಮಕ್ಕಳ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಪ್ರಿಯಾಂಕ್‌ ಕಾನೂಂಗೊ ಅವರು ತಮ್ಮ ಪತ್ರದಲ್ಲಿ, ಲಕ್ನೋದಲ್ಲಿ 16 ವರ್ಷದ ಬಾಲಕ ತನ್ನ ತಾಯಿ PUBG ಆಡಲು ಬಿಡಲಿಲ್ಲ ಅನ್ನುವ ಕಾರಣಕ್ಕೆ ಗುಂಡಿಕ್ಕಿ ಕೊಂದ ಹಾಕಿದ್ದ ಘಟನೆಯನ್ನ ಪ್ರಸ್ತಾಪಿಸಿ, PUBGಯನ್ನು ದೇಶದಲ್ಲಿ ಕಾನೂನುಬದ್ಧವಾಗಿ ನಿರ್ಬಂಧಿಸಿದ್ದರೂ ಆಟ ಏಕೆ ಲಭ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಅವರನ್ನು ಪ್ರಿಯಾಂಕ್ ಕೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US
ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ Independent journalism can't be independent without your support, contribute by clicking below. PLEASE DONATE-AND- SUPPORT US

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: