ತುರಮುರಿ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಹೆಬ್ಬಾಳಕರ್ ಚಾಲನೆ

ತುರಮುರಿ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಹೆಬ್ಬಾಳಕರ್ ಚಾಲನೆ
ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಚಾಲನೆ ನೀಡಿದರು.
ರಸ್ತೆಗಳ ಅಭಿವೃದ್ಧಿಯ ಸಲುವಾಗಿ 25 ಲಕ್ಷ ರೂ, ಬಿಡುಗಡೆಯಾಗಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಜೊತೆಗೆ,
ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಮಹಿಳೆಯರ ಕುಶಲೋಪರಿ ವಿಚಾರಿಸಿ, ಅವರ ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಸುಹಾಸ ಜಾಧವ್, ವೈಶಾಲಿ ಬಾಂಡೇಕರ್, ಶೋಭಾ ಸನದಿ, ಚಂದ್ರಕಾಂತ ಜಾಧವ್, ಮಾರುತಿ ಖಂಡೇಕರ್, ಜ್ಞಾನೇಶ್ವರ ಕೊರಡೆ, ಲಕ್ಷ್ಮೀ ಸುತಾರ, ನಾಗರಾಜ ಜಾಧವ್, ರಘುನಾಥ್ ಖಂಡೇಕರ್, ಜಾಂಗದೇವ್ ಬೆಳಗಾಂವ್ಕರ, ಸುರೇಶ ರಾಜ್ಕರ್, ಮಲ್ಲಪ್ಪ ತಂಗಿನಕರ್, ಬಾಳು ಅಷ್ಟೇಕರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.