
ಪ್ರಧಾನಿ ಮೋದಿಯವ್ರು ಮೊನ್ನೆ ತಮ್ಮ ತಾಯಿಯ ನೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬ್ಲಾಗ್ ಒಂದನ್ನ ಬರೆದಿದ್ರು. ಅದ್ರಲ್ಲಿ ನನ್ನ ತಂದೆಯ ಸ್ನೇಹಿತರೊಬ್ರು ಪಕ್ಕದ ಹಳ್ಳಿಯಲ್ಲಿ ವಾಸಿಸ್ತಿದ್ರು. ಅವ್ರು ಅಕಾಲಿಕವಾಗಿ ಸಾವನ್ನಪ್ಪಿದಾಗ, ನಮ್ಮ ತಂದೆ ಅವ್ರ ಸ್ನೇಹಿತನ ಮಗ ಅಬ್ಬಾಸ್‌ನನ್ನ ಮನೆಗೆ ಕರೆದುಕೊಂಡು ಬಂದ್ರು.
ಅಬ್ಬಾಸ್ ನಮ್ಮ ಜೊತೆಗೆ ಇದ್ದು ತಮ್ಮ ವಿಧ್ಯಾಭ್ಯಾಸ ಪೂರೈಸಿದ್ರು. ನಮ್ಮ ತಾಯಿ ನಮ್ಮಂತೆಯೇ ಅಬ್ಬಾಸ್‌ನನ್ನು ನೋಡ್ಕೊತಿದ್ರು, ಪ್ರತಿವರ್ಷ ಈದ್ ದಿನ ಅವ್ರ ಇಷ್ಟದ ತಿಂಡಿಗಳನ್ನ ಮಾಡ್ತಿದ್ರು ಅಂತ ಬರೆದಿದ್ರು. ಇದೀಗ ಅದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿಗಳು 8 ವರ್ಷದ ನಂತ್ರ ತಮ್ಮ ಬಾಲ್ಯದ ಗೆಳೆಯನನ್ನ ನೆನೆಸಿಕೊಂಡಿದ್ದಾರೆ. ನಮಗೆ ಇಷ್ಟು ದಿನ ಗೊತ್ತೇ ಇರ್ಲಿಲ್ಲ. ಪ್ರಧಾನಿಯವ್ರೇ ದಯವಿಟ್ಟು ನಿಮ್ಮ ಗೆಳೆಯ ಅಬ್ಬಾಸ್‌ರನ್ನ ಕರೆದು ಕೇಳಿ, ನೂಪುರ್ ಶರ್ಮಾ ಅವ್ರ ಹೇಳಿಕೆ ಆಕ್ಷೇಪಾರ್ಹವಾಗಿತ್ತೇ ಇಲ್ಲವೇ ಅಂತ ಹೇಳಿದ್ದಾರೆ.